ಗೋಣಿಕೊಪ್ಪ ವರದಿ, ಸೆ. ೧೩: ಕ್‌ಗ್ಗಟ್ಟ್ನಾಡ್ ಫ್ಲೆöÊಯಿಂಗ್ ಎಲ್ಬೋಸ್ ಸಂಘಟನೆ ಹಾಗೂ ಹಾಕಿ ಕೂರ್ಗ್ ಸಹಯೋಗದಲ್ಲಿ ಅಕ್ಟೋಬರ್ ೨ ರಿಂದ ಗ್ರಾಮ ಪಂಚಾಯಿತಿ ಮಟ್ಟದ ತಂಡಗಳಿಗೆ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನದಲ್ಲಿ ಹಾಕಿ ಟೂರ್ನಿ ಆಯೋಜಿಸಲಾಗಿದೆ ಎಂದು ಕ್‌ಗ್ಗಟ್ಟ್ನಾಡ್ ಫ್ಲೆöÊಯಿಂಗ್ ಎಲ್ಬೋಸ್ ಸಂಘಟನೆ ಸದಸ್ಯ ಮಾಚಿಮಾಡ ಕಾರ್ಯಪ್ಪ ತಿಳಿಸಿದರು.
ಟೂರ್ನಿ ಬ್ರೋಚರ್ ಬಿಡುಗಡೆಗೊಳಿಸಿ ಮಾತನಾಡಿ, ೩ನೇ ವರ್ಷದ ಟೂರ್ನಿಯಾಗಿದ್ದು, ಸೆಪ್ಟೆಂಬರ್ ೫ ರವರೆಗೆ ನಡೆಯಲಿದೆ. ಕೊಡಗು ಜಿಲ್ಲಾಮಟ್ಟದ ಪಂದ್ಯಾವಳಿಯಾಗಿದೆ. ಗ್ರಾಮ ಪಂಚಾಯಿತಿ ಮಟ್ಟದ ಆಟಗಾರರು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಒಂದು ತಂಡಕ್ಕೆ ೪ ಅತಿಥಿ ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಟಗಾರ ಅದೇ ತಂಡಕ್ಕೆ ಆಡಬೇಕಿದೆ. ತಂಡ ರಚನೆ ಮಾಡದಿದ್ದಲ್ಲಿ ಬೇರೆ ತಂಡಗಳಿಗೆ ಅವಕಾಶವಿದೆ. ಗ್ರಾಮದ ಆಟಗಾರ ಅವರ ಗ್ರಾಮದ ತಂಡವನ್ನು ಪ್ರತಿನಿಧಿಸಬೇಕು. ತಂಡದ ಹೊರತು ಬೇರೆ ತಂಡಗಳಲ್ಲಿ ಆಟವಾಡಲು ಅವಕಾಶ ನೀಡಲಾಗುತ್ತಿಲ್ಲ ಎಂದು ತಿಳಿಸಿದರು.
ಪ್ರಮುಖರಾದ ಮಲ್ಲಮಾಡ ಸನತ್ ಮಾತನಾಡಿ, ಇಲ್ಲಿಯವರೆಗೆ ಸೆವೆನ್ ಸೈಡ್ ನಿಯಮದಡೀ ಪಂದ್ಯ ನಡೆಸಲಾಗಿತ್ತು. ಈ ಬಾರಿ ೧೧ ಆಟಗಾರರು ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ. ಹೆಚ್ಚಿನ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸೆಪ್ಟೆಂಬರ್ ೧೫ ರ ವರೆಗೆ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಸ್ಥಳೀಯ ಪ್ರತಿಭೆಗಳಿಗೆ ದೊಡ್ಡ ಅವಕಾಶ ಎಂದರು.
ಸದಸ್ಯರಾದ ಪೆಮ್ಮಂಡ ಧರ್ಮಜ, ಪೋರಂಗಡ ಪ್ರಥ್ವಿ, ಮೇಚಮಾಡ ಅಪ್ಪಚ್ಚು ಇದ್ದರು.