ವೀರಾಜಪೇಟೆ, ಸೆ. ೧೩: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ-ಬಿ.ಸಿ ಟ್ರಸ್ಟ್, ವೀರಾಜಪೇಟೆ ತಾಲೂಕು ಕೃಷಿ ಕಾರ್ಯಕ್ರಮದಡಿಯಲ್ಲಿ ಅಮ್ಮತ್ತಿ ವಲಯದ ಕಣ್ಣಂಗಾಲ ಕಾರ್ಯಕ್ಷೇತ್ರದ ಅಮ್ಮತ್ತಿ ಒಂಟಿಅAಗಡಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ನಡೆಯಿತು.

ಕಣ್ಣಂಗಾಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ರಜನಿ ಕುಟ್ಟಪ್ಪ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಮನೆಯ ಪರಿಸರದಲ್ಲಿ ಗಿಡ ನಾಟಿ ಮಾಡಿ ಪರಿಸರ ಸಂರಕ್ಷಿಸಬೇಕು ಎಂದರು.

ಸAಪನ್ಮೂಲ ವ್ಯಕ್ತಿ ರೇಖಾ ಬಿ.ಎಸ್ ಮಾತನಾಡಿ, ಪರಿಸರ ಸಂರಕ್ಷಣೆಯಲ್ಲಿ ನಮ್ಮ ಕರ್ತವ್ಯದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪರಿಸರದ ಕುರಿತು ಪ್ರಬಂಧ ಹಾಗೂ ಚಿತ್ರಕಲೆ, ಎಲೆಗಳನ್ನು ಗುರುತಿಸುವ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕೃಷಿ ಮೇಲ್ವಿಚಾರಕ ವಸಂತ್, ವಲಯ ಮೇಲ್ವಿಚಾರಕ ದನೇಶ್, ಶಾಲಾ ಮುಖ್ಯಶಿಕ್ಷಕರಾದ ರೀನಾ ಕುಮಾರಿ, ಶಾಲಾ ಶಿಕ್ಷಕರಾದ ಮಂಜುನಾಥ, ಅಶ್ವಿನಿ, ಸೌಮ್ಯ ಹಾಗೂ ಒಕ್ಕೂಟದ ಉಪಾಧ್ಯಕ್ಷರಾದ ಭಾನುಮತಿ, ಸೇವಾ ಪ್ರತಿನಿಧಿ ಸವಿತಾ, ಸಿಎಸ್‌ಸಿ ಸೇವಾದಾರರಾದ ಕಾವ್ಯ, ಕಣ್ಣಂಗಾಲದ ಕೃಷಿ ಸಖಿ ರತಿ ಬಿ.ಯು ಹಾಗೂ ಶಾಲಾ ಮಕ್ಕಳು ಇದ್ದರು. ಶಾಲಾ ಆವರಣದಲ್ಲಿ ವಿವಿಧ ರೀತಿಯ ಹಣ್ಣಿನ ಗಿಡಗಳನ್ನು ನಾಟಿ ಮಾಡಲಾಯಿತು.