ಮಡಿಕೇರಿ, ಸೆ. ೪: ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ೨೦೨೪-೨೫ನೇ ಸಾಲಿನ ೧೦೦ನೇ ವಾರ್ಷಿಕ ಮಹಾಸಭೆಯು ಮಡಿಕೇರಿಯಲ್ಲಿರುವ ಕೇಂದ್ರ ಕಚೇರಿಯ ಉನ್ನತಿ ಭವನದ ದಿ. ಪಂದ್ಯAಡ. ಐ .ಬೆಳ್ಯಪ್ಪ ಸ್ಮಾರಕ ಸಭಾಂಗಣದಲ್ಲಿ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ. ಗಣಪತಿ ಅಧ್ಯಕ್ಷತೆಯಲ್ಲಿ ನೆರವೇರಿತು.
ಲಾಭದಲ್ಲಿ ಮುಂದುವರೆ ಯುತ್ತಿರುವ ಬ್ಯಾಂಕ್ ರೂ.೧೬.೭೦ ಕೋಟಿ ಲಾಭ ಗಳಿಸಿರುವುದಾಗಿ ಅಧ್ಯಕ್ಷರು ಮಾಹಿತಿ ನೀಡಿದರು.
ಬ್ಯಾಂಕ್ ೧೯೨೧ ರ ಜೂನ್ ೨೮ ರಂದು ಸ್ಥಾಪನೆಗೊಂಡು, ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಸಾರ್ಥಕತೆಯ ೧೦೪ ವರ್ಷಗಳನ್ನು ಪೂರ್ಣಗೊಳಿಸಿ, ಇದೀಗ ೧೦೫ರ ಸಂವತ್ಸರದಲ್ಲಿ ಪಾರದರ್ಶಕ ಆಡಳಿತವನ್ನು ನಡೆಸುತ್ತಿದೆ. ಆರ್.ಬಿ.ಐ. ನಬಾರ್ಡ್ ಹಾಗೂ ಅಪೆಕ್ಸ್ ಬ್ಯಾಂಕಿನಿAದ ನೀಡಲ್ಪಡುವ ಆರ್ಥಿಕ ಮತ್ತು ತಾಂತ್ರಿಕ ಸೌಲಭ್ಯಗಳನ್ನು ಬಳಸಿಕೊಂಡು ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದ್ದು, ಇಂದು ರಾಜ್ಯದಲ್ಲಿರುವ ಜಿಲ್ಲಾ ಸಹಕಾರ ಬ್ಯಾಂಕ್‌ಗಳ ಪೈಕಿ ೩ನೇ ಪ್ರಮುಖ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ಎಂದು ಗುರುತಿಸಲ್ಪಟ್ಟಿರುತ್ತದೆ. ೨೦೨೪-೨೫ನೇ ಸಾಲಿನ ಲೀಡ್ ಬ್ಯಾಂಕಿನ ತ್ರೆöÊಮಾಸಿಕ ಸಭೆಯ ವರದಿಯಂತೆ ಜಿಲ್ಲೆಯಲ್ಲಿನ ವಿವಿಧ ೨೩ ಖಾಸಗಿ ಹಾಗೂ ವಾಣಿಜ್ಯ ಬ್ಯಾಂಕುಗಳಿಗೆ ಹೊಲಿಸಿದಲ್ಲಿ ಪೈಪೋಟಿನಡೆಸಿ ಠೇವಣಾತಿ ಸಂಗ್ರಹಣೆಯಲ್ಲಿ ಶೇ. ೨೭.೧೨ ರಷ್ಟು ಪಾಲು ಪ್ರಥಮ ಸ್ಥಾನ ಹಾಗೂ ಸಾಲ ನೀಡುವಿಕೆಯಲ್ಲಿ ಶೇ. ೨೪.