ಮಡಿಕೇರಿ, ಸೆ. ೫: ತೆಲಂಗಾಣದ ಹೈದರಾಬಾದ್‌ನ ಗೋಪಿಚಂದ್ ಬ್ಯಾಡ್‌ಮಿಂಟನ್ ಅಕಾಡೆಮಿಯಲ್ಲಿ ಸೆ. ೨ ರಿಂದ ೫ರತನಕ ಜರುಗಿದ ಯೋನೆಕ್ಸ್ ಸನ್‌ರೈಸ್ ೭೯ನೇ ದಕ್ಷಿಣ ವಲಯ ಅಂತರರಾಜ್ಯ ಬ್ಯಾಡ್‌ಮಿಂಟನ್ ಸ್ಪರ್ಧೆ - ೨೦೨೫ರಲ್ಲಿ ಕೊಡಗಿನ ಯುವತಿ ಬೊಪ್ಪಂಡ ದಿಯಾ ಭೀಮಯ್ಯ ಪ್ರಶಸ್ತಿ ಗಳಿಸಿದ್ದಾರೆ.
ಬ್ಯಾಡ್‌ಮಿಂಟನ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ದಿಯಾ ಭೀಮಯ್ಯ ೧೯ ವರ್ಷದ ವಿಭಾಗದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದರು. ಈ ಪಂದ್ಯಾವಳಿಯಲ್ಲಿ ಇವರು ಸಿಂಗಲ್ಸ್ನಲ್ಲಿ ದ್ವಿತೀಯ ಹಾಗೂ ತಂಡ ವಿಭಾಗÀ (ಟೀಮ್ ಈವೆಂಟ್)ದಲ್ಲಿ ತೃತೀಯ ಸ್ಥಾನದ ಸಾಧನೆ ಮಾಡಿದ್ದಾರೆ.