ಮಡಿಕೇರಿ, ಸೆ. ೧೪: ಕೊಡಗು ಜಿಲ್ಲೆಯ ಕುಶಾಲನಗರ ಪಟ್ಟಣ ಪಂಚಾಯಿತಿಗೆ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಪೂರ್ಣ ಕಂದಾಯ ಗ್ರಾಮ ಹಾಗೂ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಮಾದಾಪಟ್ಟಣ ಗ್ರಾಮದ ಭಾಗಶಃ ಪ್ರದೇಶಗಳನ್ನು ಸೇರಿಸಿಕೊಂಡು ಕುಶಾಲನಗರ ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಈ ಸಂಬAಧ ಸರ್ಕಾರದ ಆದೇಶದಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಾರ್ಡ್ ಪುನರ್ ವಿಂಗಡಣೆ ಮಾಡುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಯನ್ನು ಅನುಸರಿಸಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಕುಶಾಲನಗರ ಪುರಸಭೆಯ ವಾರ್ಡ್ಗಳನ್ನು ೨೦೧೧ ರ ಜನಗಣತಿಯ ಆಧಾರದ ಮೇರೆ ಪುನರ್ ವಿಂಗಡಣೆ ಮಾಡಲು ವಿವರವಾದ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ.
ಆದ್ದರಿಂದ ಕರ್ನಾಟಕ ಪೌರಸಭೆಗೆ ಅಧಿನಿಯಮ -೧೯೬೪ ರ ಪ್ರಕರಣ ೧೩ ರ ಮೇರೆಗೆ ಕುಶಾಲನಗರ ಪುರಸಭೆಯ ವಾರ್ಡ್ಗಳನ್ನು ೨೦೧೧ ರ ಜನಗಣತಿಯನ್ನು ಆಧರಿಸಿ ಪುನರ್ ವಿಂಗಡಣೆ ಮಾಡಿ ವಾರ್ಡಿನ ಹೆಸರು ಹಾಗೂ ವಾರ್ಡಿನ ವ್ಯಾಪ್ತಿಗೆ ಒಳಪಡುವ ಪ್ರದೇಶದ ವಿವರ ಮತ್ತು ಚೆಕ್ಕುಬಂದಿಗಳನ್ನು ವಿವರವಾಗಿ ನಮೂದಿಸಿ ಕರಡು ಅಧಿಸೂಚನೆ ಹೊರಡಿಸಲಾಗಿದೆ.
ಈ ಕರಡು ಅಧಿಸೂಚನೆಯನ್ನು ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಈ ಬಗ್ಗೆ ಯಾವುದೇ ಆಕ್ಷೇಪಣೆಯನ್ನು/ ಸಲಹೆಗಳನ್ನು ಸಲ್ಲಸಲು ಇಚ್ಚಿಸುವ ಎಲ್ಲಾ ವ್ಯಕ್ತಿಗಳು ಅದನ್ನು ಲಿಖಿತವಾಗಿ ಕಾರಣ ಸಹಿತವಾಗಿ ಸದರಿ ಅಧಿಸೂಚನೆಯನ್ನು ಸರ್ಕಾರಿ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿAದ ಹದಿನೈದು ದಿನಗಳೊಳಗಾಗಿ ಜಿಲ್ಲಾಧಿಕಾರಿ - ಕೊಡಗು ಜಿಲ್ಲೆ ಮಡಿಕೇರಿ ಇವರಿಗೆ ಸಲ್ಲಿಸಬೇಕೆಂದು ಹಾಗೂ ಆಕ್ಷೇಪಣೆಯನ್ನು/ ಸಲಹೆಗಳನ್ನು ಸದರಿ ಅವಧಿಯ ತರುವಾಯ ಪರಿಶೀಲನೆಗೆ ತೆಗೆದುಕೊಳ್ಳಲಾಗುವುದೆಂದು ತಿಳಿಸಲಾಗಿದೆ.
ಪುರಸಭೆ, ಕುಶಾಲನಗರ
ವಾರ್ಡ್ ಸಂಖ್ಯೆ-೧ ರಸೂಲ್ ಬಡಾವಣೆ, ವಿವೇಕಾನಂದ ಬಡಾವಣೆ, ತ್ಯಾಗರಾಜ ರಸ್ತೆ ಬಲಬದಿ, ಕೆಂಪಮ್ಮ ಬಡಾವಣೆ, ಆದಿಶಂಕರಾಚಾರ್ಯ ಬಡಾವಣೆ ಭಾಗಶಃ, ವಾರ್ಡ್ ಸಂಖ್ಯೆ-೨ ಕಾಳಮ್ಮ ಕಾಲೋನಿ, ಆದರ್ಶ ದ್ರಾವಿಡ ಕಾಲೋನಿ ಭಾಗಶಃ, ನೇತಾಜಿ ಬಡಾವಣೆ ಭಾಗಶಃ, ವಾರ್ಡ್ಸಂಖ್ಯೆ-೩ ಸಿಂಗಾರಮ್ಮ ಬಡಾವಣೆ, ಬದ್ರುನ್ನಿಸಾ ಬಡಾವಣೆ, ಶೈಲಜಾ ಬಡಾವಣೆ, ಬಿ.ಎಂ. ರಸ್ತೆ, ನಾಗಪ್ಪಶೆಟ್ಟಿ ಬಡಾವಣೆ, ಬ್ರೆಡ್ಲಿ ಬಡಾವಣೆ, ನೇತಾಜಿ ಬಡಾವಣೆ ಭಾಗಶಃ, ಕೆ.ಪಿ.ಟಿ.ಸಿ.ಎಲ್. ವಸತಿ ಗೃಹ, ಚಿಕ್ಕಣ್ಣ ಬಡಾವಣೆ, ಯೋಗೇಶ್ ಬಡಾವಣೆ, ಆದರ್ಶ ದ್ರಾವಿಡ ಕಾಲೋನಿ ಭಾಗಶಃ, ವಾರ್ಡ್ಸಂಖ್ಯೆ-೪ ದಂಡಿನಪೇಟೆ, ಹವಾಬಿ ಬಡಾವಣೆ, ಶಾಂತಿ ಮಾರ್ಗ, ಬಿ.ಎಂ ರಸ್ತೆ ಎಡಬದಿ, ವಾರ್ಡ್ಸಂಖ್ಯೆ-೫ ಬಾಪೂಜಿ ಬಡಾವಣೆ, ಟೌನ್ ಕಾಲೋನಿ, ರಥಬೀದಿ ಬಲಪಾರ್ಶ್ವ, ಬಿ.ಎಂ ರಸ್ತೆ, ವಾರ್ಡ್ಸಂಖ್ಯೆ-೬ ಫಾತೀಮಾ ಕಾನ್ವೆಂಟ್ ಹಿಂಭಾಗ, ದಂಡಿನಪೇಟೆ ಭಾಗಶಃ, ಆಯ್ಯಪ್ಪ ಸ್ವಾಮಿ ದೇವಸ್ಥಾನ ರಸ್ತೆ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ವಿ.ಪಿ. ಪುಟ್ಟುಶೆಟ್ಟಿ ಬಡಾವಣೆ, ರಫೀಕ್ ಬಡಾವಣೆ, ಬಿ.ಎಂ ರಸ್ತೆಯ ಎಡಭಾಗ, ಕಬ್ರಸ್ಥಾನ ರಸ್ತೆ ಎಡಭಾಗ. ವಾರ್ಡ್ಸಂಖ್ಯೆ-೭ ಬಿ.