ಮಡಿಕೇರಿ, ಸೆ.೧: ಭಾರತೀಯ ರೆಡ್ ಕ್ರಾಸ್‌ನ ಕೊಡಗು ಘಟಕದಿಂದ ಸೆಪ್ಟೆಂಬರ್ ೨ ರಂದು ಪೊನ್ನಂಪೇಟೆ ತಾಲೂಕು ಘಟಕವನ್ನು ಪ್ರಾರಂಭಿಸಲಾಗುತ್ತಿದೆ. ತಾ.೨ ರಂದು ಬೆಳಗ್ಗೆ ೧೦.೩೦ ಗಂಟೆಗೆ ಪೊನ್ನಂಪೇಟೆ ತಾಲೂಕು ಪಂಚಾಯತ್ ಭವನದಲ್ಲಿ ಆಯೋಜಿತ ಪೊನ್ನಂಪೇಟೆ ತಾಲೂಕು ರೆಡ್‌ಕ್ರಾಸ್‌ನ ನೂತನ ಘಟಕವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರು ಉದ್ಘಾಟಿಸಲಿದ್ದಾರೆ.
ಕೊಡಗು ಘಟಕದ ಸಭಾಪತಿ ಬಿ.ಕೆ.ರವೀಂದ್ರ ರೈ ಅಧ್ಯಕ್ಷತೆ ವಹಿಸಲಿರುವ ಸಮಾರಂಭದಲ್ಲಿ, ಕರ್ನಾಟಕ ರೆಡ್‌ಕ್ರಾಸ್ ನ ಉಪಾಧ್ಯಕ್ಷ, ನಿವೃತ್ತ ಪೊಲೀಸ್ ಎಡಿಜಿಪಿ ಬಿ. ಭಾಸ್ಕರ್ ರಾವ್, ಕೊಡಗು ಜಿಲ್ಲಾಧಿಕಾರಿ ಮತ್ತು ರೆಡ್‌ಕ್ರಾಸ್‌ನ ಜಿಲ್ಲಾ ಸಭಾಧ್ಯಕ್ಷ ವೆಂಕಟರಾಜಾ, ಪೊನ್ನಂಪೇಟೆ ತಹಶೀಲ್ದಾರ್ ಕೆ.ಎನ್. ಮೋಹನ್ ಕುಮಾರ್, ರಾಜ್ಯ ರೆಡ್‌ಕ್ರಾಸ್‌ನ ಸಹಾಯಕ ಕಾರ್ಯದರ್ಶಿ ಉಮಾಕಾಂತ್, ಕೊಡಗು ರೆಡ್‌ಕ್ರಾಸ್ ಕಾರ್ಯದರ್ಶಿ ಎಂ.ಧನAಜಯ್ ಅವರು ಪಾಲ್ಗೊಳ್ಳಲಿದ್ದಾರೆ.