ಮಡಿಕೇರಿ, ಸೆ. ೧: ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ವಿಶೇಷ ಹಿಲ್ ಕೌನ್ಸಿಲ್ ಸ್ಟೇಟಸ್ ಪಡೆಯುವುದು ಕೊಡವರ ಸಂವಿಧಾನಬದ್ಧ ಹಕ್ಕಾಗಿದೆ ಎಂದು ಹಿರಿಯ ರಾಜಕಾರಣಿ, ವಿಧಾನ ಪರಿಷತ್ ಸದಸ್ಯ ಅಡಗೂರು ಹೆಚ್.ವಿಶ್ವನಾಥ್ ಪ್ರತಿಪಾದಿಸಿದರು.
ಮಡಿಕೇರಿಯ ಹೊರ ವಲಯದ ಕ್ಯಾಪಿಟಲ್ ವಿಲೇಜ್‌ನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನಡೆದ ೩೦ನೇ ವರ್ಷದ ಸಾರ್ವತ್ರಿಕ “ಕೈಲ್ ಪೊಳ್ದ್” ಹಬ್ಬ ಆಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಚುನಾಯಿತ ಪ್ರತಿನಿಧಿಗಳು ಸಂವಿಧಾನದ ಆಶಯಗಳನ್ನು ಈಡೇರಿಸುವಲ್ಲಿ ವಿಫಲವಾಗಿ ಪ್ರಜೆಗಳು ಪ್ರಭುಗಳು ಎಂಬುದನ್ನು ಮರೆತು ಇಂದು ರಿಯಲ್ ಎಸ್ಟೇಟ್ ದಂಧೆಯ ಮೂಲಕ ತಮ್ಮ ಮತಕ್ಷೇತ್ರಗಳ ಭೂಮಿಯ ಕಬ್ಜೆಯ ಮೂಲಕ ಪಾಳೆಗಾರರಂತೆ ಮೆರೆಯುತ್ತಿರುವುದು ವಿಷಾದನೀಯ ಎಂದು ಹೇಳಿದ ಅವರು, ಪ್ರಜೆಗಳೇ ಸಾರ್ವಭೌಮರೆನ್ನುವ ಹಕ್ಕನ್ನು ಅರಿತುಕೊಂಡು ಕ್ಷೇತ್ರದ ಮತದಾರರು, ಚುನಾಯಿತ ಜನಪ್ರತಿನಿಧಿಗಳನ್ನು ಪ್ರಶ್ನಿಸಬೇಕೆಂದು ಕರೆ ನೀಡಿದರು.
ಕೊಡವರು ಕೇವಲ ೧ ಲಕ್ಷದ ಒಳಗೆ ಇರುವ ಎಥಿನಿಕ್ ಸಮುದಾಯವಾಗಿದ್ದು, ಭಾರತದ ಈಶಾನ್ಯಪ್ರಾಂತ್ಯ ಮತ್ತು ಗೋದಾವರಿ ಹಿಲ್‌ಟ್ರ‍್ಯಾಕ್ಟ್ ಮತ್ತು ವಿಶಾಖಪಟ್ಟಣಂ ಹಿಲ್‌ಟ್ರ‍್ಯಾಕ್ಟ್ ಏಜೆನ್ಸಿಯ ಮಾದರಿಯಲ್ಲಿ ಕೊಡವರಿಗೆ ಶಾಸನಾತ್ಮಕವಾದ ಭದ್ರತೆಯನ್ನು ನೀಡಬೇಕು. ೪೦-೫೦ಲಕ್ಷ ಜನಸಂಖ್ಯೆ ಇರುವ ಬಲಾಡ್ಯರನ್ನು ಎಸ್.ಟಿ ಪಟ್ಟಿಯಲ್ಲಿ ಸೇರಿಸಿರುವಾಗ ಸಂವಿಧಾನಿಕ ಸಬಲೀಕರಣಕ್ಕಾಗಿ ಬುಡಕಟ್ಟು ಲಕ್ಷಣವನ್ನು ಹೊಂದಿರುವ ಆದಿಮಸಂಜಾತ ಕೊಡವರನ್ನು ಎಸ್.ಟಿ ಪಟ್ಟಿಗೆ ಸೇರಿಸುವುದು ಪ್ರಯಾಸದ ಕೆಲಸವಲ್ಲ ಎಂದರು. ಸಿ.ಎನ್.ಸಿಯು ತನ್ನ ಹೋರಾಟ ಮುಂದುವರೆಸಿದ್ದು ಶ್ಲಾಘನೀಯ. ಈ ನೈಜ ಹೋರಾಟಕ್ಕೆ ಎಂದಾದರೂ ಒಂದು ದಿನ ಶುಭಗಳಿಗೆ ಬರಲಿದೆ ಎಂದು ವಿಶ್ವನಾಥ್ ಅವರು ನುಡಿದರು.