ಎಂ ರಸ್ತೆ ಎಡಭಾಗ. ಇಂದಿರಾ ಬಡಾವಣೆ, ಕಬ್ರಸ್ಥಾನ ರಸ್ತೆ ಬಲಭಾಗ, ಬಿದ್ದಪ್ಪ ಬಡಾವಣೆ, ಫರ್ನಾಂಡೀಸ್, ಬಡಾವಣೆ, ವಾರ್ಡ್ಸಂಖ್ಯೆ ೮ ಅಂಬೇಡ್ಕರ್ ಬಡಾವಣೆ, ನಿಜಾಮುದ್ದೀನ್ ಬಡಾವಣೆ, ನಿಂಗೇಗೌಡ ಬಡಾವಣೆ, ಪಂಪ್ ಹೌಸ್ ರಸ್ತೆ, ಬಿಎಂ ರಸ್ತೆ ಎಡಭಾಗ, ಭವಾನಿ ಬಡಾವಣೆ, ಯೋಗಾನಂದ ಬಡಾವಣೆ, ಎಸ್ಎಲ್ ಸನ್ ಪ್ರಾಪರ್ಟಿ, ನಂಜಪ್ಪ ಬಡಾವಣೆ, ಕರ್ನಾಟಕ ಅರಣ್ಯ ತರಬೇತಿ ಕೇಂದ್ರ. ವಾರ್ಡ್ಸಂಖ್ಯೆ-೯ ಬಿ.ಎಂ ರಸ್ತೆ, ಸರ್ಕಾರಿ ಇಂಜಿನಿಯರಿAಗ್ ಕಾಲೇಜು ಮತ್ತು ಅದರ ಮುಂಭಾಗದ ಪ್ರದೇಶ, ಅತಿಥಿ ರೆಸ್ಟೋರೆಂಟ್ ಹೊಟೇಲ್ನ ಸುತ್ತಮುತ್ತಲಿನ ಪ್ರದೇಶ, ಗ್ರೀನ್ ಹೊಟೇಲ್, ಎಸ್.ಎಲ್.ಎನ್. ಪ್ರೋಪರ್ಟಿಸ್ ಮಾದಾಪಟ್ಟಣ, ಭಾಗಶಃ, ಸ್ವಂದ ಫಾರ್ಮ್. ವಾರ್ಡ್ಸಂಖ್ಯೆ-೧೦ ಗುಂಡೂರಾವ್ ಬಡಾವಣೆ, ಆರ್.ಕೆ. ಬಡಾವಣೆ ಭಾಗಶಃ. ಬೈಚನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೆಟ್ರಕ್ ಬಾಲಕರ ವಿದ್ಯಾರ್ಥಿ ನಿಲಯ, ಗಂಧದ ಕೋಟೆ, ವಿ.ಎಲ್. ಗೌರೀಶ್ ರವರ ತೋಟ, ಪರಿಪಾಳ ಜವರಪ್ಪ ಮಲ್ಲೇಶ. ವೆಂಕಟೇಶ ಬಡಾವಣೆ, ತಾವರೆಕೆರೆ, ಪೂನಂ ಲೇಜೌಟ್, ಸರ್ಕಾರಿ ಪಾಲಿಟಿಕ್ನಿಕ್ ಕಾಲೇಜು, ಕಾಶಿವಿಶ್ವನಾಥ ದೇವಾಲಯ, ಮಾದಾಪಟ್ಟಣದಿಂದ ಗೊಂದಿಬಸವನಹಳ್ಳಿಗೆ ಹೋಗುವ ಬಲಭಾಗದ ಪ್ರದೇಶ, ವಾರ್ಡ್ಸಂಖ್ಯೆ-೧೧ ಬೈಚನಹಳ್ಳಿ, ಎಂ.ಪಿ.ಎA.ಸಿ, ಕಾವೇರಿ ಬಡಾವಣೆ, ಐ.ಬಿ. ರಸ್ತೆ ಎಡಭಾಗ, ಬಿ.ಎಂ..ರಸ್ತೆ ಬಲಭಾಗ, ಅರಣ್ಯ ಇಲಾಖೆ, ಪುರಸಭೆ ಕಾರ್ಯಾಲಯ, ಶ್ರೀಮಹಾಗಣಪತಿ ದೇವಸ್ಥಾನ. ವಾರ್ಡ್ ಸಂಖ್ಯೆ ೧೨ ರಲ್ಲಿ ಐ.ಬಿ.