ವೀರಾಜಪೇಟೆ, ಸೆ. ೧೭: ವೀರಾಜಪೇಟೆ ವ್ಯಾಪ್ತಿಯ ಪುನರ್ವಿಂಗಡಣೆ ಗೊಂಡಿರುವ ೨೩ ವಾರ್ಡ್ಗಳಲ್ಲಿ ಕೆಲವು ವಾರ್ಡ್ಗಳು ಅವೈಜ್ಞಾನಿಕವಾಗಿದ್ದು ಸ್ಥಳಿಯ ಜನಪ್ರತಿನಿಧಿಗಳು ಮತ್ತು ಸ್ಥಳಿಯ ಅಧಿಕಾರಿಗಳು ಸೇರಿ ಮುಂದಿನ ಚುನಾವಣೆಗೆ ಅನುಕೂವಾಗುವಂತೆ ವಾರ್ಡ್ ವಿಂಗಡಣೆ ಮಾಡಿಕೊಳ್ಳಲಾಗಿದೆ. ಇದನ್ನು ಜಿಲ್ಲಾಧಿüಕಾರಿಗಳು ಗಂಭೀರವಾಗಿ ಪರಿಶೀಲಿಸಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಗೌರಿಕೆರೆ ವಾರ್ಡ್ ಸದಸ್ಯ ಸಿ.ಕೆ. ಪೃಥ್ವಿನಾಥ್ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಕಳೆದ ೩೦ ವರ್ಷಗಳಿಂದ ಗೌರಿಕೆರೆ ವಾರ್ಡ್ ಅಸ್ತಿತ್ವದಲ್ಲಿದ್ದು, ಈ ವಾರ್ಡ್ನ್ನು ಕಾನೂನು ಬಾಹಿರವಾಗಿ ಮರು ವಿಂಗಡಣೆ ಮಾಡಿದ್ದಾರೆ. ಈ ಹಿಂದೆ ಪಟ್ಟಣ ಪಂಚಾಯಿತಿ ಆಗಿದ್ದಂತಹ ಸಂದರ್ಭದಲ್ಲಿ ಗೌರಿಕೆರೆ ವಾರ್ಡ್ ನಂ. ೧೪ ರಲ್ಲಿ ಜನಸಂಖ್ಯೆ ಸರಾಸರಿ ೧೨೦೦ ಒಳಗೊಂಡAತೆ ಮತ್ತು ಈ ವಾರ್ಡ್ನ ಮತದಾರರು ೭೫೦ ಆಗಿರುತ್ತಾರೆ. ಆದರೆ ಇತ್ತೀಚಿನ ಮರು ವಿಂಗಡಣೆ ಸಂದರ್ಭದಲ್ಲಿ ವಾರ್ಡ್ ಸಂಖ್ಯೆ: ೧೯ ಎಂದು ನಮೂದಿಸಿದ್ದು, ಇದಕ್ಕೆ ಪಕ್ಕದ ವಾರ್ಡ್ ಗಾಂಧಿನಗರ ವಾರ್ಡ್ ಸಂಖ್ಯೆ: ೨೦ ರ ಅರ್ಧ ಭಾಗವನ್ನು ಸೇರಿಸಲಾಗಿದ್ದು, ಸುಮಾರು ೧೦೦೦ ಜನಸಂಖ್ಯೆ ಹಾಗೂ ೬೫೯ ಮತದಾರರನ್ನು ಗೌರಿಕೆರೆ ವಾರ್ಡ್ಗೆ ಸೇರಿಸಲಾಗಿದೆ. ಗಾಂಧಿನಗರದ ಅರ್ಧ ಭಾಗ ಗೌರಿಕೆರೆ ವಾರ್ಡ್ಗೆ ಸೇರಿರುವುದರಿಂದ ೨೨೦೦ ಜನಸಂಖ್ಯೆ ಹಾಗೂ ಒಟ್ಟು ಮತದಾರರ ಸಂಖ್ಯೆ: ೧೪೦೦ ರಷ್ಟು ಏರಿಕೆಯಾಗಿದೆ.
ಇದು ಕರ್ನಾಟಕ ರಾಜ್ಯ ಸರ್ಕಾರದ ಪತ್ರದ ಆದೇಶ ೧೫/೨೦೧೪ ರ ಆಧಾರವಾಗಿ ಮಾಡಬೇಕಾಗಿದೆ ಹಾಗೂ ಹಾಲಿ ಇರುವ ವಾರ್ಡ್ನ್ನು ಕೇವಲ ೨೫ ರಿಂದ ಶೇ.೩೦ ರಷ್ಟು ಬದಲಾವಣೆ ಮಾಡಲು ಅವಕಾಶ ಇರುತ್ತದೆ. ಪುರಸಭೆ ಕೆಲವು ಸಿಬ್ಬಂದಿಗಳು ಹಾಗೂ ಪುರಸಭೆಯ ಹಾಲಿ ಸದಸ್ಯರುಗಳ ಆಮೀಷಕ್ಕೆ ಒಳಗಾಗಿ ಅಧಿಕಾರಿಗಳು ಕೆಲವು ಸದಸ್ಯರುಗಳಿಗೆ ಅನುಕೂಲ ಮಾಡಿಕೊಟ್ಟಿರುವುದು ಕಂಡು ಬಂದಿರುತ್ತದೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಂಡು ಈ ವಾರ್ಡ್ ಮರು ವಿಂಗಡಣೆಯನ್ನು ತಡೆ ಹಿಡಿದು ಪುನರ್ಪರಶೀಲನೆ ಮಾಡಿ ಸಾರ್ವಜನಿಕರಿಗೆ ನ್ಯಾಯ ಒದಗಿಸಿ ಕೊಡುವಂತೆ ಮನವಿ ಮಾಡಿದ್ದಾರೆ.