ಸಾರ್ವತ್ರಿಕ ‘ಕೈಲ್ ಪೊಳ್ದ್’ ಹಬ್ಬ ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿ.ಎನ್.ಸಿ ಅಧ್ಯಕ್ಷ ಎನ್.ಯು ನಾಚಪ್ಪ, ಯುದ್ಧ ಮತ್ತು ಬೇಟೆಯ ಕೌಶಲ್ಯಗಳು ಕೊಡವರಲ್ಲಿ ವಂಶವಾಹಿಯಾಗಿ ಬೇರೂರಿದೆ. ಶಸ್ತಾçಸ್ತçಗಳನ್ನು ಹೊಂದುವುದು ಯೋಧ ಪರಂಪರೆಯ ಕೊಡವರ ಅನುವಂಶಿಕ ಶಾಶ್ವತ ಹಕ್ಕಾಗಿದೆ. ಬಂದೂಕಿನೊAದಿಗೆ ಕೊಡವರು ಭಾವನಾತ್ಮಕ ಸಂಬAಧ ಹೊಂದಿದ್ದಾರೆ. ಈ ಹಕ್ಕನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಪವಿತ್ರ ಕೊಡವ ತಾಯ್ನಾಡಿನಲ್ಲಿ ಬಂದೂಕು ಕೊಡವ ಜನಾಂಗದ ಸಮರ ಪರಂಪರೆಗೆ ಮತ್ತು ಪೂರ್ವಜರ ಪ್ರಾಚೀನತೆಗೆ ಅವಿನಾಭಾವ ಸಂಬAಧ ಹೊಂದಿದೆ. ಇದರಲ್ಲಿ ಯಾವುದೇ ಒಂದು ಸಿದ್ಧಾಂತ ಕಳೆದು ಹೋದರೂ, ಅದು ಕೊಡವ ಜನಾಂಗಕ್ಕೆ ದೊಡ್ಡ ನಷ್ಟವಾಗುತ್ತದೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಬರೆದ ಸಂವಿಧಾನದ ಅಡಿಯಲ್ಲಿ ಕೊಡವ ಜನಾಂಗವು ಶಾಸನಬದ್ಧ ರಕ್ಷಣೆಯನ್ನು ಪಡೆಯಬೇಕು. ಇದಕ್ಕಾಗಿ ‘ಕೈಲ್ ಪೊಳ್ದ್’ ಹಬ್ಬ ಆಚರಣೆಯ ಸಂದರ್ಭ ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು ಎಂದು ಎನ್.ಯು ನಾಚಪ್ಪ ತಿಳಿಸಿದರು.
ಕೊಡವಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ನೀಡಬೇಕು, ಸಂವಿಧಾನದ ೬ನೇ ಮತ್ತು ೮ನೇ ಶೆಡ್ಯೂಲ್‌ಗಳ ಆರ್ಟಿಕಲ್ ೨೪೪, ೩೭೧(ಕೆ) ಆರ್/ಡಬ್ಲ್ಯೂ ಅಡಿಯಲ್ಲಿ ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕುಗಳೊಂದಿಗೆ ಸ್ವ-ಆಡಳಿತ, ವಿಶ್ವ ರಾಷ್ಟ್ರ ಸಂಸ್ಥೆ ಕಲ್ಪಿಸಲ್ಪಟ್ಟ ಆದಿಮಸಂಜಾತ ಜನರ ಹಕ್ಕುಗಳ ಅಡಿಯಲ್ಲಿ ಮತ್ತು ಸ್ವಯಂ-ನಿರ್ಣಯ ಹಕ್ಕುಗಳಿಗಾಗಿ ಅಂತರರಾಷ್ಟ್ರೀಯ ಕಾನೂನಿನಲ್ಲಿ ಘೋಷಿಸಲ್ಪಟ್ಟಿದೆ. ಈ ಮಾದರಿಯಲ್ಲಿ ಕೊಡವ ಲ್ಯಾಂಡ್ ರಕ್ಷಿಸಲ್ಪಡಬೇಕು. ಆರ್ಟಿಕಲ್ ೩೪೦ ಮತ್ತು ೩೪೨ರ ಅಡಿಯಲ್ಲಿ ಆದಿಮಸಂಜಾತ ಏಕಜನಾಂಗೀಯ ಕೊಡವ ಕುಲಕ್ಕೆ ಎಸ್.ಟಿ ಪಟ್ಟಿಯಲ್ಲಿ ವರ್ಗೀಕರಣವಾಗಬೇಕು ಎಂದು ಒತ್ತಾಯಿಸಿದರು.
ಕೊಡವರು ಕೊಡಗಿಗೆ ಮಾತ್ರ ಸೀಮಿತವಾದ ಆದಿಮಸಂಜಾತ ಜನ. ಕೊಡವರ ಸರ್ವಾಂಗೀಣ ವಿಕಾಸ ಮತ್ತು ಏಳಿಗೆ ಆಗಬೇಕಾದರೆ ಕೊಡವ ಎಥ್ನಿಕ್ ಜನಾಂಗವನ್ನು ಸಂವಿಧಾನದ ಶೆಡ್ಯೂಲ್ ಪಟ್ಟಿಯಲ್ಲಿ ವರ್ಗೀಕರಿಸಬೇಕು. ಈ ಸಂಬAಧ ಕೊಡವ ನ್ಯಾಷನಲ್ ಕೌನ್ಸಿಲ್ ನಡೆಸುತ್ತಿರುವ ಮೂರುವರೆ ದಶಕಗಳ ಸುದೀರ್ಘ ಹೋರಾಟ ಫಲ ಕಾಣಬೇಕಾದರೆ ಯುವ ಜನಾಂಗ ತಮ್ಮ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಬೆಂಬಲಿಸಬೇಕು ಮತ್ತು ಭಾಗಿಯಾಗಬೇಕೆಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೈದ್ಯ ಹಾಗೂ ಸಮಾಜ ಸೇವಕ ಡಾ.ಮಾತಂಡ ಅಯ್ಯಪ್ಪ ನುಡಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ‘ಕೈಲ್ ಪೊಳ್ದ್’ ಪ್ರಯುಕ್ತ ‘ತೋಕ್ ಪೂವ್’ ನಿಂದ ಬಂದೂಕುಗಳನ್ನು ಸಿಂಗರಿಸಿ ಪ್ರಾರ್ಥಿಸಲಾಯಿತು. ಗಾಳಿಯಲ್ಲಿ ಗುಂಡು ಹಾರಿಸಿ ಕೋವಿಯ ಹಕ್ಕನ್ನು ಪ್ರತಿಪಾದಿಸಲಾಯಿತು.
