ಸೋಮವಾರಪೇಟೆ, ಸೆ. ೧೭: ಇಲ್ಲಿನ ಅಕ್ಷಯ ಮಹಿಳಾ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ, ಸಂಘದ ಅಧ್ಯಕ್ಷೆ ಬೇಬಿ ಚಂದ್ರಹಾಸ್ ಅಧ್ಯಕ್ಷತೆಯಲ್ಲಿ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.

ಪ್ರಸಕ್ತ ಸಾಲಿನಲ್ಲಿ ಸಂಘ ರೂ. ೯.೧೬ ಲಕ್ಷ ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ. ೮ ಲಾಭಾಂಶ ವಿತರಿಸುವಂತೆ ಸಭೆ ತೀರ್ಮಾನಿಸಿತು. ಸಂಘದ ಅಧ್ಯಕ್ಷರು ಮಾತನಾಡಿ, ವರದಿ ಸಾಲಿನಲ್ಲಿ ಸಂಘಕ್ಕೆ ೬೪ ನೂತನ ಸದಸ್ಯರು ಸೇರ್ಪಡೆಗೊಂಡಿದ್ದಾರೆ. ಒಟ್ಟು ೧೯೫೧ ಸದಸ್ಯರಿದ್ದು, ರೂ. ೫೩.೩೮ ಲಕ್ಷ ಪಾಲು ಬಂಡವಾಳವಿರುತ್ತದೆ ಎಂದರು.

ಸದಸ್ಯರಿAದ ಠೇವಣಿ ಸಂಗ್ರಹ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಪಿಗ್ಮಿ ಸೇರಿದಂತೆ ಸಂಗ್ರಹವಾದ ಹಣವನ್ನು ವಿವಿಧ ಸಾಲಗಳ ರೂಪದಲ್ಲಿ ನೀಡಲಾಗಿದ್ದು, ಶೇ. ೯೭.೫೨ರಷ್ಟು ಸಾಲ ವಸೂಲಾತಿಯಾಗಿದೆ. ಮುಂದಿನ ದಿನಗಳಲ್ಲಿ ಸದಸ್ಯರು ಇನ್ನೂ ಹೆಚ್ಚಿನ ಠೇವಣಿಯನ್ನು ಸಂಘದಲ್ಲಿರಿಸಿ ಹೆಚ್ಚಿನ ವ್ಯವಹಾರ ನಡೆಸಬೇಕೆಂದು ಮನವಿ ಮಾಡಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಉಮಾ ರುದ್ರಪ್ರಸಾದ್, ನಿರ್ದೇಶಕರುಗಳಾದ ಜಲಜಾ ಶೇಖರ್, ಲೋಕೇಶ್ವರಿ ಗೋಪಾಲ್, ಕವಿತಾ ವಿರೂಪಾಕ್ಷ, ವಿದ್ಯಾ ಸೋಮೇಶ್, ವರಲಕ್ಷಿö್ಮÃ ಸಿದ್ಧೇಶ್ವರ್, ಚಂದ್ರಾವತಿ ಶಾಂತಪ್ಪ, ಗೀತಾ ರಾಜು, ಮಂಜುಳಾ ಅರುಣ್‌ಕುಮಾರ್, ಕೆ. ಜೀತಾಶ್ರೀ, ಎಚ್.ಬಿ. ಮೀನಾಕ್ಷಿ, ಎಚ್.ಎಂ. ರಂಜಿತ ಹಾಗೂ ಕಾರ್ಯನಿರ್ವಹಣಾಧಿಕಾರಿ ಎಸ್.ಎ. ಪೃಥ್ವಿ ಚಂದ್ರಶೇಖರ್ ಇದ್ದರು.

ಇದೇ ಸಂದರ್ಭ ಸಂಘದ ಹಿರಿಯ ಸದಸ್ಯರಾದ ಸುಮಾ ಸುದೀಪ್, ಶಾಂತಲಾ ದೇವೇಂದ್ರ ಹಾಗೂ ವಸಂತಿ ಲೀಲಾರಾಮ್ ಅವರುಗಳನ್ನು ಸನ್ಮಾನಿಸಲಾಯಿತು.