ವೀರಾಜಪೇಟೆ, ಆ. ೨೬: ವೀರಾಜಪೇಟೆ ಸಮೀಪದ ವಿ.ಬಾಡಗ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ವಿವಿಧ ಕ್ರೀಡೆಗಳ ತರಬೇತಿ ಕೇಂದ್ರದ ಸ್ಥಳ ಹಾಗೂ ಕಾಮಗಾರಿಯನ್ನು ವೀರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು ಪರಿಶೀಲಿಸಿದರು.

ಪರಿಶೀಲನೆ ಹಾಗೂ ರೂಪುರೇಷೆ ಬಗ್ಗೆ ಚರ್ಚೆ ಬಳಿಕ ಮಾತನಾಡಿದ ಶಾಸಕರು, ಸ್ಥಳೀಯ ಕ್ರೀಡಾ ಪ್ರತಿಭೆಗಳ ಅನುಕೂಲಕ್ಕೆಂದು ಈ ಕ್ರೀಡಾ ತರಬೇತಿ ಕೇಂದ್ರ ನಿರ್ಮಾಣಗೊಳ್ಳುತ್ತಿದ್ದು, ಕಾಮಗಾರಿಯ ಬಗ್ಗೆ ವಿಶೇಷ ಮುತುವರ್ಜಿ ವಹಿಸಲಾಗಿದೆ. ಗುಣಮಟ್ಟದ ಕ್ರೀಡಾಂಗಣ ಅತೀ ಶೀಘ್ರದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಲಭ್ಯವಾಗುವಂತಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭ ಜಿಲ್ಲಾಧಿಕಾರಿ ವೆಂಕಟ್‌ರಾಜಾ, ವೀರಾಜಪೇಟೆ ತಹಶೀಲ್ದಾರ್ ಪ್ರವೀಣ್ ಪಿ.ಎ. ಹಾಗೂ ಪೊನಂಪೇಟೆ ತಹಶೀಲ್ದಾರ್ ಮೋಹನ್ ಕಂದಾಯ ಇಲಾಖೆಯ ಅಧಿಕಾರಿ ಹರೀಶ್ ಹಾಗೂ ಸಿಬ್ಬಂದಿಗಳು, ಅರಣ್ಯ ಇಲಾಖೆ ಅಧಿಕಾರಿಗಳು, ಪಕ್ಷದ ಪ್ರಮುಖರಾದ ಕಂಜಿತAಡ ಪೂವಣ್ಣ, ಗಿಣಿ ಮೊಣ್ಣಪ್ಪ, ಕೊಂಗAಡ ಕಾಶಿ ಕಾರ್ಯಪ್ಪ, ಗಿರೀಶ್ ಮುದ್ದಯ್ಯ, ಧವನ್ ದೇವಯ್ಯ, ಪ್ರಕಾಶ್ ಪೂವಯ್ಯ, ಕುಂಡಚೀರ ಮಂಜು ದೇವಯ್ಯ, ಅಯುಬ್. ಮೊದಲಾದವರು ಇದ್ದರು.