ಕಣಿವೆ, ಸೆ. ೧೩: ಬಂಡವಾಳ ಶಾಹಿಗಳು ಕಟ್ಟಿರುವ ಕಲ್ಲುಬಂಡೆಗಳ ಕೋಟೆ...., ನಿತ್ಯವೂ ಬಂಡೆಯ ಒಳ ಹೊಕ್ಕಿ ಸೀಳುವ ಯಂತ್ರಗಳ ಸದ್ದು...., ತುಂಬಿದ ಕಲ್ಲುಗಳನ್ನು ಹೊತ್ತೊಯ್ಯಲು ಸಾಹಸ ಪಡುವ ಲಾರಿಗಳ ಸದ್ದು...., ಸಂಜೆಯಾಯಿತೆAದರೆ ಭೂಮಿಯೇ ಹೆದರಿ ನಡುಗುವಂತಹ ಭಯಾನಕ ಬಂಡೆಗಳನ್ನು ಸೀಳುವ ಸ್ಫೋಟಕಗಳ ಸದ್ದು....

ಇದು ಕುಶಾಲನಗರ ಹಾಗೂ ಸೋಮವಾರಪೇಟೆ ತಾಲೂಕು ಗಡಿ ಪ್ರದೇಶ ಹಳೆಯ ಮದಲಾಪುರ ಅಂದರೆ ಏಲಕ್ಕನೂರು ಗ್ರಾಮದ ಗಿರಿಜನ ಹಾಡಿಯ ಮಂದಿಯೂ ಸೇರಿದಂತೆ ಇನ್ನಿತರರು ಅನುಭವಿಸುತ್ತಿರುವ ನಿತ್ಯ ಯಾತನೆ!

ಕಳೆದ ಹಲವು ದಶಕಗಳಿಂದ ಇಲ್ಲಿ ಆರಂಭವಾಗಿರುವ ಕಲ್ಲುಕೋರೆಗಳು ಹಾಗೂ ಸಾಗಾಟದಿಂದಾಗಿ ಇಲ್ಲಿನ ಶ್ರೀಮಂತರು ಆಗರ್ಭ ಶ್ರೀಮಂತರಾಗಿದ್ದರೆ, ಈ ಕೋಟೆಯ ಆಸು ಪಾಸಿನಲ್ಲಿ ವಾಸವಿರುವ ನಿವಾಸಿಗಳು, ಮುಗ್ಧ ರೈತರು ಮಾತ್ರ ನಲುಗಿ ಹೋಗಿದ್ದಾರೆ.

ಇಲ್ಲಿ ನಿತ್ಯವೂ ಸಂಜೆ ವೇಳೆ ಸಿಡಿಸುವ ಸಿಡಿ ಮದ್ದು ಸ್ಫೋಟಕಗಳಿಂದಾಗಿ ಸುತ್ತಲಿನ ಆಸು ಪಾಸಿನ ಮನೆಗಳು ಬಹುತೇಕ ಬಿರುಕು ಬಿಟ್ಟಿವೆ.

ಏಲಕ್ಕನೂರು ಮುಖ್ಯ ರಸ್ತೆಯ ಚಂದ್ರ ಎಂಬವರ ವಾಸದ ಮನೆಯ ಗೋಡೆಗಳು ಬಿರುಕು ಬಿಟ್ಟಿದ್ದು ಕುಸಿಯುವ ಹಂತ ತಲುಪಿದೆ.

ಆದರೂ ಕೂಡ ವಿಧಿಯಿಲ್ಲದ ಮಂದಿ ಮಳೆಗಾಲ ಸೃಷ್ಟಿಸುವ ಅಪಾಯವÀನ್ನೂ ಲೆಕ್ಕಿಸದೇ ಅದೇ ದುಸ್ಥಿತಿಯ ಮನೆಗಳಲ್ಲಿ ವಾಸವಿದ್ದಾರೆ.

