ಚೆಯ್ಯಂಡಾಣೆ, ಸೆ. ೧೨: ಕಕ್ಕಬ್ಬೆ ಪ್ರಾಥಮಿಕ ಕೃಷಿ ಪತ್ತಿನ (ನಂ ೨೭೭೯) ಸಹಕಾರ ಸಂಘವು ೨೦೨೪-೨೫ ನೇ ಸಾಲಿನಲ್ಲಿ ೧,೧೮೬ ಜನ ಸದಸ್ಯರನ್ನು ಹೊಂದಿದ್ದು ರೂ.೧ ಕೋಟಿ ೨೬ ಲಕ್ಷ ಪಾಲು ಬಂಡವಾಳ ಹಾಗೂ ರೂ.೧೯ ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ ಎಂದು ಸಂಘದ ಅಧ್ಯಕ್ಷ ಕಲ್ಯಾಟಂಡ ಎ.ತಮ್ಮಯ್ಯ ತಿಳಿಸಿದರು.
ಕಕ್ಕಬ್ಬೆ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಸಂಘದಿAದ ಒಟ್ಟು ರೂ.೧೧ ಕೋಟಿಯಷ್ಟು ಕೆಸಿಸಿ ಸಾಲ, ಸ್ವಸಹಾಯ ಗುಂಪು ಸಾಲ, ಜಾಮೀನು ಸಾಲ, ಗೊಬ್ಬರ ಸಾಲ, ನಿರಖು ಠೇವಣಿ ಸಾಲ ನೀಡಿದ್ದೇವೆ. ರೂ.೨ ಕೋಟಿ ಮೊಬಲಗನ್ನು ಕೆಡಿಸಿಸಿ ಬ್ಯಾಂಕಿನಲ್ಲಿ ಪಾಲುಬಂಡವಾಳ ಕ್ಷೇಮನಿಧಿ ಹಾಗೂ ನಿರಖು ಠೇವಣಿಯಾಗಿ ಧನವಿನಿಯೋಗ ಮಾಡಲಾಗಿದೆ ಎಂದರು.
ಸAಘವು ವ್ಯಾಪಾರ ವಹಿವಾಟು, ಸಾಲ ವಿತರಣೆ, ಸಾಲ ವಸೂಲಾತಿಯಿಂದ ರೂ.೨೩.೦೯ ಲಕ್ಷ ನಿವ್ವಳ ಲಾಭವನ್ನು ಹೊಂದಿದೆ. ಸದರಿ ಲಾಭವನ್ನು ಎಲ್ಲಾ ನಿಧಿಗಳಿಗೆ ಹಂಚಿ ಶೇಕಡ ೮ ರಷ್ಟು ಡಿವಿಡೆಂಡ್ ವಿತರಣೆಗಾಗಿ ಇಟ್ಟಿದ್ದೇವೆ ಎಂದರು. ಸಂಘದಲ್ಲಿ ಈಗಾಗಲೇ ಕೆಡಿಸಿಸಿ ಬ್ಯಾಂಕಿನ ನೂತನ ಶಾಖೆಯನ್ನು ಸಂಘದ ಕಟ್ಟಡದಲ್ಲಿ ತೆರೆಯುವುದರಿಂದ ಅದರ ಕಾಮಗಾರಿ ಪ್ರಗತಿಯಲ್ಲಿದೆ. ಸಂಘದ ಮಹಾಸಭೆಯು ತಾ.೨೦ ರಂದು ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಎ.ಎಸ್. ಅಯ್ಯಪ್ಪ, ನಿರ್ದೇಶಕರಾದ ಬಿ. ಎಂ. ಬೆಳ್ಯಪ್ಪ, ಕೆ.ಎಂ. ಬೋಪಣ್ಣ, ಎನ್.ಸಿ ಪೂವಯ್ಯ, ಎನ್.ಬಿ ಸುನಿತಾ, ಎ.ಎನ್ ಲಕ್ಷ್ಮಣ, ಪಿ.ಯು.ಕರುಂಬಯ್ಯ, ಕೆ.ಬಿ ಅಚ್ಚಯ್ಯ, ಕೆಡಿಸಿಸಿ ಬ್ಯಾಂಕಿನ ಮೇಲ್ವಿಚಾರಕರಾದ ನವೀನ್ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುಳಾ ಹಾಜರಿದ್ದರು.