ಗುಡ್ಡೆಹೊಸೂರು, ಸೆ. ೧೬: ಇಲ್ಲಿಗೆ ಸಮೀಪದ ಅತ್ತೂರಿನ ಅಂಗನವಾಡಿ ಕೇಂದ್ರದಲ್ಲಿ ಕುಶಾಲನಗರ ತಾಲೂಕು ಆರೋಗ್ಯ ಅಧಿಕಾರಿಗಳ ಕಛೇರಿ ಮತ್ತು ಕುಶಾಲನಗರ ಶಿಶು ಅಭಿವೃದ್ದಿ ಯೋಜನಾ ಇಲಾಖೆ ವತಿಯಿಂದ ನೇತ್ರದಾನ ಪಾಕ್ಷಿಕ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಅವರು ಮಾತನಾಡಿ, ಒಂದು ನೇತ್ರದಾನದಿಂದ ಇಬ್ಬರು ಕಾರ್ನಿಯ ಅಂಧತ್ವ ಹೊಂದಿರುವವರಿಗೆೆ ಪ್ರಯೋಜನವಾಗುತ್ತದೆ. ಮರಣ ನಂತರ ಕಣ್ಣುಗಳನ್ನು ದಾನ ಮಾಡಿ ಕುಟುಂಬ ಮತ್ತು ಸ್ನೇಹಿತರಿಗೂ ಮಾಹಿತಿ ನೀಡಿ ಎಂದು ಕರೆ ಕೊಟ್ಟರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೇಶಿನಿ ಮತ್ತು ಮಮತಾ, ಮಹಿಳಾ ಸಬಲೀಕರಣ ಬಗ್ಗೆ ಮಾಹಿತಿ ನೀಡಿದರು. ಅಂಗನವಾಡಿ ಕಾರ್ಯಕರ್ತೆ ಜ್ಯೋತಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಶಾಲಾ ಶಿಕ್ಷಕರಾದ ಗೋವಿಂದರಾಜು ಹಾಗೂ ಸಿ.ಎಚ್.ಓ ಸೌಮ್ಯ, ಆಶಾ ಕಾರ್ಯಕರ್ತೆ ನಾಗರತ್ನ ಹಾಜರಿದ್ದರು.