ಕೆ.ಪಿ.ಸುರೇಶ್ ಎಂಬವರ ಮನೆಗೂ ಹಾನಿ ಆಗಿದೆ. ಇನ್ನು ಕುರುಬ ಸಮುದಾಯದ ನೀಲ ಮತ್ತು ನಾಗ ದಂಪತಿಗೆ ಸೇರಿದ ಮನೆಯೂ ಪೂರ್ಣ ಹಾನಿಯಾಗಿದ್ದು, ಈ ದಂಪತಿ ಸಾಕಿರುವ ಹಸುಗಳು ಕೂಡ ಇಲ್ಲಿನ ಕೋರೆಗಳ ಸಿಡಿ ಮದ್ದುಗಳ ಸದ್ದಿಗೆ ಬೆದರಿ ಬೆಂಡಾಗುತ್ತಿವೆ.

ಗಿರಿಜನ ಹಾಡಿಯ ರಸ್ತೆಯೇ ಮಾಯ !

ಇಲ್ಲಿನ ನಿತ್ಯವೂ ಸಂಚರಿಸುವ ಕಲ್ಲು ಕೋರೆಗಳ ಲಾರಿಗಳಿಂದಾಗಿ ಏಲಕ್ಕನೂರು ಕಡೆಯಿಂದ ಹಳೆ ಮದಲಾಪುರ ಗಿರಿಜನ ಹಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಪೂರ್ಣ ಗುಂಡಿಮಯವಾಗಿದೆ.

ಕೆಲವೊAದು ಕಡೆ ಮಳೆಯ ನೀರಿಗೆ ರಸ್ತೆಯ ನಡುವೆಯೇ ಸಣ್ಣ ಸಣ್ಣ ಕೆರೆಗಳು ನಿರ್ಮಾಣವಾಗಿವೆ.ಇಂತಹ ರಸ್ತೆಗಳಲ್ಲಿ ಶ್ರಮ ಜೀವಿಗಳಾದ ಗಿರಿಜನರು ನಿತ್ಯವೂ ಸಂಚರಿಸಬೇಕಾದ ದುಸ್ಥಿತಿ ಎದುರಾಗಿದೆ.

ಪಿಡಬ್ಲೂಡಿ ನಿಯಮ ಉಲ್ಲಂಘನೆ

ಕಲ್ಲು ಕೋರೆಗಳಿಂದ ಸರಕು ಸಾಗಿಸುವ ಲಾರಿಗಳು ೧೬ ಟನ್‌ಗಿಂತ ಹೆಚ್ಚು ಭಾರ ಸಾಗಿಸಬಾರದು ಎಂದು ಲೋಕೋಪಯೋಗಿ ಇಲಾಖೆ ಅಲ್ಲಲ್ಲಿ ನಾಮಫಲಕಗಳನ್ನು ಅಳವಡಿಸಿದ್ದರೂ ಕೂಡ ೭ನೇ ಪುಟಕ್ಕೆ

(ಮೊದಲ ಪುಟದಿಂದ) ಲಾರಿಗಳಲ್ಲಿ ೨೦ ಟನ್‌ಗಿಂತಲೂ ಹೆಚ್ಚಿನ ಸರಕು ಸಾಗಿಸುತ್ತಿರುವ ಕುರಿತು ಗ್ರಾಮಸ್ಥರು ದೂರಿದ್ದಾರೆ.

ಇತ್ತೀಚೆಗಷ್ಟೇ ಕೋಟಿ ಕೋಟಿ ರೂ ವ್ಯಯಿಸಿ ನಿರ್ಮಾಣ ಮಾಡಿದ್ದ ರಸ್ತೆ ಕೆಲವೇ ತಿಂಗಳಲ್ಲಿ ಮತ್ತೆ ಗುಂಡಿ ಬಿದ್ದು ಹಾಳಾಗುತ್ತಿರುವ ಬಗ್ಗೆ ಸೀಗೆ ಹೊಸೂರು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಸುಗಳ ಮೇಲೂ ಹತ್ತುವ ಲಾರಿಗಳು

