ಕೂಡಿಗೆ, ಆ. ೨೯: ಕೂಡಿಗೆಯಲ್ಲಿರುವ ಸರಕಾರಿ ಕ್ರೀಡಾ ಶಾಲೆ ಪ್ರೌಢಶಾಲೆಯಲ್ಲಿ ರಾಷ್ಟಿçÃಯ ಕ್ರೀಡಾ ದಿನವನ್ನು ಆಚರಿಸಲಾಯಿತು. ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ರಾಷ್ಟಿçÃಯ ಕ್ರೀಡೆಯಲ್ಲಿ ಭಾಗವಹಿಸಿದ ಶಾಲೆಯ ಕ್ರೀಡಾಪಟುಗಳಾದ ಚೆಪ್ಪುಡಿರ ನಾಚಪ್ಪ, ಪ್ರತೀಕ್ ಯರಕಲ್, ಖುಷಿ, ಅರ್ಚನಾ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು.
ದಿನದ ಮಹತ್ವದ ಬಗ್ಗೆ ಶಾಲೆಯ ಹಾಕಿ ತರಬೇತುದಾರ ವೆಂಕಟೇಶ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸಿ, ಸಾಧನೆ ಮಾಡುವ ಮತ್ತು ತನ್ನ ಕೌಶಲ್ಯವನ್ನು ಪ್ರದರ್ಶಿಸುವ ವಿಷಯಕ್ಕೆ ಸಂಬAಧಿಸಿದAತೆ ಸಮಗ್ರ ಮಾಹಿತಿ ಒದಗಿಸಿದರು.
ಶಾಲೆಯ ಮುಖ್ಯೋಪಾಧ್ಯಾಯ ಮುರಳಿ ಮಾತನಾಡಿ, ಕಿರಿಯ ಕ್ರೀಡಾಪಟುಗಳು ಹಿರಿಯ ಕ್ರೀಡಾಪಟುಗಳ ಮಾರ್ಗದರ್ಶನದಲ್ಲಿ ಸಾಗಿ ತಮ್ಮ ಪ್ರತಿಭೆಯ ಮುಖೇನ ರಾಷ್ಟಿçÃಯ ಮತ್ತು ಅಂತರರಾಷ್ಟಿçÃಯ ಮಟ್ಟದಲ್ಲಿ ಗುರುತಿಸಲ್ಪಡುವ ಸಾಧನೆಯನ್ನು ಸಾಧಿಸಲು ಪಣತೊಡಬೇಕೆಂದು ಹೇಳಿದರು.
ಈ ಸಂದರ್ಭ ಕ್ರೀಡಾ ತರಬೇತುದಾರರಾದ ಸುರೇಶ್, ದಿನಮಣಿ, ಆಶ್ವಿತ, ಶಿಕ್ಷಕರಾದ ರಂಜಿನಿ, ಗೀತಾ, ಆಶಾ, ಸವಿತ, ಮೋಹನ್, ಸೇರಿದಂತೆ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು. ಕ್ರೀಡಾ ದಿನಾಚರಣೆ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗೆ ಹಾಕಿ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಇದರ