ಸಿದ್ದಾಪುರ, ಆ. ೨೬: ರಾತ್ರಿ ಸಮಯದಲ್ಲಿ ಒಂಟಿ ಸಲಗ ಬೈಕ್ ಸವಾರನನ್ನು ಬೆನ್ನಟ್ಟಿ ಬೈಕ್‌ನ ಮೇಲೆ ದಾಳಿ ನಡೆಸಿದ್ದು ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸಿದ್ದಾಪುರ ಸಮೀಪದ ಮೈಸೂರು ರಸ್ತೆಯಲ್ಲಿ ಸಂಭವಿಸಿದೆ.

ಸಿದ್ದಾಪುರದಿAದ ಮಾಲ್ದಾರೆ ಗ್ರಾಮಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಮೈಸೂರು ರಸ್ತೆಯ ಬಳಿ ಕಾಫಿ ತೋಟದಿಂದ ಒಂಟಿ ಸಲಗ ಹಠಾತ್ತನೆ ಬೈಕ್ ಎದುರು ಬಂದಿದ್ದು ಬೈಕ್ ಸವಾರನ ಮೇಲೆ ದಾಳಿ ನಡೆಸಲು ಮುಂದಾಗಿದೆ.

ಈ ಸಂದರ್ಭ ಬೈಕ್ ಸವಾರ ಅಪಾಯದಿಂದ ಪಾರಾಗಲು ಬೈಕ್ ಬಿಟ್ಟು ಕಾಫಿ ತೋಟದೊಳಗೆ ಓಡಿಹೋಗಿ ತಪ್ಪಿಸಿಕೊಂಡಿದ್ದಾರೆ. ಕೋಪಗೊಂಡ ಸಲಗವು ಬೈಕ್‌ನ ಮೇಲೆ ದಾಳಿ ನಡೆಸಿ ಕಾಲಿನಿಂದ ತುಳಿದು ಹಾನಿಗೊಳಿಸಿದೆ ಬೈಕ್ ಜಖಂಗೊAಡಿದೆ. ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಪಾಯದಿಂದ ಪಾರಾಗಿದ್ದಾರೆ.

ಕೂಡಲೇ ಸಲಗವನ್ನು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕಾಡಾನೆ ದಾಳಿಗೆ ಸಿಲುಕಿ ಹಾನಿಗೊಂಡಿರುವ ಬೈಕನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿದರು. ಕಾಡಾನೆ ರಾತ್ರಿ ಸಮಯದಲ್ಲಿ ಬೈಕ್ ಸವಾರನನ್ನು ಬೆನ್ನಟ್ಟಿದ ದೃಶ್ಯವನ್ನು ವಾಹನ ಚಾಲಕರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.