ಮಡಿಕೇರಿ, ಸೆ. ೧೪: ಬಾಳುಗೋಡುವಿನಲ್ಲಿರುವ ಕೊಡವ ಸಮಾಜಗಳ ಒಕ್ಕೂಟದ ಆಶ್ರಯದಲ್ಲಿ ಶನಿವಾರದಂದು ಕೈಲ್‌ಪೊಳ್ದ್ ಸಂತೋಷ ಕೂಟ ಹಾಗೂ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಒಕ್ಕೂಟದ ಸಭಾಂಗಣದಲ್ಲಿ ಬೆಳಿಗ್ಗೆ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಅವರು ಕೋವಿ ಕತ್ತಿಯಂತಹ ಪರಿಕರಗಳಿಗೆ ಆಯುಧ ಪೂಜೆ ನೆರವೇರಿಸಿ ದೇವರನ್ನು ಸ್ತುತಿಸಲಾಯಿತು.

ಬೆಳಿಗ್ಗೆ ಸಭಾ ಬಾಡೆಯ ನೆಲ್ಲಕ್ಕಿಯಲ್ಲಿ ಕೋವಿ ಕತ್ತಿಯನ್ನಿಟ್ಟು ಅಲಂಕರಿಸಿ ಪೂಜೆಯ ನಂತರ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮ ನಡೆಯಿತು. ಪೊಮ್ಮಕ್ಕಡ ವಿಭಾಗದವರಿಂದಲೂ ಆಟೋಟ ಸ್ಪರ್ಧೆ ನಡೆಯಿತು. ಎಲ್ಲರಿಗೂ ಆಕರ್ಷಕ ಬಹುಮಾನ ವಿತರಿಸಲಾಯಿತು. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ೧ನೇ ಬಹುಮಾನವನ್ನು ಅಜ್ಜೇಟಿರ ಸೋಮಯ್ಯ, ೨ನೇ ಬಹುಮಾನ ಮಣವಟ್ಟಿರ ಬೋಪಣ್ಣ ಹಾಗೂ ೩ನೇ ಬಹುಮಾನ ಪುಗ್ಗೇರ ರಾಜೇಶ್ ಅವರುಗಳು ಪಡೆದರು.

ವೇದಿಕೆಯಲ್ಲಿ ಅಧ್ಯಕ್ಷರಾದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಉಪಾಧ್ಯಕ್ಷ ಮಂಡುವAಡ ಮುತ್ತಪ್ಪ, ಖಜಾಂಚಿ ಚಿರಿಯಪಂಡ ಕಾಶಿಯಪ್ಪ, ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಚೇಂದAಡ ಸುಮಿ ಸುಬ್ಬಯ್ಯ ಹಾಗೂ ವಂದನಾರ್ಪಣೆಯನ್ನು ವಾಟೇರಿರ ಶಂಕರಿ ಪೂವಯ್ಯ ನೆರವೇರಿಸಿದರು.