ವೀರಾಜಪೇಟೆ, ಸೆ. ೧೬ : ದ.ಕೊಡಗಿನ ವಿವಿಧ ಭಾಗಗಳಲ್ಲಿ ಗೋವು ಕಳ್ಳತನ ಮತ್ತು ಮಾಂಸಕ್ಕಾಗಿ ಗೋವುವನ್ನು ಹತ್ಯೆಗೈಯುತ್ತಿರುವ ಪ್ರಕರಣಗಳಿಗೆ ಸಂಬAಧಿಸಿದAತೆ ಪೊಲೀಸ್ ಇಲಾಖೆ ಕಠಿಣ ಕಾನೂನು ಜಾರಿಗೊಳಿಸಬೇಕೆಂದು ಹಿಂದೂ ಜಾಗರಣಾ ವೇದಿಕೆಯ ವೀರಾಜಪೇಟೆ ತಾಲೂಕು ಘಟಕ ಇಲಾಖೆಗೆ ಮನವಿ ಸಲ್ಲಿಸಿತ್ತು.

ಹಿಂದೂ ಜಾಗರಣಾ ವೇದಿಕೆ ವೀರಾಜಪೇಟೆ ತಾಲೂಕು ಘಟಕದ ವತಿಯಿಂದ ಮೈತಾಡಿ ಗ್ರಾಮದ ಭೀಮಯ್ಯ ಎಂಬವರ ಗರ್ಭ ಧರಿಸಿದ್ದ ಹಸುಗಳನ್ನು ಕಳ್ಳತನ ಮಾಡಿ ಹತ್ಯೆ ಮಾಡಿರುವ ಘಟನೆಯನ್ನು ಖಂಡಿಸಿ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ವೀರಾಜಪೇಟೆ ಡಿವೈಎಸ್ಪಿ ಎಸ್. ಮಹೇಶ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಮನವಿ ಪತ್ರ ನೀಡಿದ ಬಳಿಕ ಮಾತನಾಡಿದ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಹ ಸಂಯೋಜಕ್ ೭ನೇ (ಮೊದಲ ಪುಟದಿಂದ) ಯೋಗೇಶ್ ಬಿ.ಎನ್. ಬಿಟ್ಟಂಗಾಲ ಅವರು ಗೋವನ್ನು ಹಿಂದೂ ಧರ್ಮದಲ್ಲಿ ಪೂಜಿಸಲಾಗುತ್ತದೆ. ಕೆಲವು ವ್ಯಕ್ತಿಗಳ ಹಣದಾಸೆಗೆ ಗೋವುಗಳನ್ನು ಕಳ್ಳತನ ಮಾಡಿ ಹತ್ಯೆ ಮಾಡುತ್ತಿರುವುದು ನಡೆಯುತ್ತಾ ಬಂದಿದೆ. ಗೋವು ಕಳ್ಳರಿಗೆ ಕೆಲವು ಸ್ಥಳೀಯರ ಸಹಕಾರ ನೀಡುತ್ತಿರುವುದು ವಿಷಾದದ ಸಂಗತಿಯಾಗಿದೆ. ತಾ. ೪ ರಂದು ಮೈತಾಡಿ ಗ್ರಾಮದ ಕೃಷಿಕರಾಗಿರುವ ಭೀಮಯ್ಯ ಅವರ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಎರಡು (ಗರ್ಭ ಧರಿಸಿದ್ದ) ಗೋವುಗಳನ್ನು ಕಳ್ಳತನ ಮಾಡಿ ಹತ್ಯೆ ಮಾಡಿ ಮಾಂಸ ಮಾರಾಟ ಮಾಡಿರುವುದು ಘೋರ ಅಪರಾಧವಾಗಿದೆ. ಅಲ್ಲದೆ ಹತ್ಯೆಗೈದ ಗೋವಿನ ತ್ಯಾಜ್ಯ ಅವಶೇಷÀಗನ್ನು ಹಾಲುಗುಂದ ಗ್ರಾಮದ ಎಲಿಂಗಾಡ್ ಹೊಳೆಯ ತಟಕ್ಕೆ ಎಸೆಯಲಾಗಿದೆ. ಈ ಘಟನೆಯನ್ನು ಸಂಘಟನೆಯು ತೀವ್ರವಾಗಿ ಖಂಡಿಸುತ್ತದೆ. ಕೃತ್ಯ ಎಸಗಿದವರನ್ನು ಪೊಲೀಸರು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ಹಸುಗಳನ್ನು ಕಳೆದುಕೊಂಡ ವ್ಯಕ್ತಿಗೆ ಸಹಾಯಧನ ನೀಡುವಂತೆ ಸರ್ಕಾರವನ್ನು ಸಂಘಟನೆ ಒತ್ತಾಯ ಮಾಡುತ್ತದೆ ಎಂದು ಹೇಳಿದರು.

ಮನವಿ ಸ್ವೀಕರಿಸಿ ಮಾತನಾಡಿದ ಡಿವೈಎಸ್ಪಿ ಎಸ್. ಮಹೇಶ್ ಕುಮಾರ್ ಗೋವುಗಳನ್ನು ಕಳ್ಳತನ ಮಾಡಿ ಸಾಗಾಟ ಮಾಡುವವರ ವಿರುದ್ದ ಕಾನೂನಿನಂತೆ ಕ್ರಮ ಜರುಗಿಸಲಾಗುತ್ತದೆ. ಪ್ರಕರಣಗಳಿಗೆ ಸಂಬAಧಿಸಿ ಕೆಲವರನ್ನು ಬಂಧಿಸಲಾಗಿದೆ. ಮಂಗಳೂರು, ಪುತ್ತೂರು, ಸನಿಹದ ಕೇರಳ ರಾಜ್ಯದಲ್ಲಿ ಕೆಲವು ಆರೋಪಿಗಳನ್ನು ಬಂಧಿಸಲಾಗಿದ್ದು, ಗೋವು ಕಳ್ಳರ ಬಗ್ಗೆ ಸ್ಥಳೀಯರು ಎಚ್ಚರ ವಹಿಸಿ ಇಲಾಖೆಗೆ ಮಾಹಿತಿ ನೀಡುವಂತಾಗಬೇಕು ಎಂದು ಹೇಳಿದರು.

ಈ ಸಂದÀರ್ಭ ಭೀಮಯ್ಯ, ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯ ಗಣೇಶ್ ಬಿಟ್ಟಂಗಾಲ, ತಾಲೂಕು ಸಂಯೋಜಕರಾದ ಅನಿಲ್ ಸಿದ್ದಾಪುರ, ಮಣಿ ಅಯ್ಯಪ್ಪ, ಪ್ರಸನ್ನ ಅಮ್ಮತ್ತಿ, ಗೋ ಸಂರಕ್ಷಣಾ ಸಮಿತಿಯ ಅದ್ಯಕ್ಷ ಅಜಯ್ ರಾವ್ ಹಾಜರಿದ್ದರು.