ಮಡಿಕೇರಿ, ಸೆ. ೧ : ಕೊಂಡAಗೇರಿಯಲ್ಲಿ ನಡೆದ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಖೋ ಖೋ ಪಂದ್ಯಾವಳಿಯಲ್ಲಿ ವೀರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿ, ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪುಚ್ಚಿಮಂಡ ಯು.ತನಿಶಾ, ಕರ್ನಂಡ ಕೃತಿಕಾ ಅಕ್ಕಮ್ಮ, ಅಮ್ಮಂಡ ಸ್ಪೂರ್ತಿ ದೇಚಮ್ಮ, ಬೊವ್ವೇರಿಯಂಡ ಹನ್ಸಿಕ ಪೊನ್ನಪ್ಪ, ಆಯಿಷಾ ಶಿಝ, ಕುಲ್ಲಚoಡ ಭೂಮಿಕಾ ಭೋಜಮ್ಮ, ಕರ್ನಂಡ ಶತಕ ಕಾವೇರಮ್ಮ, ಫಾತಿಮಾತ್ ಫಿದಾ, ಪಟ್ಟಡ ಬಿ.ದೇಚಮ್ಮ, ಕಾಳಚಂಡ ಎಂ. ದೇಚಮ್ಮ ಇವರುಗಳನ್ನೊಳಗೊಂಡ ತಂಡಕ್ಕೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಮೋನಿಕಾ ಬಿ ಎಸ್ ಹಾಗೂ ಲಾವಣ್ಯ ತರಬೇತಿ ನೀಡಿದ್ದರು.