೬೨ ರಷ್ಟು ಪಾಲಿನೊಂದಿಗೆ ಬ್ಯಾಂಕು ದ್ವೀತಿಯ ಸ್ಥಾನ ಹೊಂದಿದ್ದು, ಜಿಲ್ಲೆಯ ಆದ್ಯತಾ ವಲಯದ ಸಾಲ ನೀಡುವಿಕೆಯಲ್ಲಿ ಶೇ.೨೨.೨೦ ರಷ್ಟು ಪಾಲು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಸಾಧನೆಯಾಗಿದ್ದು,೨೦೨೪-೨೫ನೇ ಸಾಲಿನ ಲೆಕ್ಕ ಪರಿಶೋಧನೆ(ಆಡಿಟ್)ನಲ್ಲಿ ಇದೇ ಮೊದಲ ಬಾರಿಗೆ ೯೬ ರಷ್ಟು ಅಂಕ ಪಡೆದು. ಬ್ಯಾಂಕು ಕಳೆದ ಹಲವು ವರ್ಷಗಳಿಂದ ಆಡಿಟ್‌ನಲ್ಲಿ “ಎ” ವರ್ಗೀಕರಣ ಇರುತ್ತದೆ. ಇದು ಬ್ಯಾಂಕಿನ ಆಂತರಿಕ ನಿಯಂತ್ರಣ ವ್ಯವಸ್ಥೆಗೆ ಮಾದರಿಯಾಗಿರುತ್ತದೆ. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕಿನಿAದ, ೨೦೨೩-೨೪ ನೇ ಸಾಲಿಗೆ ಅತ್ಯುತ್ತಮ ಕಾರ್ಯ ನಿರ್ವಹಣೆಗೆ ಬ್ಯಾಂಕಿಗೆ ತಾ. ೧೩.೦೮.೨೦೨೫ರಂದು ನಡೆದ ವಾರ್ಷಿಕ ಮಹಾಸಭೆಯಲ್ಲಿ ತೃತೀಯ ಬಹುಮಾನ ದೊರೆತಿದೆ ಎಂದು ತಿಳಿಸಿದರು. ತಾ. ೩೧.೦೩.೨೦೨೫ರ ಅಂತ್ಯಕ್ಕೆ ಒಟ್ಟು ೨೮೯ ಸಹಕಾರ ಸಂಘಗಳು ಬ್ಯಾಂಕಿನ ಸದಸ್ಯತ್ವವನ್ನು ಪಡೆದಿದ್ದು, ಎ, ಬಿ, ಸಿ ವರ್ಗದ ಸದಸ್ಯರಿಂದ ಒಟ್ಟು ೩೫.೯೧ ಕೋಟಿ ಷೇರು ಬಂಡವಾಳ ಸಂಗ್ರಹಿಸಿದ್ದು, ಕಳೆದ ಸಾಲಿಗೆ ಹೋಲಿಸಿದಲ್ಲಿ ರೂ.೪.೪೫ ಕೋಟಿ ಪಾಲು ಬಂಡವಾಳದಲ್ಲಿ ಹೆಚ್ಚಳವಾಗಿರುತ್ತದೆ. ತಾ. ೩೧.೦೩.೨೦೨೫ರ ಅಂತ್ಯಕ್ಕೆ ಷೇರು ಬಂಡವಾಳ, ಶಾಸನಬದ್ಧ ಮೀಸಲು ನಿಧಿಗಳು ಹಾಗೂ ಬಟವಾಡೆಯಾಗದ ಲಾಭಾಂಶದ ಮೊತ್ತವನ್ನು ಒಳಗೊಂಡAತೆ ಒಟ್ಟು ರೂ.೧೩೭.೫೯ ಕೋಟಿ ಮೊತ್ತದ ಸ್ವಂತ ಬಂಡವಾಳವನ್ನು ಹೊಂದಿದ್ದು, ಬ್ಯಾಂಕಿನ ನೆಟ್‌ವರ್ತ್ ಪ್ರಮಾಣ ರೂ. ೧೩೯.೯೧ ಕೋಟಿ ಇದ್ದು ೨೦೨೪-೨೫ನೇ ಸಾಲಿನಲ್ಲಿ ಬ್ಯಾಂಕಿನ ಒಟ್ಟು ವ್ಯವಹಾರ ರೂ.೩೩೭೨.೧೨ ಕೋಟಿಯಾಗಿದ್ದು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿರುತ್ತದೆ. ಸಂಘಗಳು ಹಾಗೂ ಜಿಲ್ಲೆಯ ಗ್ರಾಹಕರದಿಂದ ವರದಿ ಸಾಲಿನಲ್ಲಿ ದಿ. ೩೧.