ಹೆಬ್ಬಾಲೆ, ಸೆ. ೧೭: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೪-೨೫ನೇ ಸಾಲಿನಲ್ಲಿ ಉತ್ತಮವಾಗಿ ಕಾರ್ಯ ಚಟುವಟಿಕೆ ನಡೆಸಿದ್ದು, ರೂ.೯.೫ ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಚ್.ಟಿ. ಮೋಹನ್ ಹೇಳಿದರು.

ಹೆಬ್ಬಾಲೆ ಬನಶಂಕರಿ ಸಮುದಾಯ ಭವನದ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಹೆಬ್ಬಾಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಸಂಘದ ಬೆಳವಣಿಗೆಗೆ ಸಹಕಾರ ನೀಡಬೇಕು. ಸಂಘದ ಏಳಿಗೆಗೆ ಸರ್ವ ಸದಸ್ಯರ ಸಹಕಾರ ತುಂಬ ಅಗತ್ಯ ಎಂದರು. ಸಹಕಾರಿ ಕಾನೂನು ಪ್ರಕಾರ ಒಂದು ಆಡಳಿತ ಅವಧಿಯ ಕನಿಷ್ಠ ಮೂರು ಮಹಾಸಭೆಗಳಿಗೆ ಸದಸ್ಯರು ಹಾಜರಾಗುವುದು ಕಡ್ಡಾಯ. ತಪ್ಪಿದಲ್ಲಿ ಸದರಿ ಸದಸ್ಯತ್ವ ತಟಸ್ಥವಾಗುವುದು ಎಂದು ಹೇಳಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಗಿರೀಶ್ ಮಾತನಾಡಿ, ಸಂಘದ ಕ್ಷೇಮ ನಿಧಿಗೆ ರೂ. ೮೭,೭೨೦, ಶಿಕ್ಷಣ ನಿಧಿಗೆ ರೂ.೫೨೬೩, ಡೆಡ್ ಸ್ಟಾಕ್ ಸವಕಳಿ ನಿಧಿಗೆ ರೂ. ೨೫೫೩, ಮುಳುಗುವ ಸಾಲ ನಿಧಿಗೆ ರೂ. ೨೫೫೩, ಕಟ್ಟಡ ನಿಧಿಗೆ ರೂ. ೧೬,೧೪೫, ಸಿಬ್ಬಂದಿ ಕಲ್ಯಾಣ ನಿಧಿಗೆ ರೂ. ೪೭೦೪, ಸಿಬ್ಬಂದಿ ಬೊನಸ್ಸು ನಿಧಿಗೆ ರೂ. ೧,೨೮,೪೦೦, ಸದಸ್ಯರಿಗೆ ಡಿವಿಡೆಂಡ್ ರೂ. ೧,೦೦,೯೮೭ ಕಾಯ್ದಿರಿಸಲಾಗಿದೆ ಎಂದರು. ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿ ಅನುಮೋದನೆ ಪಡೆದರು.

ಸಂಘದ ಉಪಾಧ್ಯಕ್ಷೆ ಸರೋಜಮ್ಮ, ನಿರ್ದೇಶಕರಾದ ಎಚ್.ಎಸ್. ಅಂಬಿಕಾ, ಎಚ್.ಎಸ್. ಕೇಶವ, ಎಚ್.ಟಿ. ನಾರಾಯಣ, ಎಚ್.ಆರ್. ಪ್ರದೀಪ್ ಕುಮಾರ್, ಎಚ್.ಎನ್. ಮಹಾದೇವ, ಎಂ.ಎA. ಮಹಾದೇವ, ಎಚ್.ಆರ್. ಮಣಿಕಂಠ, ಎಚ್.ಜೆ. ರವಿ., ಹೆಚ್.ಎಸ್ .ಶರತ್ ಕುಮಾರ್, ಎಚ್.ವಿ. ಸೋಮಶೇಖರ್, ಮೇಲ್ವಿಚಾರಕಿ ಎಂ.ಕೆ. ಗೀತಾ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಭರತ್ ಪಾಲ್ಗೊಂಡಿದ್ದರು.

ಸಭೆಯ ಮೊದಲಿಗೆ ನಡೆದ ಚರ್ಚೆಯಲ್ಲಿ ಸಂಘದ ಕೆಲವು ಲೋಪದೋಷಗಳನ್ನು ನೆರೆದಿದ್ದ ಸದಸ್ಯರುಗಳು ಪ್ರಸ್ತಾಪಿಸಿದಾಗ ಸ್ವಲ್ಪ ಗೊಂದಲ ಉಂಟಾದರೂ ಸಂಘದ ಅಧ್ಯಕ್ಷರು ಸಮರ್ಪಕವಾದ ಉತ್ತರವನ್ನು ನೀಡಿ ಸಮಸ್ಯೆಯನ್ನು ತಿಳಿಗೊಳಿಸಿದರು.

ಸದಸ್ಯರಾದ ಜಯಂತಿ, ಎಚ್.ಟಿ. ದಿನೇಶ್, ಶಿವರಾಮ್, ಮಧುಸೂದನ್, ಪರಮೇಶ್, ಪ್ರಭಾಕರದ, ಗಣೇಶ್, ಮೋಹನ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ನಂತರ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ ವಿತರಿಸಲಾಯಿತು.