ಶನಿವಾರಸಂತೆ, ಸೆ. ೧೭: ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿ-ಗುಳಿಗ ದೈವದ ಕ್ಷೇತ್ರದಲ್ಲಿ ಮಂಗಳವಾರ ಮಾಸಿಕ ಸಂಕ್ರಮಣ ವಿಶೇಷ ಪೂಜಾ ಕೈಂಕರ್ಯ ಶ್ರದ್ಧಾಭಕ್ತಿಯಿಂದ ನೆರವೇರಿತು.

ಅರ್ಚಕರಾದ ಪ್ರಕಾಶ್ಚಂದ್ರ ಸುವರ್ಣ ಹಾಗೂ ಸಂತೋಷ್ ಕರ್ಕೇರ ದೇವಿ ಮಾಗೂ ದೈವಕ್ಕೆ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿ, ಎಳನೀರು, ಹಣ್ಣುಕಾಯಿ, ಮಡ್ಲಕ್ಕಿ, ಪನಿವಾರ ಹಾಗೂ ನೈವೇದ್ಯ ಸಮರ್ಪಿಸಿ, ಪೂಜಾವಿಧಿ ನೆರವೇರಿಸಿದರು. ಮಹಾಮಂಗಳಾರತಿಯಾಗಿ ತೀರ್ಥ-ಪ್ರಸಾದ ವಿನಿಯೋಗವಾಯಿತು. ಪೂಜಾ ಕಾರ್ಯಕ್ರಮದಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.