ಮಡಿಕೇರಿ, ಆ. ೨೯: ಧರ್ಮಸ್ಥಳ ಕ್ಷೇತ್ರದ ಮೇಲೆ ನಡೆದಿರುವ ಷಡ್ಯಂತ್ರ ರಾಷ್ಟಿçÃಯ ಸುರಕ್ಷತೆಗೆ ಸವಾಲೊಡ್ಡುವ ಪ್ರಕರಣವಾಗಿರುವುದರಿಂದ ರಾಷ್ಟಿçÃಯ ತನಿಖಾ ಸಂಸ್ಥೆ (ಎನ್.ಐ.ಎ) ಹಾಗೂ ಜಾರಿ ನಿರ್ದೇಶನಾಲಯದ (ಇ.ಡಿ) ಮೂಲಕ ತನಿಖೆ ನಡೆಸಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್‌ನ ಕೊಡಗು ಜಿಲ್ಲಾ ಘಟಕ ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

ಧರ್ಮಸ್ಥಳ ದೇವಸ್ಥಾನದ ಮೇಲಿರುವ ಧಾರ್ಮಿಕ ಶ್ರದ್ಧಾಭಕ್ತಿಗೆ ಧಕ್ಕೆಯುಂಟುಮಾಡಬೇಕೆAಬ ಷಡ್ಯಂತ್ರದ ಹಿಂದೆ ರಾಷ್ಟç ವಿರೋಧಿಗಳ ಕೈವಾಡವಿದೆ. ಷಡ್ಯಂತ್ರದ ಮೂಲಕ ಅಂತರಾಷ್ಟಿçÃಯ ಮಟ್ಟದಲ್ಲಿ ಧರ್ಮಸ್ಥಳದ ಘನತೆಗೆ ಚ್ಯುತಿತಂದು ಮಾನಹರಣ ಮಾಡಬೇಕೆಂಬ ಉದ್ದೇಶದಿಂದ ವ್ಯವಸ್ಥಿತವಾಗಿ ಸಂಚನ್ನು ರೂಪಿಸಿದ್ದಾರೆ. ಭಾರತ ವಿರೋಧಿ ವರದಿಗಳಿಗೆ ಕುತಂತ್ರಗಳಿಗೆ ಖ್ಯಾತಿ ಪಡೆದಿರುವ ಕೆಲ ಅಂತರಾಷ್ಟಿçÃಯ ಮಾಧ್ಯಮಗಳಲ್ಲಿ ಈ ಒಟ್ಟು ಪ್ರಕರಣಗಳನ್ನು ಧರ್ಮಸ್ಥಳ ದೇವಸ್ಥಾನದ ಸುತ್ತ ಕೇಂದ್ರೀಕರಿಸಿ ವ್ಯವಸ್ಥಿತವಾದ ಅಪಪ್ರಚಾರ ಎಸಗಲಾಗಿದೆ. ಇದರ ಹಿಂದಿರುವ ಶಕ್ತಿಗಳು ಯಾವುದು ಎಂಬುದನ್ನು ತನಿಖೆ ನಡೆಸಬೇಕಿರುವುದು ಅತ್ಯವಶ್ಯಕವಾಗಿದೆ.

ಇದಿಷ್ಟೇ ಅಲ್ಲದೇ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ, ವಿವಿಧ ಸ್ವರೂಪದ ಎಐ ಕಿರುಚಿತ್ರಗಳನ್ನು ನಿರ್ಮಿಸಲಾಗಿದ್ದು, ಅವುಗಳನ್ನು ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸಿ ಸಾಮಾಜಿಕ ಮಾಧ್ಯಮದ ಮೂಲಕ ವ್ಯಾಪಕವಾಗಿ ಹರಿಬಿಡಲಾಗಿದೆ. ಈ ಕೃತ್ಯಗಳಿಗೆ ಸಾಕಷ್ಟು ಹಣ ವಿದೇಶದಿಂದ ಹರಿದುಬಂದಿದೆ ಎಂಬುದಾಗಿ ಮಾಧ್ಯಮಗಳಲ್ಲಿ ಸುದ್ದಿ ಹರಡಿದ್ದು, ಈ ಬಗ್ಗೆಯೂ ಸಮರ್ಪಕವಾಗಿ ತನಿಖೆ ನಡೆಯಬೇಕಿದೆ.

