ವೀರಾಜಪೇಟೆ, ಸೆ. ೧: ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು, ತಮ್ಮ ತಂದೆಯವರಾದ ದಿವಂಗತ ಎ.ಕೆ ಸುಬ್ಬಯ್ಯರವರ ೬ನೇ ಪುಣ್ಯಸ್ಮರಣೆ ದಿನದಂದು ಸುಬ್ಬಯ್ಯ ಅವರ ಸಮಾಧಿ ಸ್ಥಳದಲ್ಲಿ ಗೌರವ ನಮನ ಸಲ್ಲಿಸಿದರು.
ಹುದಿಕೇರಿಯ ಬೆಳ್ಳೂರಿನಲ್ಲಿರುವ ಸಮಾಧಿ ಬಳಿಗೆ ತೆರಳಿದ ಶಾಸಕರು, ಪುಷ್ಪ ನಮನ ಸಲ್ಲಿಸಿ ಪ್ರಾರ್ಥಿಸುವ ಮೂಲಕ ಪುಣ್ಯ ಸ್ಮರಣೆ ದಿನದಂದು ಗೌರವಾರ್ಪಣೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕರ ಹಿರಿಯ ಸಹೋದರರಾದ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ ದಂಪತಿಯರು, ಶಾಸಕರ ತಾಯಿಯ ಹಿರಿಯ ಸಹೋದರಿ, ಅಜ್ಜಿಕುಟ್ಟಿರ ಕುಟುಂಬದ ಸದಸ್ಯರುಗಳು, ಆಪ್ತರು, ಪಕ್ಷದ ಪ್ರಮುಖರು ಹಾಗೂ ಇತರರು ಉಪಸ್ಥಿತರಿದ್ದರು.