ಗೋಣಿಕೊಪ್ಪ ವರದಿ, ಸೆ. ೧೩: ಕಾವೇರಿ ಕಾಲೇಜು ಅಲುಮ್ನಿ ಅಸೋಸಿಯೇಷನ್ ವಾರ್ಷಿಕ ಮಹಾಸಭೆಯು ಗೋಣಿಕೊಪ್ಪ ಕಾವೇರಿ ಕಾಲೇಜು ಆವರಣದಲ್ಲಿ ಹಳೇ ವಿದ್ಯಾರ್ಥಿಗಳೇ ನಿರ್ಮಿಸಿರುವ ಗೋಲ್ಡನ್ ಜುಬ್ಲಿ ಸಭಾಂಗಣದಲ್ಲಿ ನಡೆಯಿತು. ಸದಸ್ಯರು ಪಾಲ್ಗೊಂಡು ಸೂಕ್ತ ಸಲಹೆ, ಮಾರ್ಗದರ್ಶನ ನೀಡಿದರು. ಖಜಾಂಚಿ ಕೆ. ಸಿ. ಮುತ್ತಪ್ಪ ಲೆಕ್ಕಪತ್ರ ಮಂಡಿಸಿದರು.
ಕಾರ್ಯದರ್ಶಿ ಪಳಂಗAಡ ವಾಣಿ ಚೆಂಗಪ್ಪ ಅಸೋಷಿಯೇಷನ್ ವರದಿ ಮಂಡಿಸಿ ಮಾತನಾಡಿ, ೨೦೦೩ ರಲ್ಲಿ ಪ್ರಾರಂಭಗೊAಡ ಅಸೋಸಿಯೇಷನ್ ೨ ಸಾವಿರ ಜೀವಾವಧಿ ಸದಸ್ಯರನ್ನು ಹೊಂದಿದೆ. ಪಾನ್ ಕಾರ್ಡ್, ಬ್ಯಾಂಕ್ ಖಾತೆ, ವೆಬ್‌ಸೈಟ್ ಕೂಡ ಹೊಂದಿದೆ. ಪ್ರತೀ ೫ ವರ್ಷಕ್ಕೊಮ್ಮೆ ಕಾಲೇಜು ಮೌಲ್ಯಾಂಕನಕ್ಕಾಗಿ ಬರುವ ನ್ಯಾಕ್ ತಂಡದಿAದ ಅಸೋಷಿಯೇಷನ್ ಕಾರ್ಯ ಚಟುವಟಿಕೆ ಮೆಚ್ಚುಗೆ ಪಡೆದುಕೊಂಡಿದೆ.
೧೯೭೯ನೇ ಬ್ಯಾಚ್ ವಿದ್ಯಾರ್ಥಿಗಳು ೫ ಲಕ್ಷ ರೂ. ನೀಡಿರುವುದು ಹೆಮ್ಮೆಯ ವಿಚಾರವಾಗಿದೆ. ಅಸೋಸಿಯೇಷನ್‌ನ ಮೂವರು ಕಾವೇರಿ ಕಾಲೇಜು ಆಡಳಿತ ನಡೆಸುವ ಕಾವೇರಿ ಎಜುಕೇಷನ್ ಸೊಸೈಟಿ ಮಂಡಳಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದರು.
ಅಸೋಸಿಯೇಷನ್ ಅಧ್ಯಕ್ಷ ಡಾ. ಮಾಳೇಟಿರ ಬಿ. ಕಾವೇರಿಯಪ್ಪ ಮಾತನಾಡಿ, ಹಿರಿಯ ವಿದ್ಯಾರ್ಥಿಗಳು ಅಸೋಸಿಯೇಷನ್‌ಗೆ ಆರ್ಥಿಕ ಸಹಕಾರ ನೀಡುವ ಮೂಲಕ ಕಟ್ಟಡ ನಿರ್ಮಾಣದ ಕನಸು ನನಸು ಮಾಡಲು ಪ್ರಯತ್ನಿಸಬೇಕಿದೆ. ಕಾಲೇಜು ಅಭಿವೃದ್ಧಿಯಲ್ಲಿ ಹಿರಿಯ ವಿದ್ಯಾರ್ಥಿಗಳ ಕೊಡುಗೆ ಮಹತ್ವ ಪಡೆದುಕೊಂಡಿದೆ ಎಂದರು.
ಉಪಾಧ್ಯಕ್ಷ ಕೆ.ಪಿ. ಅಚ್ಚಯ್ಯ ಮಾತನಾಡಿ, ಈಗಾಗಲೇ ೧ ಕೋಟಿ ರೂ. ವೆಚ್ಚದಲ್ಲಿ ಗೋಲ್ಡನ್ ಜುಬ್ಲಿ ಕಟ್ಟಡ ನಿರ್ಮಿಸಲಾಗಿದ್ದು, ೨ ಮಹಡಿ ನಿರ್ಮಾಣ ಮುಗಿದಿದೆ. ಮೇಲಂತಸ್ತಿನ ಮಹಡಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಹಳೇ ವಿದ್ಯಾರ್ಥಿಗಳಿಂದ ಮತ್ತಷ್ಟು ನೆರವು ಪಡೆಯಬೇಕಿದೆ. ವಿದ್ಯಾರ್ಥಿಗಳ ಅನುದಾನ ಮಾತ್ರ ಇರುವುದರಿಂದ ಎಲ್ಲರ ಸಹಕಾರ ಅಗತ್ಯ ಎಂದರು. ಅಸೋಸಿಯೇಷನ್ ಸದಸ್ಯರು ಭಾಗವಹಿಸಿದ್ದರು.
ಸಂಚಾಲಕಿ ಎಸ್.ಎಂ. ರಜನಿ, ನಿರ್ದೇಶಕರುಗಳಾದ ಪಿ.ಬಿ. ನಟೇಶ್, ಪಿ.ಬಿ. ಪೂಣಚ್ಚ, ಜಮ್ಮಡ ಜಯ ಜೋಯಪ್ಪ, ಜೆ.ಬಿ. ಬಿದ್ದಪ್ಪ, ಬಿ. ಎಸ್. ಆಶಾ, ಎನ್. ಕೆ. ದೇವಯ್ಯ, ಕೆ.ಕೆ. ಅವನಿಜ ಸೋಮಯ್ಯ, ನಿದೇಶಕರಗಳಾದ ಕೆ.ಎಂ. ಅಜಿತ್ ಅಯ್ಯಪ್ಪ, ಪಿ.ಟಿ. ಸುಭಾಶ್ ಸುಬ್ಬಯ್ಯ, ಸಣ್ಣುವಂಡ ಕಿಶೋರ್ ನಾಚಪ್ಪ, ಮನು ನಂಜಪ್ಪ ಇದ್ದರು. ವಿದ್ಯಾರ್ಥಿನಿ ಶಿಲ್ಪ ಪ್ರಾರ್ಥಿಸಿದರು. ನಿರ್ದೇಶಕಿ ಕೆ.ಸಿ. ಪವಿತ್ರ ವಂದಿಸಿದರು.