ಕೂಡಿಗೆ, ಸೆ. ೧೬: ಕುಶಾಲನಗರದ ಜನತಾ ಕಾಲೋನಿಯ ಶ್ರೀ ರಾಮ ಯುವಕ ಸಂಘದ ಆಶ್ರಯದಲ್ಲಿ ೨೮ನೇ ವರ್ಷದ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಪ್ರಥಮ ವರ್ಷದ ರಾಜ್ಯಮಟ್ಟದ ಮುಕ್ತ ನೃತ್ಯ ಸ್ಪರ್ಧೆ ನಡೆಯಿತು. ರಾಜ್ಯಮಟ್ಟದ ನೃತ್ಯಸ್ಪರ್ಧೆಯಲ್ಲಿ ಹಾಸನ, ಹುಣಸೂರು, ಶನಿವಾರಸಂತೆ, ಚಿಕ್ಕಮಂಗಳೂರು, ಕುಶಾಲನಗರ, ಕೂಡಿಗೆ ಸೇರಿದಂತೆ ವಿವಿಧ ಕಡೆಗಳಿಂದ ೧೦ ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದವು.
ವಿವಿಧ ನೃತ್ಯ ತಂಡಗಳ ನೃತ್ಯಪಟುಗಳು ಪ್ರದರ್ಶಿಸಿದ ನೃತ್ಯ ನೆರೆದಿದ್ದ ಜನರನ್ನು ತುದಿಗಾಲಲ್ಲಿ ನಿಲ್ಲಿಸಿತ್ತು. ವಿವಿಧ ಗೀತೆಗಳಿಗೆ ಹೆಜ್ಜೆ ಹಾಕಿದ ಡಾನ್ಸರ್ಸ್ ಪ್ರೇಕ್ಷಕರಿಗೆ ಮನರಂಜನೆ ನೀಡಿದರು.
ಹಾಸನದ ಡಿಜೆ ಡ್ಯಾನ್ಸ್ ಸ್ಟುಡಿಯೋ ಪ್ರಥಮ, ಕೂಡಿಗೆಯ ಎ ಕ್ರಿಯೆಟಿವ್ ಅಕಾಡೆಮಿ ದ್ವಿತೀಯ ಹಾಗೂ ಕುಶಾಲನಗರದ ಶಿವಧಾರೆ ಸ್ಕೂಲ್ ಆಫ್ ಡ್ಯಾನ್ಸ್ ಸಂಸ್ಥೆ ತೃತೀಯ ಬಹುಮಾನ ಪಡೆದುಕೊಂಡಿತು. ಮಂಗಳೂರಿನ ಮನೋಜ್ ಕಿಶನ್, ಚಿಕ್ಕ ಮಂಗಳೂರಿನ ಸುಂದರೇಶ್ ಹಾಗೂ ಕುಶಾಲನಗರದ ಮಂಜು ಭಾರ್ಗವಿ, ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಿವಾನಂದ, ಸಂತೋಷ್, ಕುಮಾರ್, ಪುರಸಭೆ ನಾಮ ನಿರ್ದೇಶಿತ ಸದಸ್ಯ ನವೀನ್, ಬಿ.ಜೆ.ಪಿ. ಯುವಮೋರ್ಚದ ಕಾರ್ಯದರ್ಶಿ ಸಚಿನ್, ಶ್ರೀರಾಮ ಯುವಕರ ಸಂಘದ ಪ್ರಮುಖರಾದ ಚಂದನ್, ಕೃತಿಕ್, ಅಕ್ಷಯ್, ಪುನೀತ್, ಜೀವನ್, ಗಣೇಶ್, ಗಿರೀಶ, ಮೋಹನ, ಹರೀಶ, ಸಚಿನ್, ವಿಷ್ಣು, ದೀಪಕ್, ವಿಕ್ರಂ, ಶ್ರೀಕಾಂತ್, ಪ್ರೀತಂ, ಅಮಯ್, ಸೇರಿದಂತೆ ಮತ್ತಿತರರು ಹಾಜರಿದ್ದರು.