ನಾಪೋಕ್ಲು, ಆ. ೨೬: ಇಲ್ಲಿನ ಭಗವತಿ ಯುವಕ ಸಂಘದ ವತಿಯಿಂದ ಕೈಲ್‌ಮುಹೂರ್ತ ಹಬ್ಬದ ಕ್ರೀಡಾಕೂಟವನ್ನು ತಾ. ೨೮ ರಂದು ಆಯೋಜಿಸಲಾಗಿದೆ.

ಭಗವತಿ ಯುವಕ ಸಂಘದ ಅಧ್ಯಕ್ಷ ಬೊಪ್ಪಂಡ ವೀರನ್ ಮುದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ನಾಪೋಕ್ಲು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಧ್ಯಾಹ್ನ ೧:೩೦ ಗಂಟೆಗೆ ಆಟೋಟ ಸ್ಪರ್ಧೆ ಆರಂಭಗೊಳ್ಳಲಿದ್ದು ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಲ್ ಅಜ್ಜೆಟ್ಟಿರ ಎಸ್. ಪೂವಯ್ಯ ಹಾಗೂ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕಂಗಾAಡ ಶಶಿ ಮಂದಣ್ಣ ಉಪಸ್ಥಿತರಿರುವರು.

ಪ್ರಾಥಮಿಕ ಶಾಲಾ ಹಿರಿಯ ಬಾಲಕರಿಗೆ, ಬಾಲಕಿಯರಿಗೆ, ಕಿರಿಯ ಬಾಲಕರಿಗೆ, ಪುಟಾಣಿಗಳಿಗೆ, ಪ್ರೌಢಶಾಲಾ ಬಾಲಕ, ಬಾಲಕಿಯರಿಗೆ, ಓಟದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸಾರ್ವಜನಿಕ ಮಹಿಳೆಯರಿಗೆ ಕಣ್ಣು ಕಟ್ಟಿ ಮಡಿಕೆ ಒಡೆಯುವುದು, ನಿಂಬೆಹಣ್ಣಿನ ಓಟ, ಅದೃಷ್ಟದ ಆಟ, ಬಿಸ್ಕೆಟ್ ತಿನ್ನುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸಾರ್ವಜನಿಕರಿಗೆ ತೆಂಗಿನಕಾಯಿಗೆ ಗುಂಡು ಒಡೆಯುವುದು, ಭಾರದ ಕಲ್ಲು ಎಸೆತ, ರಸ್ತೆ ಓಟ ಸ್ಪರ್ಧೆ ಗಳನ್ನು ಏರ್ಪಡಿಸಲಾಗಿದೆ. ಗಂಡಸರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ. ವಾಲಗತ್ತಾಟ್ ಸ್ಪರ್ಧೆಯನ್ನು ಸಾರ್ವಜನಿಕರಿಗೆ ಆಯೋಜಿಸಲಾಗಿದೆ.