ಮುಳ್ಳೂರು, ಆ. ೩೧: ಕೆನರಾ ಬ್ಯಾಂಕ್ ವತಿಯಿಂದ ಶನಿವಾರಸಂತೆ, ಕೊಡ್ಲಿಪೇಟೆ ಮತ್ತು ಆಲೂರುಸಿದ್ದಾಪುರ ಕೆನರಾ ಬ್ಯಾಂಕ್ ಶಾಖೆಗಳ ವ್ಯಾಪ್ತಿಗೆ ಒಳಪಟ್ಟ ಸಂಜೀವಿನಿ ಒಕ್ಕೂಟದ ಸ್ತಿçÃಶಕ್ತಿ ಸಂಘಗಳ ಸದÀಸ್ಯರಿಗೆ ಮತ್ತು ಮಹಿಳೆಯರಿಗೆ ಬ್ಯಾಂಕ್‌ನಿAದ ಸಿಗುವ ವಿವಿಧ ಸಾಲ ಸೌಲಭ್ಯಗಳ ಕುರಿತು ಗುಡುಗಳಲೆ ಆರ್‌ವಿ ಕಲ್ಯಾಣ ಮಂಟಪದಲ್ಲಿ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮಡಿಕೇರಿಯ ಕೆನರಾ ಬ್ಯಾಂಕ್ ವಿಭಾಗೀಯ ಪ್ರಾದೇಶಿಕ ವ್ಯವಸ್ಥಾಪಕ ಸಿ.ಟಿ.ಕೆ ಬಾಬು ಮಾತನಾಡಿ, ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಮತ್ತು ಸ್ವಾವಲಂಬಿ ಬದುಕಿಗೆ ಕೆನರಾ ಬ್ಯಾಂಕ್ ವಿವಿಧ ಸಾಲ ಸೌಲಭ್ಯಗಳನ್ನು ನೀಡುತ್ತದೆ. ಸ್ತಿçÃಶಕ್ತಿ ಮತ್ತು ಸ್ವಸಹಾಯ ಗುಂಪುಗಳಿಗೆ ರೂ. ೫೦ ಸಾವಿರದಿಂದ ರೂ. ೧೦ ಲಕ್ಷದವರೆಗೂ ಸಾಲ ಸೌಲಭ್ಯ ನೀಡಿ ಪ್ರೋತ್ಸಾಹಿಸುತ್ತದೆ. ಇಷ್ಟೇ ಅಲ್ಲದೆ ಮಹಿಳೆಯರ ಸ್ವಂತ ಉದ್ಯೋಗಕ್ಕಾಗಿ ಸಾಲ ಸೌಲಭ್ಯವನ್ನು ನೀಡುತ್ತಿದೆ ಎಂದು ಹೇಳಿದರು. ಮಹಿಳೆಯರು ಆರ್ಥಿಕವಾಗಿ ಪ್ರಗತಿ ಹೊಂದುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಮಹಿಳೆಯರು ಸ್ವಂತ ಉದ್ಯೋಗ ಮಾಡಬೇಕಾಗಿದ್ದು, ಈ ದಿಸೆಯಲ್ಲಿ ಕೆನರಾ ಬ್ಯಾಂಕ್ ಸಿದ್ದ ಉಡುಪು ತಯಾರಿಕೆ, ಮನೆಯಲ್ಲಿ ಗುಡಿಕೈಗಾರಿಕೆ, ಉಪ್ಪಿನಕಾಯಿ ತಯಾರಿಕೆ ಮುಂತಾದ ಸ್ವಂತ ಉದ್ಯೋಗಕ್ಕಾಗಿ ಸಾಲ ಸೌಲಭ್ಯವನ್ನು ನೀಡುತ್ತಿದ್ದು, ಈ ನಿಟ್ಟಿನಲ್ಲಿ ಮಹಿಳೆಯರು, ಸ್ತಿçÃಶಕ್ತಿ ಸಂಘದ ಸದಸ್ಯೆಯರು ಇದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು. ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ಬ್ಯಾಂಕ್‌ನಿAದ ನೀಡುವ ಸಾಲ ಸೌಲಭ್ಯಗಳ ಕುರಿತು ಶನಿವಾರಸಂತೆ ಯೂನಿಯನ್ ಬ್ಯಾಂಕಿನ ಬಶೀರಾ ಹಾಗೂ ಕೆನರಾ ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿದರು. ವೇದಿಕೆಯಲ್ಲಿ ಗುಡುಗಳಲೆ ಕೆನರಾ ಬ್ಯಾಂಕಿನ ಹಿರಿಯ ವ್ಯವಸ್ಥಾಪಕ ಎಸ್. ಮಹಾರಾಜನ್, ಕೆನರಾ ಬ್ಯಾಂಕ್ ಕೊಡ್ಲಿಪೇಟೆ ಶಾಖೆಯ ವ್ಯವಸ್ಥಾಪಕ ಮದನ್, ಕೆನರಾ ಬ್ಯಾಂಕ್ ಆಲೂರು ಸಿದ್ದಾಪುರ ಶಾಖೆ ವ್ಯವಸ್ಥಾಪಕ ಪ್ರಗತ್ ಹಾಜರಿದ್ದರು.