ಸೋಮವಾರಪೇಟೆ, ಸೆ. ೧೩: ಪಟ್ಟಣ ಸಮೀಪದ ಹೊಸಬೀಡು ಗ್ರಾಮದ ವಿದ್ಯಾರ್ಥಿ ಬಿ.ಎಂ. ಸೃಜನ್, ಕೃಷಿ ಸಂಶೋಧನಾ ಅರ್ಹತಾ ಪರೀಕ್ಷೆಯಲ್ಲಿ ದೇಶಕ್ಕೆ ೩೪ನೇ ರ‍್ಯಾಂಕ್ ಪಡೆದು ಸಾಧನೆ ತೋರಿದ್ದಾನೆ. ಕಳೆದ ಜುಲೈ ತಿಂಗಳಿನಲ್ಲಿ ನಡೆದ ಕೃಷಿ ಸಂಶೋಧನಾ ಸ್ನಾತಕ್ಕೋತ್ತರ ಅರ್ಹತಾ ಪರೀಕ್ಷೆಯಲ್ಲಿ ದೇಶದ ಒಟ್ಟು ೪೨ ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ ಸೃಜನ್ ೩೪ನೇ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವರ್ಗದಡಿ ೧೮ನೇ ರ‍್ಯಾಂಕ್ ಗಳಿಸುವ ಮೂಲಕ ಸಾಧನೆ ತೋರಿದ್ದಾರೆ. ೭ನೇ ಪುಟಕ್ಕೆ
(ಮೊದಲ ಪುಟದಿಂದ) ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯಕ್ಕೆ ಒಳಪಡುವ ಮೈಸೂರು ತೋಟಗಾರಿಕಾ ಮಹಾ ವಿದ್ಯಾಲಯದಲ್ಲಿ ಬಿ.ಎಸ್.ಸಿ. ವ್ಯಾಸಂಗ ಮಾಡಿರುವ ಸೃಜನ್, ಸ್ಥಳೀಯ ಸಾಂದೀಪನಿ ಶಾಲೆಯಲ್ಲಿ ಪ್ರೌಢಶಿಕ್ಷಣ, ಮಂಗಳೂರಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದಾರೆ. ಈತ ಸಮೀಪದ ಹಾನಗಲ್ಲು ಗ್ರಾ.ಪಂ. ವ್ಯಾಪ್ತಿಯ ಹೊಸಬೀಡು ಗ್ರಾಮದ ಮೋನಪ್ಪ ಹಾಗೂ ಇಂದಿರಾ ದಂಪತಿಯ ಪುತ್ರ.