ಸೋಮವಾರಪೇಟೆ, ಆ. ೨೯: ಕೇರಳದ ಮನ್ನಾರ್‌ನ ಮಹಾತ್ಮಾ ಬೋಟ್ ರೇಸ್ ಸಂಸ್ಥೆಯ ವತಿಯಿಂದ ನೀಡಲಾಗುವ ರಾಷ್ಟçಮಟ್ಟದ ಪ್ರತಿಷ್ಠಿತ ಮಹಾತ್ಮಾ ಗಾಂಧಿ ರಾಷ್ಟಿçÃಯ ಪ್ರಶಸ್ತಿಗೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಎಂ.ಎಸ್. ನಂದಕುಮಾರ್ ಭಾಜನರಾಗಿದ್ದು, ಸೆ. ೧ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ಕಳೆದ ೫೯ ವರ್ಷಗಳ ಹಿಂದೆ ಸ್ಥಾಪನೆಯಾದ ಬೋಟ್ ರೇಸ್ ಸಂಸ್ಥೆಯು ಪ್ರತಿ ವರ್ಷ ದೇಶದ ವಿವಿಧ ಕ್ಷೇತ್ರಗಳ ಸಮಾಜಸೇವಕ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದ್ದು, ಈವರೆಗೆ ಕರ್ನಾಟಕದಿಂದ ನಾಲ್ವರಿಗೆ ಮಾತ್ರ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಇದೀಗ ಕೊಡಗು ಕಾಂಗ್ರೆಸ್‌ನ ಉಪಾಧ್ಯಕ್ಷರೂ ಆಗಿರುವ ಹಿರಿಯ ಕಾಂಗ್ರೆಸ್ ಮುಖಂಡ ಎಂ.ಎಸ್. ನಂದಕುಮಾರ್ ಅವರು ಪ್ರಸಕ್ತ ಸಾಲಿನ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಸೆ. ೧ರಂದು ಕೇರಳದ ಮನ್ನಾರ್‌ನ ಪಂಪಾ ನದಿಯಲ್ಲಿ ನಡೆಯುವ ೫೯ನೇ ಮಹಾತ್ಮಾ ಜಲ ಕ್ರೀಡಾ ಸ್ಪರ್ಧೆಯ ಉದ್ಘಾಟನೆಯನ್ನು ರಾಷ್ಟಿçÃಯ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಉದ್ಘಾಟಿಸಲಿದ್ದು, ಪಶ್ಚಿಮ ಬಂಗಾಳದ ರಾಜ್ಯಪಾಲ ಡಾ. ಸಿ.ವಿ. ಆನಂದ್ ಬೋಸ್ ಅವರು ಸಾಧಕರಿಗೆ ಮಹಾತ್ಮಾ ಗಾಂಧಿ ರಾಷ್ಟಿçÃಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಂಸ್ಥೆಯ ಅಧ್ಯಕ್ಷ ಎನ್. ಶೈಲಜ್, ಸಂಸದ ಸುರೇಶ್, ಶ್ರೀ ನಾರಾಯಣ ಧರ್ಮ ಸಂಘದ ಮಾಜಿ ಅಧ್ಯಕ್ಷ ಪದ್ಮಶ್ರೀ ಸ್ವಾಮಿ ವಿಶುದಾನಂದ, ಶಾಸಕ ಉಮ್ಮನ್ ಚಾಂಡಿ ಸೇರಿದಂತೆ ಇತರರು