ಸುಂಟಿಕೊಪ್ಪ, ಸೆ. ೧೭: ನಾಕೂರು ಶಿರಂಗಾಲ ಪಂಚಾಯಿತಿ ವ್ಯಾಪ್ತಿಯ ಆಶಾ ಕಾರ್ಯಕರ್ತೆಯಾಗಿ ಶಿವಮ್ಮ ಅವರು ಸೇವೆ ಸಲ್ಲಿಸುತ್ತಿದ್ದು ವಯೋನಿವೃತ್ತಿಗೊಂಡಿರುವ ಇವರನ್ನು ನಾಕೂರು ಗ್ರಾಮದ ಸಂಜೀವಿನಿ ಒಕ್ಕೂಟದ ಸ್ವ ಸಹಾಯ ಸಂಘದ ಸದಸ್ಯರುಗಳು ಸನ್ಮಾನಿಸಿ ಬೀಳ್ಕೊಟ್ಟರು.
ಕಳೆದ ೧೬ ವರ್ಷಗಳಿಂದ ನಾಕೂರು ಶಿರಂಗಾಲ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯಾಗಿ ಅತ್ಯುತ್ತಮ ಸೇವೆಯನ್ನು ಸಲ್ಲಿಸಿ ನಿವೃತ್ತಿ ಹೊಂದಿದ ಬಿ.ಎಸ್. ಶಿವಮ್ಮ ಅವರಿಗೆ ಸಂಜೀವಿನಿ ಒಕ್ಕೂಟದ ಬೆಳಕು ಮತ್ತು ಸಮುದ್ರ ಸಂಘದ ಸದಸ್ಯರುಗಳು ಉತ್ತಮ ಸೇವೆಯನ್ನು ಪರಿಗಣಿಸಿ ಗ್ರಾಮದಲ್ಲಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಂಜೀವಿನಿ ಒಕ್ಕೂಟದ ಎಂಬಿಕೆ ರಂಜಿನಿ, ಕೃಷಿಸಖಿ ಬ್ರಿಜಿತ್, ಸಂಘದ ಅಧ್ಯಕ್ಷರುಗಳಾದ ಎ.ಪಿ. ಮೀನಾಕ್ಷಿ, ಹೆಚ್.ಎ. ರಶ್ಮಿ, ಉಪಾಧ್ಯಕ್ಷರು ಹಾಗೂ ಸಂಘದ ಸದಸ್ಯರುಗಳು ಪಾಲ್ಗೊಂಡಿದ್ದರು.