ವೀರಾಜಪೇಟೆ, ಸೆ. ೧೬: ವೀರಾಜ ಪೇಟೆ ವಾರ್ಡ್ ನಂಬರ್-೭ರ ಮೊಗರಗಲ್ಲಿಯಲ್ಲಿ ಪುರಸಭೆ ವತಿಯಿಂದ ರಸ್ತೆಯ ಎರಡು ಬದಿಗಳಲ್ಲಿ ಸ್ವಚ್ಛತಾ ಕಾರ್ಯ ಹಾಗೂ ನಿರುಪಯುಕ್ತ ವಸ್ತುಗಳನ್ನು ತೆರವುಗೊಳಿಸುವ ಕಾರ್ಯ ನಡೆಯಿತು.

ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ ನೇತೃತ್ವದಲ್ಲಿ, ಪೌರಕರ್ಮಿಕರು ರಸ್ತೆ ಬದಿಗಳಲ್ಲಿ ಬೆಳೆದಿದ್ದ ಗಿಡ-ಗಂಟಿಗಳನ್ನು ಕಡಿದು ಸ್ವಚ್ಛ ಮಾಡಿದರು.

ಹಲವು ವರ್ಷಗಳಿಂದ ರಸ್ತೆಬದಿಯಲ್ಲಿಯೇ ನಿಲ್ಲಿಸಿದ್ದ ವಾಹನಗಳನ್ನು ಕೂಡ ಈ ಸಂದರ್ಭ ತೆರವು ಮಾಡಲಾಯಿತು. ತೆರವು ಮಾಡಿದ ವಾಹನಗಳನ್ನು ನಗರ ಪೊಲೀಸ್ ಠಾಣೆಗೆ ಒಪ್ಪಿಸಲಾಯಿತು. ಬಳಿಕ ಕಸ ಹಾಗೂ ನಿರುಪಯುಕ್ತ ವಸ್ತುಗಳನ್ನು ಪುರಸಭೆಯ ಕಸ ಸಂಗ್ರಹ ವಾಹನಗಳಲ್ಲಿ ತುಂಬಿ ಕಸ ವಿಲೇವಾರಿ ಸ್ಥಳಕ್ಕೆ ತೆಗೆದುಕೊಂಡು ಹೋಗಿ ವಿಲೇವಾರಿ ಮಾಡಲಾಯಿತು.

ಈ ಸಂದರ್ಭ ಪುರಸಭೆಯ ಮುಖ್ಯ ಅಧಿಕಾರಿ ಪಿ.ಕೆ. ನಾಚಪ್ಪ, ಪರಿಸರ ಅಭಿಯಂತರರಾದ ರೀತು ಸಿಂಗ್, ಪ್ರಬಾರ ಆರೋಗ್ಯ ನಿರೀಕ್ಷಕರಾದ ಕೋಮಲ, ಸೇರಿದಂತೆ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.