ವೀರಾಜಪೇಟೆ, ಆ. ೨೯: ವೀರಾಜಪೇಟೆಯಲ್ಲಿ ಕೈಲ್‌ಪೊಳ್ದ್ ಪ್ರಯುಕ್ತ ಕೂರ್ಗ್ಮ್ಯಾರ್ಕ್ಸ್ಮೆನ್ ವತಿಯಿಂದ ವರ್ಷಂಪ್ರತಿ ನಡೆಯುವ ತೆಂಗಿನ ಕಾಯಿಗೆ ಗುಂಡು ಹೊಡೆಯುವ ೧೦ನೇ ವರ್ಷದ ಸ್ಪರ್ಧೆ ಸೆಪ್ಟಂಬರ್ ೩ ರಂದು ಅಪರಾಹ್ನ ೧.೩೦ ಗಂಟೆಯಿAದ ವೀರಾಜಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ. ಮುಕ್ಕಾಟಿರ ಕಾರ್ಯಪ್ಪ ತಿಳಿಸಿದರು.

ವೀರಾಜಪೇಟೆ ಪ್ರೆಸ್‌ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಸ್ವರ್ಧೆಯಲ್ಲಿ ವಿಜೇತರಿಗೆ ಪ್ರಥಮ ಬಹುಮಾನ ರೂ. ೧೫ ಸಾವಿರ ಮತ್ತು ಟ್ರೋಫಿ ದ್ವಿತಿಯ ಬಹುಮಾನ ರೂ. ೧೦ ಸಾವಿರ ಮತ್ತು ಟ್ರೋಫಿ ಹಾಗೂ ಮೂರನೇ ಬಹುಮಾನ ರೂ. ೫ ಸಾವಿರ ಮತ್ತು ಟ್ರೋಫಿಯನ್ನು ನೀಡಲಾಗುತ್ತದೆ.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವೀರಾಜಪೇಟೆಯ ಆಶೀರ್ವಾದ್ ಆಸ್ವತ್ರೆಯ ಮುಖ್ಯಸ್ಥರಾದ ಡಾ. ಮಾತಂಡ ಅಯ್ಯಪ್ಪ ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗೆ ೮೩೧೭೩೯೭೧೮೪ ಈ ದೂರವಾಣಿ ಸಂಖ್ಯೆಯನ್ನು ಸಂರ್ಪಕಿಸುವAತೆ ಕೋರಿದರು.

ಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಕಂಡ್ರತAಡ ಪ್ರವೀಣ್ ಪೂವಯ್ಯ, ಕಾರ್ಯದರ್ಶಿ ಮಾದೆಯಂಡ ಸಂಪಿ ಪೂಣಚ್ಚ, ಜಂಟಿ ಕಾರ್ಯದರ್ಶಿ ನಾಯಡ ಶ್ಯಾಮ್ ಸೋಮಣ್ಣ, ಖಜಾಂಚಿ ಕೊಂಗAಡ ಧರ್ಮಜಾ ದೇವಯ್ಯ ಉಪಸ್ಥಿತರಿದ್ದರು.