ರಸ್ತೆ, ಬೈಪಾಸ್ ರಸ್ತೆ ಎಡ ಮತ್ತು ಬಲ, ರಾಧಾಕೃಷ್ಣ ಬಡಾವಣೆ, ಸಾರ್ವಜನಿಕ ಆಸ್ಪತ್ರೆ, ತಹಶೀಲ್ದಾರ್ ಅವರ ಕಚೇರಿ ಮತ್ತು ಸೋಮೇಶ್ವರ ದೇವಸ್ಥಾನ ರಸ್ತೆಯ ಬಲಭಾಗ. ವಾರ್ಡ್ ಸಂಖ್ಯೆ ೧೩ ರಲ್ಲಿ ಅವದಾನಿ ಬಡಾವಣೆ, ಬಸಪ್ಪ ಬಡಾವಣೆ, ಶ್ರೀ ಸಾಯಿ ಬಡಾವಣೆ, ಸೋಮವಾರಪೇಟೆ ರಸ್ತೆ ಬಲ ಬದಿ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ವಸತಿ ಗೃಹ, ಸೋಮೇಶ್ವರ ಬಡಾವಣೆ ಮತ್ತು ಆದಿಶಂಕರಾಚಾರ್ಯ ಬಡಾವಣೆ ಭಾಗಶಃ. ವಾರ್ಡ್ ಸಂಖ್ಯೆ ೧೪ ರಲ್ಲಿ ವೆಂಕಟೇಶ್ವರ ಬಡಾವಣೆ, ಮಾರುತಿ ಬಡಾವಣೆ, ಓಂಕಾರ ಬಡಾವಣೆ, ಕೈಗಾರಿಕಾ ಬಡಾವಣೆ, ಸೋಮೇಶ್ವರ ಕೆರೆ, ನಿರ್ಮಿತಿ ಕೇಂದ್ರ, ಉಪ ನೋಂದಣಾಧಿಕರಿ ಕಚೇರಿ ಹಿಂಭಾಗ ಪ್ರದೇಶ, ಗೌಡ ಸಮಾಜ, ಅಂಗನವಾಡಿ, ಅಂಬೇಡ್ಕರ್ ಬಡಾವಣೆ ಮತ್ತು ಜನತಾ ಕಾಲೋನಿ ರಸ್ತೆಯ ಬಲಭಾಗ. ವಾರ್ಡ್ ಸಂಖ್ಯೆ ೧೫ ರಲ್ಲಿ ಕುವೆಂಪು ಬಡಾವಣೆ, ಶ್ರೀನಿಧಿ ಬಡಾವಣೆ, ತಪೋವನ, ತಾಲೂಕು ಪಂಚಾಯಿತಿ ಹಿಂಭಾಗ, ಗುಮ್ಮನಕೊಲ್ಲಿ ಸರ್ಕಾರಿ ಶಾಲೆಯ ಹಿಂಭಾಗ, ನಂದಿ ಬಡಾವಣೆ, ಕಾವೇರಿ ಬಡಾವಣೆ ಮತ್ತು ಕೆ.ಪಿ. ಚಂದ್ರಕಲಾ ಬಡಾವಣೆ. ವಾರ್ಡ್ ಸಂಖ್ಯೆ ೧೬ ರಲ್ಲಿ ಬಸಪ್ಪ ಬಡಾವಣೆ ಮತ್ತು ಶಕ್ತಿ ಬಡಾವಣೆ. ವಾರ್ಡ್, ೧೭ ರಲ್ಲಿ ಜನತಾ ಕಾಲೋನಿ ೧ನೇ ಕ್ರಾಸ್, ೨ನೇ ಕ್ರಾಸ್, ೩ನೇ ಕ್ರಾಸ್, ೪ನೇ ಕ್ರಾಸ್, ೫ನೇ ಕ್ರಾಸ್, ೬ನೇ ಕ್ರಾಸ್, ೭ನೇ ಕ್ರಾಸ್ ಮತ್ತು ಮಾರುತಿ ಬಡಾವಣೆ. ವಾರ್ಡ್ ಸಂಖ್ಯೆ ೧೮ ರಲ್ಲಿ ಚಾಮುಂಡೇಶ್ವರಿ ಬಡಾವಣೆ, ಚೆನ್ನಕೇಶವ ಪ್ರೆಸ್ ಹಿಂಭಾಗದ ಮನೆಗಳು, ಆಫಿಸರ್ಸ್ ಕಾಲೋನಿ, ಮಾಲಿನ್ಯ ನೀರಿನ ಶುದ್ದೀಕರಣ ಘಟಕ, ಅಂಬೇಡ್ಕರ್ ಭವನ, ವಾಲ್ಮೀಕಿ ಭವನ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿಂಭಾಗದ ವಸತಿಗಳು, ಶಿವಾನಂದ ರವರ ಮನೆಯ ಸುತ್ತಮುತ್ತ ಪ್ರದೇಶ. ವಾರ್ಡ್ ಸಂಖ್ಯೆ ೧೯ ರಲ್ಲಿ ಐ.ಬಿ, ಹಳೆ ಹೌಸಿಂಗ್ ಬೋರ್ಡ್, ಸಿ.ಪಿ.ಸುಕನ್ಯ ಲೇಒಔಟ್/ ಚೂಡೇಗೌಡ ಬಡಾವಣೆ, ಡಾ. ಶಿವರಾಮ ಕಾರಂತ ಬಡಾವಣೆ, ಥೋಮಸ್ ಬಡಾವಣೆ, ಸಿದ್ದಯ್ಯ ಪುರಾಣಿಕ ಬಡಾವಣೆ, ಕೋಣಮಾರಮ್ಮ ದೇವಸ್ಥಾನ ಹಿಂಭಾಗ. ವಾರ್ಡ್ ಸಂಖ್ಯೆ ೨೦ ರಲ್ಲಿ ನೆಹರೂ ಬಡಾವಣೆ, ಎಚ್.ಆರ್.ಪಿ. ಕಾಲೋನಿ, ಕರಿಯಪ್ಪ ಬಡಾವಣೆ ಮತ್ತು ವಿನಾಯಕ ಬಡಾವಣೆ. ವಾರ್ಡ್ ಸಂಖ್ಯೆ ೨೧ ರಲ್ಲಿ ಕರ್ನಾಟಕ ಗೃಹ ಮಂಡಳಿ, ಮಂಜುನಾಥ ಬಡಾವಣೆ, ಚೈತ್ರ ಬಡಾವಣೆ, ಆರ್ಆರ್ಆರ್ ಬಡಾವಣೆ, ಆರ್ಸಿ ಬಡಾವಣೆ ಭಾಗಶಃ, ಮಂಜೇಗೌಡ ಬಡಾವಣೆ, ನಂಜುAಡೇಶ್ವರ ಬಡಾವಣೆ, ಸ್ವಾಮಿ ಬಡಾವಣೆ, ಕಾರು ಚಾಲಕ ಬಡಾವಣೆ, ಗೊಂದಿ ಬಸವನಹಳ್ಳಿ ಭಾಗಶಃ, ಸಿದ್ದಯ್ಯ ಬಡಾವಣೆ, ಪಿ.ಪಿ. ಸತ್ಯನಾರಾಯಣ ಬಡಾವಣೆ. ವಾರ್ಡ್ ಸಂಖ್ಯೆ ೨೨ ರಲ್ಲಿ ನಾಗೇಗೌಡ ಬಡಾವಣೆ, ಕಾಲಬೈರವೇಶ್ವರ ಬಡಾವಣೆ, ಅಣ್ಣೇಗೌಡ ಬಡಾವಣೆ, ಕರ್ನಾಟಕ ರಾಜ್ಯ ಅಗ್ನಿಶಾಮಕದಳ ಹಿಂಭಾಗ ಬರುವ ಮನೆಗಳು, ಮುಕಾಂಬಿಕಾ ವಿದ್ಯಾಸಂಸ್ಥೆ, ಎಸ್ಎಲ್ಎನ್ ಪ್ರಾಪರ್ಟಿಸ್, ಶ್ರೀ ಬಲಮುರಿ ಗಣಪತಿ ದೇವಸ್ಥಾನ ಸುತ್ತಮುತ್ತಲು ಪ್ರದೇಶ ಮತ್ತು ಬಸವೇಶ್ವರ ಬಡಾವಣೆ. ವಾರ್ಡ್ ಸಂಖ್ಯೆ ೨೩ ರಲ್ಲಿ ಗೊಂದಿಬಸವನಹಳ್ಳಿ ಭಾಗಶಃ.
