*ಗೋಣಿಕೊಪ್ಪ, ಸೆ. ೧೬: ಕೂರ್ಗ್ ಸೈಕ್ಲೋನ್ ಡಾನ್ಸ್ ಇನ್ಸ್ಟಿಟ್ಯೂಟ್ ಜನವರಿಯಲ್ಲಿ ಆಯೋಜಿಸುತ್ತಿರುವ ರಾಷ್ಟ್ರೀಯ ನೃತ್ಯ ಸ್ಪರ್ಧೆಯ ಲಾಂಛನ ಅನಾವರಣಗೊಳಿಸಲಾಯಿತು.

ಗೋಣಿಕೊಪ್ಪ ದುರ್ಗಾ ಬೋಜಿ ಸಭಾಂಗಣದಲ್ಲಿ, ನಡೆದ ಸಂಸ್ಥೆಯ ಹದಿನೈದನೆಯ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಲಾಂಛನವನ್ನು ಸಿನಿಮಾ ನಟ ಡ್ಯಾನಿ ಅನಾವರಣಗೊಳಿಸಿದರು.

ಸೈಕ್ಲೋನ್ ಸಂಸ್ಥೆಯ ಶಿಕ್ಷಕ ರಮೇಶ್ ಮುಂದಾಳತ್ವದಲ್ಲಿ ನಡೆದ ಲಾಂಛನ ಅನಾವರಣದಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಗಣಪತಿ, ಸದಸ್ಯ ಬಿ.ಎನ್. ಪ್ರಕಾಶ್, ದಸರಾ ಸಮಿತಿಯ ಕಾರ್ಯಕ್ರಮ ಸಂಯೋಜಕ ಚಂದನ್ ಕಾಮತ್, ಮನೆಯಪಂಡ ಶೀಲಾ ಬೋಪಣ್ಣ, ನಿವೃತ್ತ ಸೈನಿಕ ಸೋಮಯ್ಯ ಕೂರ್ಗ್ ಪಬ್ಲಿಕ್ ಸ್ಕೂಲ್ ವ್ಯವಸ್ಥಾಪಕ ಸೋಮಯ್ಯ, ಡಾ. ಸೌಮ್ಯಾ, ಗಣೇಶ್ ರೈ ಇದ್ದರು.