ಇಲ್ಲಿನ ಕಲ್ಲು ಸಾಗಿಸುವ ಲಾರಿಗಳು ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಸಂಚರಿಸುತ್ತಿದ್ದು ಸೀಗೆಹೊಸೂರು ಗ್ರಾಮಸ್ಥರಿಗೆ ಶಬ್ಧ ಮಾಲಿನ್ಯ ಉಂಟಾಗುತ್ತಿರುವ ಬಗ್ಗೆ ಕೆಲವರು ದೂರಿದರೆ, ಲಾರಿಗಳನ್ನು ಬೇಕಾ ಬಿಟ್ಟಿಯಾಗಿ ಚಾಲಿಸುವ ಚಾಲಕರು ರೈತರು ಸಾಕಿರುವ ಹಸು, ಎಮ್ಮೆಗಳ ಮೇಲೆಯೇ ಲಾರಿಗಳನ್ನು ಹತ್ತಿಸಿ ಘಾಸಿಗೊಳಿಸುತ್ತಿರುವುದಾಗಿ ಸೀಗೆ ಹೊಸೂರು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೀಗೆಹೊಸೂರಿನ ದೇವಾಲಯದ ಅರ್ಚಕರೊಬ್ಬರಿಗೆ ಸೇರಿದ ಎಮ್ಮೆಯ ಮೇಲೆ ಲಾರಿ ಹತ್ತಿಸಲಾಗಿತ್ತು. ಪರಿಣಾಮ ಗ್ರಾಮಸ್ಥರು ಒಗ್ಗೂಡಿ ಲಾರಿಗಳಿಗೆ ತಡೆ ಒಡ್ಡುವ ತೀರ್ಮಾನಕ್ಕೆ ಬಂದ ಬಳಿಕ ಕೋರೆ ಮಾಲೀಕರೊಬ್ಬರು ಎಮ್ಮೆ ಪಾಲಕರಿಗೆ ರೂ. ೧೫ ಸಾವಿರ ನೀಡಿದ ಬಗ್ಗೆ ಗ್ರಾಮಸ್ಥರು ವಿವರಿಸಿದರು.

ಮಳೆಯಿದ್ದರೆ ಕೆಸರು - ಬಿಸಿಲಾದರೆ ಧೂಳು :

ಲಾರಿಗಳ ಮಿತಿ ಮೀರಿದ ಸಂಚಾರದಿAದಾಗಿ ಇಲ್ಲಿನ ಜನೋಪಯೋಗಿ ರಸ್ತೆಗಳು ಪೂರ್ಣವಾಗಿ ಕಿತ್ತು ಗುಂಡಿ ಬಿದ್ದ ಕಾರಣ ಬಿಸಿಲಲ್ಲಿ ಧೂಳೆದ್ದರೆ, ಮಳೆಯಲ್ಲಿ ಕೆಸರುಮಯವಾಗಿ ಸಾರ್ವಜನಿಕರಿಗೆ ತೀವ್ರ ಅನಾನುಕೂಲ ಉಂಟಾಗುತ್ತಿರುವ ರಸ್ತೆ ಬದಿ ವಾಸಿಗಳಾದ ನಿಂಗಮ್ಮ, ರತ್ನಮ್ಮ, ಸರೋಜಮ್ಮ, ಧನಂಜಯ, ರತ್ನ ಮೊದಲಾದವರು ಅಳಲು ತೋಡಿಕೊಂಡಿದ್ದಾರೆ.

ಕೋರೆ ಮಾಡ್ಕೊಂಡಿರೋರು ಚೆಂದ ದುಡ್ಡು ಮಾಡಿಕೊಂಡು ಮೆರೆಯಲಿ. ನಾವೂ ಗುಲಾಮರಾಗಿಯೇ ಬದುಕಬೇಕಾ ? ಎಂಬುದು ಗ್ರಾ.ಪಂ. ಮಾಜಿ ಸದಸ್ಯ ನಾಗರಾಜು ಎಂಬವರ ಆಕ್ರೋಶದ ಮಾತು.

ಕೇರಳ ರಾಜ್ಯದ ನೋಂದಣಿ ಇರುವ ಲಾರಿಗಳೇ ಇಲ್ಲಿ ಹೆಚ್ಚಾಗಿ ಸಂಚರಿಸುತ್ತಿದ್ದು ಸಂಬAಧಿಸಿದ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ವರದಿ : ಕೆ.ಎಸ್.ಮೂರ್ತಿ