ವೀರಾಜಪೇಟೆ, ಆ. ೨೫: ದೇಶದ ಮೌಲ್ಯ ನಾಶವಾಗಬೇಕಾದರೆ ಅಲ್ಲಿನ ಸಾಂಸ್ಕೃತಿಯನ್ನು ನಾಶಮಾಡ ಬೇಕು ಅಂತದೇ ಧಾಳಿ ವ್ಯವಸ್ಥಿತವಾಗಿ ಧರ್ಮಸ್ಥಳ ಕ್ಷೇತ್ರದ ಮೇಲೆ ನಡೆಯುತ್ತಿದೆ. ನಾವು ಸೋಲಬಾರದು ಸೋತರೆ ನಮ್ಮ ಅಸ್ಥಿತ್ವ ಉಳಿಸಿಕೊಳ್ಳಲಾಗದು. ಆದ್ದರಿಂದ ಧಾರ್ಮಿಕ ನಂಬಿಕೆಯನ್ನು ಉಳಿಸಿಕೊಂಡು ನಾವು ಗಟ್ಟಿಯಾಗಬೇಕು ಎಂದು ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ವೀರಾಜಪೇಟೆ ಮಹಿಳಾ ಸಮಾಜದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಸಾಮೂಹಿಕ ವರಲಕ್ಷಿö್ಮÃ ಪೂಜಾ ಸಮಾರಂಭದಲ್ಲಿ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎತ್ತರಕ್ಕೆ ಏರಿದ ಮೇರುವ್ಯಕ್ತಿಯನ್ನು ಕೆಳಕ್ಕೆ ಎಳೆಯುವ ಶಕ್ತಿಗಳು ಸದಾ ಇರುತ್ತವೆ. ಆದ್ದರಿಂದ ದೃಢ ನಂಬಿಕೆಯಿAದ ಮುನ್ನುಗ್ಗುವ ಕೆಲಸ ಮಾಡಬೇಕು ಎಂದು ಹೇಳಿದರು.

ಧರ್ಮಸ್ಥಳ ಯೋಜನೆಯ ಜಿಲ್ಲಾ ಜನಜಾಗೃತಿ ಸಮಿತಿಯ ಮಾಜಿ ಅಧ್ಯಕ್ಷ ಬಾನಂಗಡ ಅರುಣ ಮಾತನಾಡಿ, ಕೊಡಗಿನ ಜನರಿಗೂ ಧರ್ಮಸ್ಥಳಕ್ಕೂ ಹಿಂದಿನಿAದ ಅವಿನಾಭಾವ ಸಂಬAಧ ಇದೆ. ಜನರ ನಂಬಿಕೆಯ ಕ್ಷೇತ್ರಕ್ಕೆ ಕಳಂಕ ತಂದಿರುವ ಕೆಲಸ ನೋವಿನ ವಿಚಾರ ಎಂದರು. ಮಾಜಿ ಜಿ.ಪಂ. ಸದಸ್ಯೆ ಮನೆಯಪಂಡ ಕಾಂತಿ ಸತೀಶ್ ಮಾತನಾಡಿ, ಇಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅನೇಕರು ಸಾಮಾಜಿಕವಾಗಿ ಆರ್ಥಿಕವಾಗಿ ಸ್ವಾವಲಂಭಿಗಳಾಗಿ ಜೀವನ ಸಾಗಿಸುತ್ತಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿಗಳಿಗೆ ನೈತಿಕ ಬೆಂಬಲ ನೀಡಬೇಕಾಗಿರುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ತಾ. ೨೫ ರಂದು ವೀರಾಜಪೇಟೆ ಗಡಿಯಾರ ಕಂಬದ ಬಳಿ ನಡೆಯುವ ಪ್ರತಿಭಟನೆಗೆ ಬೆಂಬಲ ನೀಡುವಂತೆ ಸಂಘಟನೆಯವರನ್ನು ಕೋರಿದರು.

ವೀರಾಜಪೇಟೆ ಸರ್ವೋದಯ ವಿದ್ಯಾಸಂಸ್ಥೆಯ ನಿವೃತ ಪ್ರಾಂಶುಪಾಲರಾದ ಡಾ ಎಂ ವಾಣಿ ಧಾರ್ಮಿಕ ಪ್ರವಚನ ನೀಡಿದರು. ಮುಖ್ಯ ಅತಿಥಿಗಳಾಗಿದ್ದ ಕೊಡಗೂ ಜಿಲ್ಲಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಿರ್ದೇಶಕಿ ಲೀಲಾವತಿ ಸಭೆಯನ್ನು ಉದೇಶಿಸಿ ಮಾತನಾಡಿದರು. ಸಮಾರಂಭದಲ್ಲಿ ಸಾಮೂಹಿಕ ಶ್ರೀ ವರಲಕ್ಷಿö್ಮÃ ಪೂಜಾ ಸಮಿತಿ ಅಮ್ಮತ್ತಿ ವಲಯದ ಅಧ್ಯಕ್ಷೆ ಅಂಬಿಕ ರಾಜೇಶ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಮಹಿಳಾ ಸಮಾಜದ ಅಧ್ಯಕ್ಷೆ ಪಟ್ರಪಂಡ ಗೀತಾ ಬೆಳ್ಯಪ್ಪ, ವೀರಾಜಪೇಟೆ ಶ್ರೀ ಕ್ಷೇ.ಧ. ಗ್ರಾಮೀಣ ಯೋಜನೆಯ ಯೋಜನಾಧಿಕಾರಿ ಪಿ. ಹರೀಶ್, ಮತ್ತಿತರರು ಉಪಸ್ಥಿತರಿದ್ದರು.