ವೀರಾಜಪೇಟೆ, ಸೆ. ೧ : ವಿಧ್ಯಾರ್ಥಿ ಜೀವನವು ಮನುಜ ಜೀವನದ ಅವಿಭಾಜ್ಯ ಅಂಗ ಎಂದು ಪರಿಗಣಿಸುವಂತಾಗಬೇಕು. ನಾಯಕತ್ವ ಗುಣ, ಮೌಲ್ಯಯುತವಾದ ಜೀವನ ಶೈಲಿ, ನಡತೆಯಿಂದಾಗಿ ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮಲು ಸಾಧ್ಯ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಕೊಡಗು ಜಿಲ್ಲೆ ಉಪ ನಿರ್ದೇಶಕರಾದ ಚಿದಾನಂದ ಕುಮಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಸರ್ಕಾರಿ ಪದವಿ ಪೂರ್ವ ಶಿಕ್ಷಣ ಕಾಲೇಜು ವೀರಾಜಪೇಟೆ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ೨೦೨೫-೨೬ ನೇ ಸಾಲಿನ ವಿಧ್ಯಾರ್ಥಿ ಸಂಘದ ರಾಷ್ಟ್ರೀಯ ಸೇವಾ ಯೋಜನೆ ಘಟಕ, ರೋವರ್ ಘಟಕ, ಮಾದಕ ವಸ್ತು ವಿರೋಧಿ ಘಟಕ ಹಾಗೂ ಮತದಾರರ ಸಾಕ್ಷರತಾ ಘಟಕಗಳ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿದಾನಂದ ಕುಮಾರ್ ಅವರು ಇಂದು ಸಮಾಜ ತಂತ್ರಜ್ಞಾನ, ವಿಜ್ಞಾನಗಳ ಸಮ್ಮಿಲನದೊಂದಿಗೆ ನಾಗಲೋಟದಲ್ಲಿ ಸಂಚರಿಸುತ್ತಿದೆ. ಕಾಲಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳು ಹೊಸ ಹೊಸ ಸಾಧನೆಯ ಗುರಿಯೊಂದಿಗೆ ಮುನ್ನಡೆಯಬೇಕು ಎಂದರು.
ಸ.ಪ.ಪೂರ್ವ ಕಾಲೇಜು ನೆಲ್ಯಹುದಿಕೇರಿ ಪ್ರಾಂಶುಪಾಲರಾದ ಅಂಥೋನಿ ವಿವಿಯನ್ ಅಲ್ವಾರಿಸ್ ಅವರು ಮಾತನಾಡಿ, ವಿದ್ಯಾರ್ಥಿ ಸಂಘ ಕೇವಲ ಹುದ್ದೆಗಳ ವೇದಿಕೆ ಅಲ್ಲ ಬದಲಿಗೆ ಇದು ವ್ಯಕ್ತಿತ್ವ ವಿಕಾಸ, ಹಾಗೂ ಸಮಾಜಮುಖಿ ಕಾರ್ಯಗಳ ಪಾಠಶಾಲೆ ಎಂದು ಹೇಳಿದರು.
ಸ.ಪ.ಪೂರ್ವ ಕಾಲೇಜು ವೀರಾಜಪೇಟೆ ಅಭಿವೃದ್ದಿ ಸಮಿತಿಯ ಸದಸ್ಯರಾದ ಪಿ.ಎಸ್. ಮಚ್ಚಾಡೋ ಪ್ರೌಢಶಾಲಾ ವಿಭಾಗದ ಪ್ರಾಂಶುಪಾಲರಾದ ಚಂದ್ರಶೇಖರ್ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜ್ಯೋತಿ ಎನ್.ಕೆ ಅವರುಗಳು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಸ.ಪ.ಪೂ. ಕಾಲೇಜು ವೀರಾಜಪೇಟೆ ಅಭಿವೃದ್ದಿ ಸಮಿತಿಯ ಉಪಾದ್ಯಕ್ಷರಾದ ಚಿಲ್ಲವಂಡ ಕಾವೇರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸುಶಿಕ್ಷಿತ ಸಮಾಜ ರೂಪಿಸುವಲ್ಲಿ ಸಕ್ರಿಯರಾಗಬೇಕು. ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಉಪನ್ಯಾಸಕರಾದ ದಮಯಂತಿ ಅವರು ವಿದ್ಯಾರ್ಥಿಗಳಿಗೆ ನೀಡುವ ಧತ್ತಿನಿಧಿ ಬಹುಮಾನಗಳ ಪಟ್ಟಿಯನ್ನು ವಾಚಿಸಿದರು. ಕಾಲೇಜಿನ ಅರ್ಥಶಾಸ್ತç ಉಪನ್ಯಾಸಕರಾದ ತಿಮ್ಮಯ್ಯ ಕೆ.ಎಸ್ ಅವರು ವಿವಿಧ ಘಟಕಗಳಿಗೆ ಆಯ್ಕೆಯಾದ ವಿಧ್ಯಾರ್ಥಿಗಳಿಗೆ ಪ್ರಮಾಣ ವಚನ ಭೋಧಿಸಿದರು. ರಾಜ್ಯಶಾಸ್ತç ವಿಭಾಗದ ಉಪನ್ಯಾಸಕಿ ಪವಿತ್ರ ಅವರು ವಿದ್ಯಾರ್ಥಿ ಸಂಘದ ಚಟುವಟಿಕೆಗಳ ವರದಿ ವಾಚಿಸಿದರು.
ಗಣಿತಶಾಸ್ತçದ ಉಪನ್ಯಾಸಕರಾದ ರೈಮಂಡ್ ಎಸ್.ಪಿ ಅವರು ಸ್ವಾಗತಿಸಿ ಉಪನ್ಯಾಸಕಿ ಪವಿತ್ರ ಕಾರ್ಯಕ್ರಮ ನಿರೂಪಿಸಿ, ಉಪನ್ಯಾಸಕಿ ಶಾಂತಿ ಹೆಚ್.ಎಸ್ ವಂದಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿವಿಧ ವಿಭಾಗಗಳ ಉಪನ್ಯಾಸಕರು ಮತ್ತು ಕಾಲೇಜು ಅಭಿವೃದ್ದಿ ಸಮಿತಿಯ ಸದಸ್ಯರು ಹಾಗೂ ವಿವಿಧ ಘಟಕಗಳಿಗೆ ಆಯ್ಕೆಯಾದ ವಿಧ್ಯಾರ್ಥಿಗಳು, ಕಾಲೇಜಿನ ವಿಧ್ಯಾರ್ಥಿಗಳು ಹಾಜರಿದ್ದರು.