ಶನಿವಾರಸಂತೆ; ಸೆ. ೧೩: ಒಕಿನವಾ ಡ್ರಾಗನ್ ಮಿಕ್ಸ್ ಮಾರ್ಷಲ್ ಆರ್ಟ್ಸ್ ವತಿಯಿಂದ ನಡೆದ ರಾಜ್ಯಮಟ್ಟದ ಶೋಟಕಾನ್ ಓಪನ್ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಶನಿವಾರಸಂತೆಯ ಕಾವೇರಿ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿಗಳಾದ ಮೋನಿಷ, ಶ್ರೇಯಸ್ ಗೌಡ, ಸ್ಕಂದ ಪಟೇಲ್, ಇಮಗ್ನ, ರೋನವ್, ಧೃತಿಕಾ, ಮೋಕ್ಷಿತ್, ಅಕ್ಷ ಭಾಗವಹಿಸಿದ್ದು ಪ್ರಥಮ, ದ್ವಿತೀಯ, ಹಾಗೂ ತೃತೀಯ ಸ್ಥಾನ ಗಳಿಸಿ ಬಹುಮಾನಗಳನ್ನು ಪಡೆÀದುಕೊಂಡಿದ್ದಾರೆ. ರಾಜ್ಯ ಕರಾಟೆ ಸಂಸ್ಥೆ ಅಧ್ಯಕ್ಷ ಡಾ.ಡಿಲಿತ್ ಉತ್ತಪ್ಪ, ತರಬೇತುದಾರ ಕೆ.ಎಂ.ಭರತ್, ವಿದ್ಯಾಸಂಸ್ಥೆ ಪ್ರಾಂಶುಪಾಲ ಎಚ್.ಎನ್.ದೇವರಾಜ್, ಮುಖ್ಯಶಿಕ್ಷಕ ಕೆ.ಎಲ್.ಅಶ್ವಥ್ ಹಾಜರಿದ್ದರು.