೦೩.೨೦೨೫ರ ಅಂತ್ಯಕ್ಕೆ ರೂ.೧೭೭೧.೩೩ ಕೋಟಿ ಸಂಗ್ರಹಿಸಲಾಗಿರುತ್ತದೆ. ಇದಲ್ಲದೆ ಕೊಡಗು ಜಿಲ್ಲೆಯ ಸೈನಿಕರ ನಾಡಾಗಿದ್ದು ಬ್ಯಾಂಕಿನ ಎಲ್ಲಾ ಅವಧಿಯ ಠೇವಣಿಗಳಿಗೆ ಶೇ.೦.೨೫ ಹೆಚ್ಚುವರಿ ಬಡ್ಡಿದರ ನೀಡುವ ನೂತನ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು ಸೈನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಬಾಂಡ್ ಹೇಳಿದರು. ವಿವಿಧ ಸಾಲ ಯೋಜನೆಗಳ ಕುರಿತಾಗಿಯೂ ಅವರು ವಿವರವಿತ್ತರು. ವಾರ್ಷಿಕ ಮಹಾಸಭೆಯಲ್ಲಿ ಮಾಲ್ದಾರೆ ಪ್ಯಾಕ್ಸ್ ಅಧ್ಯಕ್ಷ ನಂದಾ ಸುಬ್ಬಯ್ಯ ಅವರು ಬ್ಯಾಂಕಿನ ಆಂತರಿಕ ವಿಷಯಗಳಾದ ಸಿಬ್ಬಂದಿ ವರ್ಗಾವಣೆ, ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ, ಹಾಗು ಸಿಬ್ಬಂದಿಗಳ ಠೇವಣಿ ಸಂಗ್ರಹಣೆ ಇತ್ಯಾದಿ ವಿಷಯಗಳ ಬಗ್ಗೆ ಪ್ರಸ್ತಾಪಿಸಿ ಇದರ ಬಗ್ಗೆ ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರುಗಳಿಗೆ ಪತ್ರವನ್ನು ಬರೆದು ಡಿಸಿಸಿ ಬ್ಯಾಂಕಿನ ಅಧ್ಯಕ್ಷರ ಬಗ್ಗೆ ಇಲ್ಲಸಲ್ಲದ ನಿರಾಧಾರ ಆರೋಪಗಳನ್ನು ಮಾಡಿರುವುದರ ಬಗ್ಗೆ ಸಭೆಯಲ್ಲಿ ಸಹಕಾರ ಸಂಘಗಳ ಅಧ್ಯಕ್ಷರುಗಳು ಆಕ್ಷೇಪಿಸಿ ನಂದಾ ಸುಬ್ಬಯ್ಯ ಅವರ ಬಗ್ಗೆ ಖಂಡನೆ ವ್ಯಕ್ತಪಡಿಸಿದರು. ನಂದಾ ಸುಬ್ಬಯ್ಯ ನವರು ಪ್ರತಿನಿಧಿಸುತ್ತಿರುವ ಮಾಲ್ದಾರೆ ಪ್ಯಾಕ್ಸ್ನಲ್ಲಿ ನಡೆದ ಮೆಣಸು ಹಗರಣದ ೬೪ ತನಿಖೆಯು ಸಮಂಜಸವಾಗಿಲ್ಲದೆ ಇರುವುದರಿಂದ ಮರು ತನಿಖೆ ನಡೆಸಲು ಸಹಕಾರ ಸಂಘಗಳ ನಿಬಂಧಕರಿಗೆ ಪತ್ರ ಬರೆಯುವಂತೆ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.