ಹಬ್ಬದ ಪ್ರಯುಕ್ತ ನಡೆದ ಕೊಡವ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು. ರುಚಿಕರವಾದ ‘ಕೈಲ್ ಪೊಳ್ದ್’ ಖಾದ್ಯ ಸಹಿತ ಊಟದೊಂದಿಗೆ ಹಬ್ಬದ ಸಂಭ್ರಮಾಚರಣೆಯನ್ನು ಹಂಚಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಕಲಿಯಂಡ ಮೀನಾ, ಪುಲ್ಲೇರ ಸ್ವಾತಿ, ಅಪ್ಪಚ್ಚೀರ ರೀನಾ, ನಂದೇಟಿರ ಕವಿತಾ, ಪಟ್ಟಮಾಡ ಲಲಿತಾ, ಚೋಳಪಂಡ ಜ್ಯೋತಿ, ಅರೆಯಡ ಸವಿತಾ, ಪಚ್ಚಾರಂಡ ಶಾಂತಿ, ಕಲಿಯಂಡ ಪ್ರಕಾಶ್, ಬಾಚರಣಿಯಂಡ ಚಿಪ್ಪಣ್ಣ, ಅಳ್ಮಂಡ ಜೈ, ಕಾಂಡೇರ ಸುರೇಶ್, ಅಪ್ಪಚ್ಚಿರ ರಮ್ಮಿ ನಾಣಯ್ಯ, ಅಜ್ಜಿಕುಟ್ಟೀರ ಲೋಕೇಶ್, ಕಿರಿಯಮಾಡ ಶೆರಿನ್, ಚಂಬAಡ ಜನತ್, ಅರೆಯಡ ಗಿರೀಶ್, ನಂದೇಟಿರ ರವಿ ಸುಬ್ಬಯ್ಯ, ಮಂದಪAಡ ಮನೋಜ್, ಮಂದಪAಡ ಸೂರಜ್, ಪುಲ್ಲೇರ ಕಾಳಪ್ಪ, ಕಾಟುಮಣಿಯಂಡ ಉಮೇಶ್, ಬೇಪಡಿಯಂಡ ಬಿದ್ದಪ್ಪ, ಬೇಪಡಿಯಂಡ ದಿನು, ಮಣವಟ್ಟಿರ ಚಿಣ್ಣಪ್ಪ, ಮೇದುರ ಕಂಠಿ, ಕೂಪದಿರ ಸಾಬು, ಕುಂಡ್ಯೋಳAಡ ರಮೇಶ್ ಮುದ್ದಯ್ಯ, ಪಾರ್ವಂಗಡ ನವೀನ್, ನಂದಿನೆರವAಡ ಅಪ್ಪಯ್ಯ, ಚೋಳಪಂಡ ನಾಣಯ್ಯ, ಪುಲ್ಲೇರ ಹರ್ಷ, ಪುಲ್ಲೇರ ಅಶ್ವಿತ್, ಮಂಡೀರ ನಂದಾ, ಐಲಪಂಡ ಮಿಟ್ಟು, ಪಾಲೆಕಂಡ ಪ್ರತಾಪ್, ಅಪ್ಪಾರಂಡ ಪ್ರಸಾದ್, ಜಮ್ಮಡ ಮೋಹನ್, ಮಂಡೀರ ನಂದಾ, ಕುಲ್ಲೇಟಿರ ಬೇಬಾ ಅರುಣ, ಪುದಿಯೊಕ್ಕಡ ಪೃಥ್ವಿ, ಪುದಿಯೊಕ್ಕಡ ಕಾಶಿ, ಪಟ್ಟಮಾಡ ಪೃಥ್ವಿ, ತೋಲಂಡ ಸೋಮಯ್ಯ, ನೆಲ್ಲಿರ ಮಧು, ನಾಗವಂಡ ಕೃಪಾ, ಚೆಂಬAಡ ಜಾಗೃತ್ ಬಿದ್ದಪ್ಪ, ಕೋಡಿರ ಉತ್ತಪ್ಪ, ಮಾಚಿಮಂಡ ಗಪ್ಪಣ, ಕಳ್ಳಿರ ಉತ್ಸವ್ ಮತ್ತಿತರರು ಪಾಲ್ಗೊಂಡು ಸಿ.ಎನ್.ಸಿ ಯ ಬೇಡಿಕೆಗಳ ಪರ ಪ್ರತಿಜ್ಞಾ ಮೋರ್ಕಂಡ ಬೋಪಣ್ಣ ವಿಧಿ ಸ್ವೀಕರಿಸಿದರು.