ಶನಿವಾರಸಂತೆ, ಸೆ. ೪: ಸದಸ್ಯರ ಸಹಕಾರವಿದ್ದರೆ ಮಾತ್ರ ಸಹಕಾರ ಸಂಘ ಸದೃಢವಾಗಿ ಬೆಳೆದು ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಸಿ.ಶರತ್ ಶೇಖರ್ ಹೇಳಿದರು.
ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸಂಘದ ೨೦೨೪-೨೫ ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘದಲ್ಲಿ ಒಟ್ಟು ೨೦೦೪ ಮಂದಿ ಸದಸ್ಯರಿದ್ದು ಶೇ.೨೦ ರಷ್ಟು ಸದಸ್ಯರು ಮಾತ್ರ ವ್ಯವಹಾರ ಮಾಡುತ್ತಿದ್ದಾರೆ. ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಗಣಪತಿಯವರು ಶೇ.೨೫ ಸಾವಿರ ಅನುದಾನದ ಜೊತೆಗೆ ಒಂದು ಕಂಪ್ಯೂಟರ್ ಕೊಡುಗೆ ನೀಡಿದ್ದಾರೆ. ಶಾಸಕ ಡಾ.ಮಂತರ್ ಗೌಡ ಅವರು ರೂ. ೧೫ ಲಕ್ಷ ಅನುದಾನ ಮಂಜೂರು ಮಾಡಿದ್ದಾರೆ. ಅಪೆಕ್ಸ್ ಬ್ಯಾಂಕಿನ ಸಹಕಾರವೂ ಇದೆ. ಬೈಲಾ ತಿದ್ದುಪಡಿ ಮಾಡಲಾಗುವುದು. ಸದಸ್ಯರು ಸಂಘದ ವ್ಯವಹಾರದಲ್ಲಿ ಸಹಕರಿಸಿದರೆ ಸಂಘದ ಅಭಿವೃದ್ಧಿ ಸಾಧ್ಯ ಎಂದರು.
ಸಭೆಯಲ್ಲಿ ಸಂಘದ ಖರ್ಚು-ವೆಚ್ಚ, ಪಾಲು ಬಂಡವಾಳ, ಕ್ಷೇಮನಿಧಿ, ಇತರೆ ನಿಧಿ ಬಂಡವಾಳ, ಸಾಲ-ಸೌಲಭ್ಯಗಳ ಬಗ್ಗೆ ಚರ್ಚೆ ನಡೆಯಿತು. ಚರ್ಚೆಯಲ್ಲಿ ಸದಸ್ಯರಾದ ಕೊಮಾರಪ್ಪ, ಗಣೇಶ್, ಟಿ.ಆರ್.ಪುರುಷೋತ್ತಮ್, ಎ.ಎಂ.ಆನAದ್, ಎ.ಎಚ್.ಚಂದ್ರಕಾAತ್, ಟಿ.ಆರ್.ಸುರೇಶ್, ಟಿ.ಆರ್.ಗಿರೀಶ್ ಇತರರು ಪಾಲ್ಗೊಂಡಿದ್ದರು.
ಡಿಸಿಸಿ ಬ್ಯಾಂಕಿನ ೧೦೦ನೇ ವಾರ್ಷಿಕೋತ್ಸವ ಸಂದರ್ಭ ಶನಿವಾರಸಂತೆ ಸಹಕಾರ ಬ್ಯಾಂಕಿನ ಉತ್ತಮ ಕಾರ್ಯನಿರ್ವಹಣೆಗಾಗಿ ನೀಡಿದ ಅನುದಾನ ಕೊಡುಗೆಯನ್ನು ಅಧ್ಯಕ್ಷ ಎಸ್.ಸಿ.ಶರತ್ ಶೇಖರ್ ಹಾಗೂ ನಿರ್ದೇಶಕ ಎಸ್.ವಿ.ಜಗದೀಶ್ ಅವರು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೀತು ಚಂದ್ರರಿಗೆ ಹಸ್ತಾಂತರಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೀತುಚಂದ್ರ ಹಾಗೂ ಪ್ರಥಮ ದರ್ಜೆ ಗುಮಾಸ್ತ ಜಿ.ಎನ್.ಅಶೋಕ್ ಕುಮಾರ್ ಸಂಘದ ವಾರ್ಷಿಕ ವರದಿ ಹಾಗೂ ಲೆಕ್ಕ ಪರಿಶೋಧನ ವರದಿಯನ್ನು ಸಭೆಯಲ್ಲಿ ಮಂಡಿಸಿದರು.
ಸಂಘದ ಉಪಾಧ್ಯಕ್ಷೆ ಸವಿತಾ ಸತೀಶ್, ನಿರ್ದೇಶಕರಾದ ಎಸ್.ವಿ.ಜಗದೀಶ್, ಎಸ್.ಎನ್.ರಘು, ಸಿ.ಜೆ.ಗಿರೀಶ್, ಎ.ಆರ್. ರಕ್ಷಿತ್, ಎಸ್.ಯು.ಆನಂದ್, ವಿ.ಸಿ.ಹೊನ್ನರಾಜಪ್ಪ, ವಿ.ಎಸ್.ಸುದರ್ಶನ್, ಸಿ.ಎಚ್.ರೂಪಾ, ಆಶಾರಾಣಿ, ಮಂಜಯ್ಯ, ಕೆ.ಡಿ.ಸಿ.ಸಿ.ಬ್ಯಾಂಕ್ ಮೇಲ್ವಿಚಾರಕ ಎಸ್.ಎಂ.ಭರತ್, ಸಿಬ್ಬಂದಿ ಹಾಜರಿದ್ದರು. ನಿರ್ದೇಶಕ ಸಿ.ಜೆ.ಗಿರೀಶ್ ಸ್ವಾಗತಿಸಿ, ಅಶೋಕ್ ವಂದಿಸಿದರು.