ಸಿದ್ದಾಪುರ, ಸೆ.೪ : ಕಳೆದ ಮೂರು ತಿಂಗಳಿನಿAದ ಬುಡಕಟ್ಟು ಕುಟುಂಬಗಳಿಗೆ ಸರಕಾರದಿಂದ ನೀಡುವ ಪೌಷ್ಟಿಕ ಆಹಾರ ದೊರಕುತ್ತಿಲ್ಲ ಎಂದು ಬುಡಕಟ್ಟು ಕುಟುಂಬಗಳು ಸರಕಾರ ಹಾಗೂ ಐಟಿಡಿಪಿ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯ ಗೇಟ್ ಹಾಡಿಯಲ್ಲಿ ನಡೆದಿದೆ. ಮಾಲ್ದಾರೆ ಗ್ರಾ.ಪಂ.

ವ್ಯಾಪ್ತಿಯ ಹಾಡಿಗಳಲ್ಲಿ ಸುಮಾರು ೧೫೦ ಬುಡಕಟ್ಟು ಜನಾಂಗದವರು ವಾಸವಿದ್ದು ೫೦೦ಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದ್ದಾರೆ. ಸರಕಾರವು ಬುಡಕಟ್ಟು ಜನಾಂಗದವರಿಗಾಗಿ ಪ್ರತೀ ತಿಂಗಳು ಪೌಷ್ಠಿಕ ಆಹಾರ ಪದಾರ್ಥಗಳಾದ ಕಾಳುಗಳು, ಸಕ್ಕರೆ, ಬೆಲ್ಲ, ಮೊಟ್ಟೆ, ತುಪ್ಪ, ಅಕ್ಕಿಯನ್ನು ನೀಡುತ್ತದೆ. ಆದರೆ ಕಳೆದ ಮೂರು ತಿಂಗಳುಗಳಿAದ ಬುಡಕಟ್ಟು ಜನಾಂಗದವರಿಗೆ ಪೌಷ್ಟಿಕ ಆಹಾರ ದೊರಕದೇ ಇರುವುದು ಇಲ್ಲಿನ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕಾಫಿ ತೋಟಗಳಲ್ಲಿ ಅಸ್ಸಾಂ ಮೂಲದ ಕಾರ್ಮಿಕರು ಹೆಚ್ಚಾಗಿ ವಾಸವಿದ್ದು ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಹಾಡಿಗಳ ಬುಡಕಟ್ಟು ಜನಾಂಗದವರಿಗೆ ಕೆಲಸ ಇಲ್ಲದಂತಾಗಿದೆ. ಮಳೆಗಾಲದಲ್ಲಿ ಕೆಲಸ ಇಲ್ಲದೇ ಸಂಕಷ್ಟಕ್ಕೆ ಗುರಿಯಾಗುವ ಬುಡಕಟ್ಟು ಜನಾಂಗದವರಿಗೆ ಸರಕಾರದಿಂದ ನೀಡುವ ಪೌಷ್ಟಿಕ ಆಹಾರ ಪದಾರ್ಥಗಳು ಕುಟುಂಬದ ನಿರ್ವಹಣೆಗೆ ಸಹಕಾರಿಯಾಗುತ್ತಿತ್ತು. ಇದೀಗ ಪೌಷ್ಠಿಕ ಆಹಾರ ಸರಬರಾಜು ಕೂಡ ಸ್ಥಗಿತಗೊಂಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಇಲ್ಲಿನ ನಿವಾಸಿಗಳು ತಮ್ಮ ನೋವು ತೋಡಿಕೊಂಡರು.

ಸರಕಾರವು ಬುಡಕಟ್ಟು ಜನಾಂಗದವರಿಗಾಗಿ ಪೌಷ್ಟಿಕ ಆಹಾರ ನೀಡುತ್ತಿತ್ತು. ಕೆಲಸವಿಲ್ಲದೆ ಬಡತನದಿಂದ ಬಳಲುವ ಹಾಡಿ ನಿವಾಸಿಗಳಿಗೆ ಆಹಾರ ಪದಾರ್ಥಗಳು ಜೀವನ ನಿರ್ವಹಣೆಗೆ ಸಹಕಾರಿಯಾಗಿತ್ತು.ಆದರೆ ಕಳೆದ ಮೂರು ತಿಂಗಳಿನಿAದ ಯಾವುದೇ ಪದಾರ್ಥಗಳು ಸಿಕ್ಕಿಲ್ಲ. ಸರಕಾರ ಆಹಾರ ಸರಬರಾಜು ಮಾಡುವ ಟೆಂಡರ್‌ಅನ್ನು ಜಿಲ್ಲೆಯವರಿಗೆ ನೀಡಿದ್ದಲ್ಲಿ ಎಲ್ಲವೂ ಸರಿಯಾಗಲಿದೆ. ಕಾಡಂಚಿನಲ್ಲಿ ವಾಸವಿರುವ ಬುಡಕಟ್ಟು ಸಮುದಾಯವು ಮೂಲಭೂತ ಸೌಕರ್ಯಗಳ ಕೊರತೆಯು ಜೀವನಸಾಗಿಸುತ್ತಿದೆ. ಈ ನಡುವೆ ಪೌಷ್ಟಿಕ ಆಹಾರದ ಕೊರತೆ ಉಂಟಾದರೆ ಜೀವನ ನರಕವಾಗಿ ಮಾರ್ಪಾಡು ಹೊಂದಲಿದೆ ಎಂದು ಹಾಡಿ ನಿವಾಸಿ ಇಂದಿರಾ ಹೇಳಿದರು.

ಪೌಷ್ಟಿಕ ಆಹಾರÀವನ್ನು ಉತ್ತಮ ಗುಣಮಟ್ಟದಲ್ಲಿ ನೀಡಬೇಕೆಂಬ ಉದ್ದೇಶದಿಂದ ಸರಬರಾಜು ಪ್ರಕ್ರಿಯೆ ಸ್ವಲ್ಪ ತಡವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಪೌಷ್ಟಿಕ ಆಹಾರ ಸರಬರಾಜು ಪ್ರಾರಂಭವಾಗಿದೆ. ಗುಡ್ಡಗಾಡು ಪ್ರದೇಶಗಳಿಗೆ ಸರಬರಾಜು ಮಾಡುವುದರಿಂದ ಇತರೆಡೆಗೆ ತಲುಪುವುದು ತಡವಾಗಿದೆ. ಪ್ರತಿ ತಿಂಗಳ ೨೦ ನೇ ತಾರೀಖಿನ ಒಳಗೆ ಆಹಾರವನ್ನು ಸರಬರಾಜು ಮಾಡಬೇಕೆಂದು ಆದೇಶ ನೀಡಿದ್ದೇವೆ ಎಂದು ಐಟಿಡಿಪಿ