ಸುಂಟಿಕೊಪ್ಪ, ಸೆ. ೧: ಭಾರತೀಯ ಅರೆಸೇನಾಪಡೆಗೆ ನೇಮಕಗೊಂಡ ವಿಸ್ಮಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ೭ನೇ ಹೊಸಕೋಟೆಯ ತೊಂಡೂರ್ ನಿವಾಸಿ ದಾಸ್‌ಹಾಗೂ ಬಿಂದು ಅವರ ಪುತ್ರಿ ವಿಸ್ಮಯ ಅವರು ಭಾರತೀಯ ಸೇನೆಗೆ ಆಯ್ಕೆಯಾದ ಹಿನ್ನೆಲೆ ಗ್ರಾಮಸ್ಥರಾದ ಅಬ್ದುಲ್ ರಜಾಕ್, ರಫೀಕ್, ಉಷಾ ಶ್ರೀಧರ್, ಉಸ್ಮಾನ್, ಹಾಗೂ ಸುಂಟಿಕೊಪ್ಪ ಠಾಣೆಯ ಪೊಲೀಸ್ ಸಿಬ್ಬಂದಿ ಆಶಾ ಗೌರವಿಸಿದರು.