ಸುಂಟಿಕೊಪ್ಪ, ಸೆ. ೪: ಈದ್‌ಮಿಲಾದ್ ಹಬ್ಬದ ಹಿನ್ನೆಲೆಂ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಮಸೀದಿ ಮುಖಂಡರ ಸೌಹಾರ್ದ ಸಭೆ ಕುಶಾಲನಗರ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾದ ಸಭೆಯಲ್ಲಿ ಠಾಣಾ ವ್ಯಾಪ್ತಿಗೆ ಒಳಗೊಂಡ ಮಸೀದಿಗಳ ಮುಖಂಡರುಗಳ ಸಮ್ಮುಖದಲ್ಲಿ ಹಬ್ಬ ಆಚರಣೆಯ ಕುರಿತು ಚರ್ಚಿಸಲಾಯಿತು. ಆಚರಣೆಯಲ್ಲಿ ಅಹಿತ ಕರ ಘಟನೆಗಳು ನಡೆಯ ದಂತೆ ಆಯೋಜಕರು ಮತ್ತು ಮುಖಂಡರು ಎಚ್ಚರವಹಿಸಬೇಕು ಎಂದು ಕರೆ ನೀಡಿದರು. ಸಭೆಯಲ್ಲಿ ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಮೋಹನ್ ರಾಜ್ ಸಲಹೆ-ಸೂಚನೆ ಮತ್ತು ಮಾರ್ಗಸೂಚಿಗಳನ್ನು ನೀಡಿದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಎಂ. ಲತೀಫ್ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಮಸೀದಿಗಳ ಮುಖಂಡರು ಹಾಗೂ ಮೌಲ್ವಿಗಳು ಪಾಲ್ಗೊಂಡಿದ್ದರು.