ಕೂಡಿಗೆ, ಸೆ. ೧೬: ಕೂಡಿಗೆ - ಕುಶಾಲನಗರ-ಹಾಸನ ರಾಜ್ಯ ಹೆದ್ದಾರಿ ರಸ್ತೆಯ ಮರು ಡಾಂಬರೀಕರಣದ ಕಾಮಗಾರಿ ನಡೆಸಲು ಸಿದ್ದತೆ ನಡೆಯುತ್ತಿದ್ದು, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕುಶಾಲನಗರ ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹೆಚ್.ಎಸ್ ಕುಮಾರ್, ಇಂಜಿನಿಯರ್ ಆಬಾರ್ಜ್, ಕೂಡುಮಂಗಳೂರು ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಸಣ್ಣಪ್ಪ, ಬಿ.ಎಸ್.ಆರ್. ಸಂಸ್ಥೆಯ ಇಂಜಿನಿಯರ್ ಶಶಿಕಿರಣ್, ಸೇರಿದಂತೆ ಗ್ರಾಮಸ್ಥರು, ಸಾರ್ವಜನಿಕರು ಇದ್ದರು.