ಕೊಡಗು ಜಿಲ್ಲೆಯ ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿಯ ಕುಕ್ಲೂರು ಗ್ರಾಮ ಭಾಗಶಃ ಮತ್ತು ಮಗ್ಗುಲ ಗ್ರಾಮ ಭಾಗಶಃ, ಬಿಟ್ಟಂಗಾಲ ಗ್ರಾಮ ಪಂಚಾಯಿತಿಯ ಅಂಬಟ್ಟಿ ಗ್ರಾಮ ಭಾಗಶಃ, ಆರ್ಜಿ ಗ್ರಾಮ ಪಂಚಾಯಿತಿಯ ಆರ್ಜಿ ಗ್ರಾಮ ಭಾಗಶಃ, ಬೇಟೋಳಿ ಗ್ರಾ.ಪಂ. ಬೇಟೋಳಿ ಗ್ರಾಮ ಭಾಗಶಃ, ಕೆದಮುಳ್ಳೂರು ಗ್ರಾ.ಪಂ.ಯ ಕೊಟ್ಟೋಳಿ ಗ್ರಾಮ ಭಾಗಶಃ ಮತ್ತು ಕದನೂರು ಗ್ರಾ.ಪಂ. ಕದನೂರು ಗ್ರಾಮ ಭಾಗಶಃ ಪ್ರದೇಶಗಳನ್ನು ಸೇರಿಸಿಕೊಂಡು ವೀರಾಜಪೇಟೆ ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಈ ಸಂಬAಧ ಸರ್ಕಾರದ ಆದೇಶದಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಾರ್ಡ್ ಪುನರ್ ವಿಂಗಡಣೆ ಮಾಡುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಯನ್ನು ಅನುಸರಿಸಿ ಮುಖ್ಯಾಧಿಕಾರಿ, ಪುರಸಭೆ, ವೀರಾಜಪೇಟೆ ಇವರು ವೀರಾಜಪೇಟೆ ಪುರಸಭೆಯ ವಾರ್ಡ್ಗಳನ್ನು ೨೦೧೧ ರ ಜನಗಣತಿಯ ಆಧಾರದ ಮೇರೆ ಪುನರ್ ವಿಂಗಡಣೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.
ಆದ್ದರಿಂದ ಕರ್ನಾಟಕ ಪೌರಸಭೆಗಳ ಅಧಿನಿಯಮ ೧೯೬೪ ರ ಪ್ರಕರಣ ೧೩ ರ ಮೇರೆಗೆ ವೀರಾಜಪೇಟೆ ಪುರಸಭೆಯ ವಾರ್ಡ್ಗಳನ್ನು ೨೦೧೧ ರ ಜನಗಣತಿಯನ್ನು ಆಧಾರಿಸಿ ಪುನರ್ ವಿಂಗಡಣೆ ಮಾಡಿ, ವಾರ್ಡಿನ ಹೆಸರು ಹಾಗೂ ವಾರ್ಡಿನ ವ್ಯಾಪ್ತಿಗೆ ಒಳಪಡುವ ಪ್ರದೇಶದ ವಿವರ ಮತ್ತು ಚೆಕ್ಕುಬಂದಿಗಳನ್ನು ವಿವರವಾಗಿ ನಮೂದಿಸಿ ಕರಡು ಅಧಿಸೂಚನೆ ಹೊರಡಿಸಲಾಗಿದೆ.
ಈ ಕರಡು ಅಧಿಸೂಚನೆಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಈ ಬಗ್ಗೆ ಯಾವುದೇ ಆಕ್ಷೇಪಣೆ/ ಸಲಹೆಗಳನ್ನು ಸಲ್ಲಿಸಲು ಇಚ್ಚಿಸುವ ವ್ಯಕ್ತಿಗಳು ಅದನ್ನು ಲಿಖಿತದಲ್ಲಿ ಕಾರಣ ಸಹಿತವಾಗಿ ಈ ಅಧಿಸೂಚನೆಯನ್ನು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದಿAದ ಹದಿನೈದು ದಿನಗಳೊಳಗೆ ಜಿಲ್ಲಾಧಿಕಾರಿ, ಕೊಡಗು ಜಿಲ್ಲೆ, ಮಡಿಕೇರಿ ಇವರಿಗೆ ಸಲ್ಲಿಸಬೇಕೆಂದು ಹಾಗೂ ಆಕ್ಷೇಪಣೆಯನ್ನು ಸಲಹೆಗಳನ್ನು ಈ ಅವಧಿಯ ತರುವಾಯ ಪರಿಶೀಲನೆಗೆ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.
ವೀರಾಜಪೇಟೆ ಪುರಸಭೆ ವ್ಯಾಪ್ತಿಯ ವಾರ್ಡ್ಗಳ ವಿವರ: ವೀರಾಜಪೇಟೆ ೧ (ಚರ್ಚ್ ರಸ್ತೆ), ವೀರಾಜಪೇಟೆ-೨ (ಅರಸು ನಗರ), ವೀರಾಜಪೇಟೆ ೩ (ಮಲೆತಿರಿಕೆ ಬೆಟ್ಟ), ವೀರಾಜಪೇಟೆ-೪ (ತೆಲುಗರ ಬೀದಿ), ವೀರಾಜಪೇಟೆ ೫ (ದಖ್ಖನಿ ಮೊಹಲ್ಲಾ), ವೀರಾಜಪೇಟೆ-೬ (ಜೈನರ ಬೀದಿ), ವೀರಾಜಪೇಟೆ-೭ (ಮೊಗರಗಲ್ಲಿ), ವೀರಾಜಪೇಟೆ-೮ (ನೆಹರುನಗರ-೧), ವೀರಾಜಪೇಟೆ-೯ (ನೆಹರು ನಗರ-೨), ವೀರಾಜಪೇಟೆ-೧೦ (ವಿದ್ಯಾನಗರ-೦೧), ವೀರಾಜಪೇಟೆ-೧೧ (ವಿದ್ಯಾನಗರ-೦೨), ವೀರಾಜಪೇಟೆ-೧೨ (ನಿಸರ್ಗ ಲೇಔಟ್), ವೀರಾಜಪೇಟೆ-೧೩ (ಕಲ್ಲುಬಾಣೆ), ವೀರಾಜಪೇಟೆ-೧೪ (ಮಂಜುನಾಥ ನಗರ), ವೀರಾಜಪೇಟೆ-೧೫ (ವಿಜಯನಗರ), ವೀರಾಜಪೇಟೆ-೧೬ (ಸುಣ್ಣದ ಬೀದಿ), ವೀರಾಜಪೇಟೆ-೧೭ (ಶಾಂತಿನಗರ), ವೀರಾಜಪೇಟೆ-೧೮ (ಮೀನುಪೇಟೆ), ವೀರಾಜಪೇಟೆ-೧೯ (ಗೌರಿಕೆರೆ), ವೀರಾಜಪೇಟೆ-೨೦ (ಗಾಂಧಿನಗರ), ವೀರಾಜಪೇಟೆ-೨೧ (ಚಿಕ್ಕಪೇಟೆ), ವೀರಾಜಪೇಟೆ-೨೩ (ಶಿವಕೇರಿ).