ಕುಶಾಲನಗರ, ಸೆ. ೧೭: ಭಾರತದ ಮೊದಲ ಮಹಿಳಾ ಸ್ವಾತಂತ್ರ‍್ಯ ಹೋರಾಟಗಾರ್ತಿ, ವೀರರಾಣಿ ಅಬ್ಬಕ್ಕ ಅವರ ೫೦೦ನೇ ಜಯಂತಿ ಅಂಗವಾಗಿ ಕುಶಾಲನಗರದಲ್ಲಿ ರಥಯಾತ್ರೆ ನಡೆಯಿತು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಶಾಲನಗರ ಆಂಜನೇಯ ದೇವಾಲಯದಿಂದ ರಾಣಿ ಅಬ್ಬಕ್ಕ ಅವರ ಪ್ರತಿಮೆಯೊಂದಿಗೆ ರಥಬೀದಿ ಮೂಲಕ ನೂರಾರು ಸಂಖ್ಯೆಯ ಎ.ಬಿ.ವಿ.ಪಿ. ಕಾರ್ಯಕರ್ತರು ಮೆರವಣಿಗೆಯಲ್ಲಿ ಆಗಮಿಸಿ ಕುಶಾಲನಗರ ಕಾರು ನಿಲ್ದಾಣ ಆವರಣದಲ್ಲಿ ಸರಳ ಕಾರ್ಯಕ್ರಮ ನಡೆಯಿತು.

ರಾಣಿ ಅಬ್ಬಕ್ಕ ಅವರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸುವುರೊಂದಿಗೆ ಆರಂಭ ವಾದ ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಕಾರ್ಯದರ್ಶಿ ಪ್ರವೀಣ್ ಎಚ್. ಕೆ. ಮಾತನಾಡಿದರು.

ಪ್ರಮುಖರಾದ ಜಿ. ಎಲ್. ನಾಗರಾಜ್ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಎಬಿವಿಪಿ ಪ್ರಮುಖರಾದ ಗಂಧರ್ವ ರೋಹಿತ್ ನವನೀತ್ ಪೊನ್ನಟ್ಟಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬಿಜೆಪಿ, ಹಿಂದೂಪರ ಸಂಘಟನೆಗಳ ಪ್ರಮುಖರು ಮೆರವಣಿಗೆಯಲ್ಲಿ ಪಾಲ್ಗೊಂಡು ಅಬ್ಬಕ್ಕ ಅವರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಿದರು.