ಸೋಮವಾರಪೇಟೆ, ಸೆ.೧೩: ಇಲ್ಲಿನ ಮಹದೇಶ್ವರ ಬಡಾವಣೆಯಲ್ಲಿರುವ ಶ್ರೀ ಸಿದ್ದಿ ವಿನಾಯಕ ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ ೧೧ನೇ ವರ್ಷದ ಗೌರಿ ಗಣೇಶೋತ್ಸವದಲ್ಲಿ ಸಾಧಕರು ಹಾಗೂ ಸಮಾಜ ಸೇವಕರನ್ನು ಗುರುತಿಸಿ ಸನ್ಮಾನಿಸಲಾಯಿತು.
ಚಾಮುಂಡೇಶ್ವರಿ ವಿದ್ಯುತ್ ನಿಗಮದಲ್ಲಿ ಕಳೆದ ೧೦ ವರ್ಷಗಳಿಂದ ಲೈನ್‌ಮೆನ್ ಆಗಿ ಸೇವೆ ಸಲ್ಲಿಸುತ್ತಿರುವ ಮಹದೇಶ್ವರ ಬಡಾವಣೆಯ ರಾಜು ಸಿದ್ದಪ್ಪ ಮಂಟಾಲಿ ಹಾಗೂ ವಿವಿಧ ಸಮಾಜಮುಖಿ ಕಾರ್ಯ ಗಳಲ್ಲಿ ತೊಡಗಿಸಿಕೊಂಡಿರುವ ಅಬ್ಬೂರುಕಟ್ಟೆಯ ಭಾಗೀರಥಿ ರವಿಕುಮಾರ್ ಅವರುಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಸಿದ್ದಿವಿನಾಯಕ ಸೇವಾ ಸಮಿತಿಯ ಅಧ್ಯಕ್ಷ ಮನೋಜ್, ಗೌರವಾಧ್ಯಕ್ಷರುಗಳಾದ ಮೋಹನ್, ಚಂದ್ರಶೇಖರ್ ಭಟ್, ಖಜಾಂಚಿ ಚಂದ್ರು ಸೇರಿದಂತೆ ಇತರರು ಇದ್ದರು.