ಮಡಿಕೇರಿ, ಸೆ. ೧೬: ಮಡಿಕೇರಿಯ ಸÀಂತ ಮೈಕಲರ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಇತ್ತೀಚೆಗೆ ಆಚರಿಸಲಾಯಿತು. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ವಿದ್ಯಾಸಂಸ್ಥೆಯ ಸಂಚಾಲಕರಾದ ಗುರು ಸಂಜಯ್ ಕುಮಾರ್ ಅವರು ಮಾತನಾಡಿ, ಶಿಕ್ಷಕರ ಶ್ರಮವನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳ ಏಳಿಗೆಯಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣ ಅತಿ ಅವಶ್ಯಕ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗುರುಗಳಾದ ಪೀಟರ್ ಅವರು ಮಾತನಾಡಿ, ವಿವಿಧ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವಾತಾವರಣ ಸೃಷ್ಟಿಸಬೇಕೆಂದರು.

ನAತರ ಶಿಕ್ಷಕರಿಗೆ ಮಾರ್ಗದರ್ಶನ ಕಾರ್ಯಕ್ರಮ ಹಾಗೂ ವಿವಿಧ ಆಟಗಳು ನೆರವೇರಿತು.

ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ಮೂಡಿಬಂತು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಪಂಕಜ ಎಂ.ಎ, ಪ್ರೌಢ ಶಾಲಾ ಮೂಖ್ಯೋಪಾಧ್ಯಾಯರಾದ ಜೆಫ್ರಿ ಡಿಸಿಲ್ವಾ, ಪ್ರಾಥಮಿಕ ವಿಭಾಗದ ಕನ್ನಡ ಹಾಗೂ ಆಂಗ್ಲ ಮಾಧ್ಯಮ ವಿಭಾಗಗಳ ಮುಖ್ಯೋಪಾಧ್ಯಾಯಿನಿಯರಾದ ಸಿಸ್ಟರ್ ಸಿಸಿಲಿಯಾ ಹಾಗೂ ಸಿಸ್ಟರ್ ಸರಿತಾ ಮಾರ್ಥಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕರಾದ ವಿಲ್ಮಾ ಡಿಸೋಜಾ ನಿರೂಪಿಸಿದರು. ಪೂವಮ್ಮ ಸ್ವಾಗತಿಸಿದರು. ಶ್ವೇತಾ ಸಿ.ಸಿ ವಂದಿಸಿದರು.