ಮಡಿಕೇರಿ, ಆ. ೨೮: ಮೊಬೈಲ್ ಅಂಗಡಿಗೆ ನುಗ್ಗಿ ಮೊಬೈಲ್‌ಗಳನ್ನು ಹಾಗೂ ನಗದನ್ನು ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಾ. ೨೪ ರಂದು ಮಧ್ಯರಾತ್ರಿ ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲಿರುವ ಫಲೀಲ್ ಎಂಬವರಿಗೆ ಸೇರಿದ ಹಾರ್ಮೊನಿಫೋನ್ಸ್ ಎಂಬ ಅಂಗಡಿಯ ರೋಲಿಂಗ್ ಶೆಟ್ರಸ್ ಮುರಿದು ವಿವಿಧ ಕಂಪನಿಯ ಅಂದಾಜು ೩೨ ಹೊಸ ಮೊಬೈಲ್ ಫೋನ್‌ಗಳು ಮತ್ತು ರೂ. ೩೦೦೦ ನಗದನ್ನು ಕಳವು ಮಾಡಲಾಗಿತ್ತು. ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಆರೋಪಿ ಪತ್ತೆಗಾಗಿ ಡಿವೈಎಸ್‌ಪಿ ಮಹೇಶ್ ಕುಮಾರ್ ಎಸ್., ಗೋಣಿಕೊಪ್ಪ ಸಿಪಿಐ ಶಿವರಾಜ ಆರ್. ಮುಧೋಳ್, ಗೋಣಿಕೊಪ್ಪ ಠಾಣಾಧಿಕಾರಿ ಪ್ರದೀಪ್ ಕುಮಾರ್ ಬಿ.ಕೆ. ಮತ್ತು ಸಿಬ್ಬಂದಿಗಳ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಂಡು ತಾ. ೨೮ ರಂದು ಆರೋಪಿ ಅಸ್ಸಾಂ ರಾಜ್ಯ ಮೂಲದ ಚಿಕ್ಕಮಗಳೂರು ಜಿಲ್ಲೆ ತೇಗೂರು ಗ್ರಾಮದ ನಿವಾಸಿಯಾದ ಜೋಹುರ್ ಆಲಿ (೨೮) ಎಂಬಾತನನ್ನು ಬಂಧಿಸಲಾಗಿದೆ. ಬಂಧಿತನಿAದ ೩೨ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.