ಗೋಣಿಕೊಪ್ಪ, ಸೆ. ೫: ಪಟ್ಟಣದ ಶ್ರೀ ಕಾವೇರಿ ಸಮಿತಿಯ ೪೭ನೇ ಜನೋತ್ಸವದ ಲಾಂಛನವನ್ನು ಅನಾವರಣಗೊಳಿಸುವ ಮೂಲಕ ದಸರಾ ಕಾರ್ಯಕ್ರಮಕ್ಕೆ ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಚಾಲನೆ ನೀಡಿದರು. ಶ್ರೀ ಉಮಾಮಹೇಶ್ವರಿ ದೇವಾಲಯದಲ್ಲಿ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಪೂಜೆ ನಡೆಸಿ ೧೧ ದಿನಗಳು ನಡೆಯುವ ದೇವಿಯ ಆರಾಧನೆಗೆ ಅರ್ಚಕರನ್ನು ಆಹ್ವಾನಿಸುವ ಮೂಲಕ ಜನೋತ್ಸವಕ್ಕೆ ಮುನ್ನುಡಿ ಇಡಲಾಗಿದೆ. ಈ ಸಂದರ್ಭ ಕಾವೇರಿ ದಸರಾ ಸಮಿತಿಯ ಉಪಾಧ್ಯಕ್ಷ ನಾಯಂದರ ಶಿವಾಜಿ, ಸಾಂಸ್ಕೃತಿಕ ಸಮಿತಿಯ ಚಂದನ್ ಕಾಮತ್, ಗ್ರಾ.ಪಂ. ಉಪಾಧ್ಯಕ್ಷೆ ಮಂಜುಳ, ಸದಸ್ಯರಾದ ರಾಮದಾಸ್, ಧ್ಯಾನ್ ಸುಬ್ಬಯ್ಯ, ಸಮಿತಿ ಪದಾಧಿಕಾರಿಗಳಾದ ರಾಜಶೇಖರ್, ನಾಮೇರ ಅಂಕಿತ್, ಕೊಕ್ಕಂಡ ರೋಷನ್, ವರಲಕ್ಷಿö್ಮ, ಧನಲಕ್ಷಿö್ಮ, ನೂರೆರ ಧನ್ಯ ಮತ್ತಿತರರು ಹಾಜರಿದ್ದರು.