ದೇಶದಲ್ಲಿ ನಿಷೇಧಗೊಂಡಿರುವ ಪಿ.ಎಫ್.ಐ ಸಂಘಟನೆಯ ರಾಜಕೀಯ ಆಯಾಮವೆಂದೇ ಗುರುತಿಸಿಕೊಂಡಿರುವ ಎಸ್.ಡಿ.ಪಿ.ಐ ಎಂಬ ಮೂಲಭೂತವಾದಿ ರಾಜಕೀಯ ಪಕ್ಷ ಕೂಡ ಅಪಪ್ರಚಾರ ಗೈದವರ, ದೂರುದಾರರ, ಷಡ್ಯಂತ್ರಕಾರರ ಪರವಾಗಿ ಪ್ರತಿಭಟನೆ ನಡೆಸಿದ್ದು, ಜನಸಾಮಾನ್ಯರಲ್ಲಿ ಆತಂಕ ಮನೆಮಾಡಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ದೇಶದ ಕಾನೂನಿನ ವಿರುದ್ಧವಾಗಿ ಅಕ್ರಮ ಮತಾಂತರಕ್ಕೆ ಪ್ರಚೋದಿಸುವ ವಿದೇಶಿ ಕ್ರೆöÊಸ್ತ ಮಿಷನರಿಗಳೊಂದಿಗೆ ನಂಟು ಹೊಂದಿರುವ ಕೆಲ ಎನ್‌ಜಿಓಗಳ ಪಾತ್ರವನ್ನೂ ಮಾಧ್ಯಮಗಳು ವರದಿ ಮಾಡಿವೆ. ಈ ಎಲ್ಲಾ ಬೆಳವಣಿಗೆಗಳು ತೀವ್ರ ಸ್ವರೂಪದ್ದಾಗಿರುವುದಷ್ಟೇ ಅಲ್ಲದೆ ರಾಷ್ಟಿçÃಯ ಸುರಕ್ಷತೆಗೂ ಸವಾಲೊಡ್ಡುವಂತಹ ಪ್ರಕರಣ ಎಂಬುದು ಋಜುವಾತಾಗಿದೆ ಎಂದು ಪ್ರಮುಖರು ತಿಳಿಸಿದ್ದಾರೆ.

ಆದ್ದರಿಂದ ಕೇಂದ್ರ ಸರಕಾರ ತಕ್ಷಣ ಮಧ್ಯೆ ಪ್ರವೇಶಿಸಿ ರಾಷ್ಟಿçÃಯ ತನಿಖಾ ಸಂಸ್ಥೆ ಹಾಗೂ ಜಾರಿ ನಿರ್ದೇಶನಾಲಯದ ಮೂಲಕ ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.

ಮನವಿ ಸಲ್ಲಿಸುವ ಸಂದರ್ಭ ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಸಿ.ಕೆ. ಬೋಪಣ್ಣ, ಕಾರ್ಯದರ್ಶಿ ಪುದಿಯೊಕ್ಕಡ ರಮೇಶ್, ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ, ಉಪಾಧ್ಯಕ್ಷರಾದ ಡಿ. ನರಸಿಂಹ, ಪರಮೇಶ್ ಕೂತಿ, ಸಹ ಕಾರ್ಯದರ್ಶಿ ಯತೀಶ್ ನಂಜಪ್ಪ, ಧರ್ಮ ಪ್ರಸಾರ ಪ್ರಮುಖ್ ಶಾನ್ ಸೋಮಣ್ಣ, ಸೇವಾ ಪ್ರಮುಖ್ ರಘು ಆನಂದ, ವಿಧಿ ಪ್ರಕೋಷ್ಟದ ಹೇಮಚಂದ್ರ ಹಾಜರಿದ್ದರು.