ಮಡಿಕೇರಿ, ಸೆ. ೧೩: ಕೊಡಗಿನ ವಿವಿದ ಭಾಗದ ಕೊಡವರು ತಮ್ಮ ವಿದ್ಯಾಭ್ಯಾಸ, ಉದ್ಯೋಗ, ವ್ಯಾಪಾರಕ್ಕಾಗಿ ಬೆಂಗಳೂರಿನ ಹಲವೆಡೆ ನೆಲೆಸಿದ್ದಾರೆ. ಹನುಮಂತನಗರ, ಶ್ರೀನಗರ, ಗಿರಿನಗರ, ಚಾಮರಾಜಪೇಟೆ, ಬಸವನಗುಡಿ, ಪÀದ್ಮನಾಭನಗರ, ಹೊಸಕೆರೆ ಹಳ್ಳಿ, ಉತ್ತರ ಹಳ್ಳಿಯಲ್ಲಿ ನೆಲೆ ನಿಂತಿರುವವರು ಅಲ್ಲಿ ಇಗ್ಗುತ್ತಪ್ಪ ಕೊಡವ ಸಂಘ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇಗ್ಗುತ್ತಪ್ಪ ಕೊಡವ ಸಂಘದಲ್ಲಿ ಸುಮಾರು ೩೦೦ ಕುಟುಂಬವಿದ್ದು, ಕೊಡವರ ಆಚಾರ, ವಿಚಾರ, ಪದ್ದತಿ, ಪರಂಪರೆಯ ಬೆಳವಣಿಗೆಗಾಗಿ ಮತ್ತು ಸಂಘದ ಸದಸ್ಯರ ಕಷ್ಟ ಸುಖಕ್ಕಾಗಿ ಕೆಲಸ ನಿರ್ವಹಿಸುತ್ತಿದೆ.

ಈ ಸಂಘ ಸ್ಥಾಪನೆಯಾಗಿ ಸುಮಾರು ೩೫ ವರ್ಷ ಪೂರ್ಣಗೊಂಡಿದೆ. ಈ ಸಂದರ್ಭ ಸಂಘದ ಕಾರ್ಯಚಟುವಟಿಕೆಗೆ ಅದರÀÀದ್ದೇ ಆದ ಒಂದು ಸ್ವಂತ ಕಟ್ಟಡವನ್ನು ಇದೀಗ ವ್ಯವಸ್ಥೆ ಮಾಡಲಾಗಿದೆ. ಸಂಘದ ಪ್ರಧಾನ ಪೋಷಕರಾದ ಚೆಪ್ಪುಡೀರ ಎಂ ತಿಲಕ್ ಸುಬ್ಬಯ್ಯ ಅವರು ಉದಾರವಾಗಿ ತಮ್ಮ ಟ್ರಸ್ಟ್ನ ಕಟ್ಟಡವನ್ನು ಸಂಘದ ಪ್ರಸ್ತುತ ಅಧ್ಯಕ್ಷರಾದ ಮಾಣಿಪಂಡ ಬಿ. ಪೂಣಚ್ಚ ಅವರಿಗೆ ಹಸ್ತಾಂತರಿಸಿದ್ದಾರೆ. ಈ ಸಂದರ್ಭ ಸಂಘದ ಸರ್ವ ಸದಸ್ಯರು ಹಾಜರಿದ್ದರು.