ಸೋಮವಾರಪೇಟೆ, ಸೆ. ೧೭: ಸಮೀಪದ ಶಾಂತಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭದ ನೆನಪಿಗಾಗಿ ಹೊರ ತಂದಿರುವ ‘ಶತಕದ ಅಂತರAಗ’ ಸ್ಮರಣ ಸಂಚಿಕೆ ವಿತರಣೆ ಕಾರ್ಯಕ್ರಮ, ಶ್ರೀ ಕುಮಾರಲಿಂಗೇಶ್ವರ ದೇವಾಲಯ ಆವರಣದಲ್ಲಿ ನಡೆಯಿತು.

ಮಾಜಿ ಎಂ.ಎಲ್.ಸಿ. ಎಸ್.ಜಿ. ಮೇದಪ್ಪ, ಸರ್ಕಾರಿ ಶಾಲಾ ಮುಖ್ಯೋಪಾಧ್ಯಾಯ ಪರಮೇಶ್ವರ ಸ್ವಾಮಿ, ಉಡುಪಿಯ ಮಹೇಶ್ ಶೆಣೈ, ಹಿರಿಯ ಸಾಹಿತಿ ಜಲಾ ಕಾಳಪ್ಪ, ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಕೆ.ಎಸ್. ರಾಮಚಂದ್ರ, ಕೆ.ಟಿ. ರಾಜಶೇಖರ್, ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷ ಕೃಷ್ಣಕುಮಾರ್, ಮನೋಹರ್, ಕೆ.ಸಿ. ಗುರುಪ್ರಸಾದ್, ಜಿ.ಡಿ. ಬಸವರಾಜು, ಪ್ರೇಮ್‌ಸಾಗರ್, ಜಿ.ಪಂ. ಅಭಿಯಂತರ ವೀರೇಂದ್ರ, ಜಿ.ಪಂ. ಮಾಜಿ ಸದಸ್ಯ ಹೆಚ್.ಎಸ್. ವೆಂಕಪ್ಪ, ನಿವೃತ್ತ ಶಿಕ್ಷಕ ಚಾವಾಡಿಮನೆ ಶಿವಕುಮಾರ್, ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್, ಗ್ರಾ.ಪಂ. ಅಧ್ಯಕ್ಷೆ ಸವಿತ ವಿಜಯ್, ಶಿಕ್ಷಕರುಗಳಾದ ಬಿ.ಎ. ಸಂತೋಷ್, ಜಯಮ್ಮ ಸೇರಿದಂತೆ ಇತರರು ಇದ್ದರು.