೨೦೧೬-೧೭ ರಲ್ಲಿ ಬ್ಯಾಂಕಿನಿAದ ಜಿಲ್ಲೆಯ ವ್ಯಾಪ್ತಿಯನ್ನು ಮೀರಿ ಬ್ಯಾಂಕಿನ ಬೈಲಾ ಉಲ್ಲಂಘಿಸಿ ನೀಡಿರುವ ದೊಡ್ಡ ಮೊತ್ತದ ೨ ಸಾಲಗಳು, ಜಿಲ್ಲೆಯ ಒಳಗೆ ನೀಡಿರುವ ಒಂದು ಸಾಲ ಹಾÀUÆ ೨೦೧೮ ರಲ್ಲಿ ಮಾಡಿರುವ ಒಂದು ಹೂಡಿಕೆಯು ವಸೂಲಾತಿಯಾಗದೇ ಎನ್‌ಪಿಎ ಆಗಿರುವುದರ ಬಗ್ಗೆ ಚರ್ಚಿಸಲಾಗಿ ಸಾಲ ನೀಡಿರುವ ಹಾಗೂ ಹೂಡಿಕೆ ಮಾಡಿರುವ ಕ್ರಮದ ಬಗ್ಗೆ ನಿವೃತ್ತ ಲೆಕ್ಕಪರಿಶೋಧಕರು ಹಾಗೂ ನಿವೃತ್ತ ಜಂಟಿ ನಿಬಂಧಕರ ಸಮಿತಿಯೊಂದನ್ನು ರಚಿಸಿ ತನಿಖೆ ನಡೆಸುವಂತೆಯೂ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಬ್ಯಾಂಕಿನ ಬಿ ವರ್ಗದ ಸದಸ್ಯತ್ವದ ಪರಿಷ್ಕರಣೆಗೆ ಸಂಬAಧಿಸಿದAತೆ ಬ್ಯಾಂಕಿನ ಬೈಲಾ ತಿದ್ದುಪಡಿ ಮಾಡಲು ಮಹಾಸಭೆಯ ಅನುಮತಿಗಾಗಿ ಮಂಡಿಸಿದ ವಿಷಯದ ಬಗ್ಗೆ ಚರ್ಚಿಸಿ ಜಿಲ್ಲಾಮಟ್ಟದ ಸಹಕಾರ ಸಂಘಗಳ ಷೇರಿನ ಮುಖಬೆಲೆಯನ್ನು ೫೦೦೦೦ ಹಾಗೂ ತಾಲೂಕು ಮಟ್ಟದ ಸಂಘಗಳಿಗೆ ೨೫೦೦೦ದಂತೆ ನಿಗದಿಪಡಿಸಲಾಯಿತು. ಅಲ್ಲದೆ ಬ್ಯಾಂಕಿನಲ್ಲಿ ಡಿ ವರ್ಗದ ಸದಸ್ಯತ್ವವನ್ನು (ಓomiಟಿಚಿಟ shಚಿಡಿe) ಪರಿಷ್ಕರಿಸಿ ರೂ ೫೦೦ಕ್ಕೆ ನಿಗದಿಪಡಿಸಿ ಬೈಲಾ ತಿದ್ದುಪಡಿ ಮಾಡುವಂತೆ ನಿರ್ಣಯ ಮಾಡಲಾಯಿತು.
ಮಹಾ ಸಭೆಯಲ್ಲಿ ೨೩೯ ಸಹಕಾರ ಸಂಘಗಳ ಅಧ್ಯಕ್ಷರುಗಳು, ಬ್ಯಾಂಕಿನ ಉಪಾಧ್ಯಕ್ಷರಾದ ಕೆ.ಎಸ್. ಪೂವಯ್ಯ, ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು, ಮುಖ್ಯಕಾರ್ಯನಿರ್ವಹಣಾಧಿಕಾರಿ, ಪ್ರಧಾನ ವ್ಯವಸ್ಥಾಪಕರು ಹಾಗೂ ಬ್ಯಾಂಕಿನ ಅಧಿಕಾರಿ ಹಾÀUÆ ಸಿಬ್ಬಂದಿ ಹಾಜರಿದ್ದರು.