ಗೋಣಿಕೊಪ್ಪಲು, ಸೆ. ೧೭: ಗೋಣಿಕೊಪ್ಪಲಿನ ಸರ್ವ ದೈವತಾ ವಿದ್ಯಾ ಸಂಸ್ಥೆಯಲ್ಲಿ, ರೋಟರಿ ಕ್ಲಬ್ ಗೋಣಿಕೊಪ್ಪಲು ಇವರ ವತಿಯಿಂದ ಸರ್ವದೈವತಾ ಇಂಟರಾಕ್ಟ್ ಕ್ಲಬ್‌ನ ೨೦೨೫-೨೬ನೇ ಸಾಲಿನ ಪದಗ್ರಹಣ ಸಮಾರಂಭ ನಡೆಯಿತು. ಅಧ್ಯಕ್ಷರಾಗಿ ಸಮರ್ಥ್ ಎಸ್.ಬಿ ಹಾಗೂ ಕಾರ್ಯದರ್ಶಿಯಾಗಿ ದೀಪ್ತಿ ಕೆ.ಈ. ಇವರು ಆಯ್ಕೆಗೊಂಡಿದ್ದಾರೆ. ರೋಟರಿ ಕ್ಲಬ್ ಅಧ್ಯಕ್ಷ ರೊಟೇರಿಯನ್ ವಿಜಯ್ ಪಿ.ಆರ್ ಪ್ರಮಾಣವಚನ ಸ್ವೀಕರಿಸಿದರು. ಮುಖ್ಯ ಅತಿಥಿಯಾಗಿ ಝೋನ್ ೬ ರಾಜ್ಯಪಾಲರಾದ ಪಾರುವಂಗಡ ದಿಲನ್ ಚಂಗಪ್ಪ ಮಾತನಾಡಿದರು. ನಾಯಕತ್ವದ ಗುಣ ಬೆಳೆಸುವುದು ರೋಟರಿ ಸಂಸ್ಥೆಯ ಮುಖ್ಯ ಉದ್ದೇಶ, ಸಂಸ್ಥೆಯು ಕೈಗೊಳ್ಳುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಒದಗಿಸಿದರು.

ವೇದಿಕೆಯಲ್ಲಿ ರೋಟರಿ ಕ್ಲಬ್ ಗೋಣಿಕೊಪ್ಪಲಿನ ಕಾರ್ಯದರ್ಶಿ ಪ್ರಮೋದ್ ಕಾಮತ್, ಸರ್ವದೈವತಾ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರಾದ ಪೊನ್ನಿಮಾಡ ಪ್ರದೀಪ್, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಮನೆಯಪಂಡ ಶೀಲಾ ಬೋಪಣ್ಣ, ಶಾಲಾ ಸಂಚಾಲಕಿ ಹೆಮ್ಮಚ್ಚಿಮನೆ ಧರಣಿ, ನಿಕಟಪೂರ್ವ ಅಧ್ಯಕ್ಷರಾದ ಪ್ರೀತಲ್ ಕೆ.ಆರ್. ಹಾಗೂ ಕಾರ್ಯದರ್ಶಿ ಮಂಥನ್ ಮಂದಣ್ಣ. ಕೆ. ಎಚ್. ಉಪಸ್ಥಿತರಿದ್ದರು.