ಅಮ್ಮತ್ತಿ ಸೆ. ೧: ಅಮ್ಮತ್ತಿಯಲ್ಲಿ ನಡೆದ ವಲಯ ಮಟ್ಟದ ಅಥ್ಲೆಟಿಕ್ಸ್ ಪಂದ್ಯಾವಳಿಯ ವಿವಿಧ ಆಟೋಟಗಳಲ್ಲಿ ವೀರಾಜಪೇಟೆಯ ಕಾವೇರಿ ಶಾಲೆಯ ಪ್ರೌಢವಿಭಾಗದ ವಿದ್ಯಾರ್ಥಿಗಳು ಸ್ಪರ್ಧಿಸಿ ಪದಕಗಳನ್ನು ಗಳಿಸಿದ್ದಾರೆ. ೪೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ೯ನೇ ತರಗತಿಯ ಕರ್ನಂಡ ಕೃತಿಕಾ ಅಕ್ಕಮ್ಮ ಚಿನ್ನದ ಪದಕ, ೨೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ೯ನೇ ತರಗತಿಯ ಬೊವ್ವೇರಿಯಂಡ ಹನ್ಸಿಕ ಪೊನ್ನಪ್ಪ ಚಿನ್ನದ ಪದಕ, ಗುಂಡು ಎಸೆತ ಸ್ಪರ್ಧೆಯಲ್ಲಿ ೧೦ನೇ ತರಗತಿ ವಿದ್ಯಾರ್ಥಿ ಮುಲ್ಲೇಂಗಡ ಪೂರ್ವಿಕ ಪೂವಮ್ಮ ಎಂ.ಜಿ ಚಿನ್ನದ ಪದಕ, ೧೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಅಮ್ಮಂಡ ಸ್ಪೂರ್ತಿ ದೇಚಮ್ಮ ಬೆಳ್ಳಿ ಪದಕ, ೪೦೦ ಮೀ ಓಟದ ಸ್ಪರ್ದೆಯಲ್ಲಿ ೮ ನೇ ತರಗತಿ ಕರ್ನಂಡ ಶತಕ ಕಾವೇರಮ್ಮ ಬೆಳ್ಳಿ ಪದಕ, ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ೧೦ನೇ ತರಗತಿ ವಿದ್ಯಾರ್ಥಿ ಹನಾ ಫಲಕ್ ಬೆಳ್ಳಿ ಪದಕ, ೮೦೦ಮೀ ಓಟದ ಸ್ಪರ್ಧೆಯಲ್ಲಿ ೮ ನೇ ತರಗತಿ ಫಾತಿಮತ್ ಫಿಧಾ ಕಂಚಿನ ಪದಕ, ೪x೧೦೦ಮೀ ರಿಲೇಯಲ್ಲಿ ಬೊವ್ವೇರಿಯಂಡ ಹನ್ಸಿಕಾ ಪೊನ್ನಪ್ಪ, ಅಮ್ಮಂಡ ಸ್ಪೂರ್ತಿ ದೇಚಮ್ಮ, ಕುಲ್ಲ ಚಂಡ ಭೂಮಿಕ ಬೋಜಮ್ಮ, ಕನಡ ಕೃತಿಕಾ ಅಕ್ಕಮ್ಮ ಸ್ಪರ್ದಿಸಿ ಚಿನ್ನದ ಪದಕ, ೪x೪೦೦ಮೀ ರಿಲೇಯಲ್ಲಿ ಕರ್ನಂಡ ಕೃತಿಕಾ ಅಕ್ಕಮ್ಮ, ಬೊವ್ವೇರಿಯಂಡ ಹನ್ಸಿಕಾ ಪೊನ್ನಪ್ಪ, ಅಮ್ಮಂಡ ಸ್ಪೂರ್ತಿ ದೇಚಮ್ಮ, ಕರ್ನಂಡ ಶತಕ ಕಾವೇರಮ್ಮ ಚಿನ್ನದ ಪದಕ ಗಳಿಸಿದ್ದಾರೆ.