ಸಿದ್ದಾಪುರ, ಸೆ. ೧೭ : ಕುಶಾಲನಗರ ಅರಣ್ಯ ವ್ಯಾಪ್ತಿಯ ತ್ಯಾಗತ್ತೂರು ಗ್ರಾಮದಲ್ಲಿ ಕಾವೇರಿ ನದಿಯಲ್ಲಿ ಕಾಡಾನೆಯೊಂದರ ಮೃತದೇಹ ಬುಧವಾರ ಪತ್ತೆಯಾಗಿದೆ. ತ್ಯಾಗತ್ತೂರು ಗ್ರಾಮದ ನಿವಾಸಿ ಮುಂಡ್ರುಮನೆ ಸುದೇಶ್ ಎಂಬವರ ಗದ್ದೆಯ ಸಮೀಪವಿರುವ ಕಾವೇರಿ ನದಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಈ ಕುರಿತು ಮಾಹಿತಿ ನೀಡಿದ ಕುಶಾಲನಗರ ವಲಯ ಅರಣ್ಯ ಅಧಿಕಾರಿ ರಕ್ಷಿತ್ ಅವರು ಬುಧವಾರ ಮಧ್ಯಾಹ್ನ ಎರಡು ಗಂಟೆಗೆ ಕಾವೇರಿ ನದಿಯಲ್ಲಿ ಕಾಡಾನೆಯ ಮೃತದೇಹ ಕಂಡು ಬಂದಿದ್ದು, ಈ ಬಗ್ಗೆ ತಾ. ೧೮ರಂದು ಇಂದು ಮೇಲಾಧಿಕಾರಿಗಳ ಸಮ್ಮುಖದಲ್ಲಿ ಕಾವೇರಿ ನದಿಯಿಂದ ಆನೆಯ ಮೃತದೇಹವನ್ನು ಮೇಲೆತ್ತಿ ವನ್ಯಜೀವಿ ವೈದ್ಯಾಧಿಕಾರಿ ಡಾ. ಮುಜೀಬ್ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕಾಡಾನೆ ಸಾವಿಗೆ ಕಾರಣವೇನೆಂದು ಪತ್ತೆ ಹಚ್ಚಲಾಗುವುದು.

ಕಾಡಾನೆಯ ಮೃತದೇಹ ಕಂಡುಬAದ ಜಾಗದಲ್ಲಿ ಕಾವಲಿಗಾಗಿ ಅರಣ್ಯ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ರಕ್ಷಿತ್ ತಿಳಿಸಿದರು. -ವಾಸು